ಚೆನ್ನೈ: ತಮಿಳುನಾಡು ಸರ್ಕಾರದ ಕೋವಿಡ್-19 ಪರಿಹಾರ ನಿಧಿಗೆ ಸಾರ್ವಜನಿಕರು, ಸಂಘ-ಸಂಸ್ಥೆಗಳಿಂದ 134 ಕೋಟಿ ರೂಪಾಯಿ ದೇಣಿಗೆ ಹರಿದು ಬಂದಿದೆ. ಟಾಟಾ ಗ್ರೂಪ್ ನೀಡಿರುವ ಕೊರೊನಾ ವೈರಸ್ ಟೆಸ್ಟಿಂಗ್ಗೆ ಬಳಸಲಾಗುವ 8 ಕೋಟಿ ರೂ. ಮೌಲ್ಯದ 40,000 ಪಾಲಿಮೆರೇಸ್ ಚೇನ್ ರಿಯಾಕ್ಷನ್ (ಪಿಸಿಆರ್) ಕಿಟ್ಗಳೂ ಇದರಲ್ಲಿ ಸೇರಿವೆ.
ತಮಿಳುನಾಡು ಕೋವಿಡ್ ಪರಿಹಾರ ನಿಧಿಗೆ 134 ಕೋಟಿ ರೂ. ದೇಣಿಗೆ ಸಂಗ್ರಹ
ತಮಿಳುನಾಡು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ (CMPRF) 134.63 ಕೋಟಿ ರೂ. ದೇಣಿಗೆ ಸಂದಾಯವಾಗಿದೆ. ಪರಿಹಾರ ನಿಧಿಗೆ ದೇಣಿಗೆ ಸಲ್ಲಿಸಿದ ಸಾರ್ವಜನಿಕರು, ಸಂಘ-ಸಂಸ್ಥೆಗಳು ಹಾಗೂ ವಿಶೇಷವಾಗಿ ಟಾಟಾ ಗ್ರೂಪ್ಗೆ ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಅಭಿನಂದನೆ ಸಲ್ಲಿಸಿದ್ದಾರೆ.
TN collects Rs 134 cr as donations
ಸರ್ಕಾರಿ ಸಿಬ್ಬಂದಿ, ಕಂಪನಿಗಳು, ಬ್ಯಾಂಕ್, ಟ್ರಸ್ಟ್ಗಳು, ಸಂಘ-ಸಂಸ್ಥೆಗಳು ಹಾಗೂ ಸೆಲೆಬ್ರಿಟಿಗಳು ಮುಖ್ಯಮಂತ್ರಿಗಳ ಸಾರ್ವಜನಿಕ ಪರಿಹಾರ ನಿಧಿಗೆ (CMPRF) 134.63 ಕೋಟಿ ರೂ. ದೇಣಿಗೆ ಸಂದಾಯ ಮಾಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪರಿಹಾರ ನಿಧಿಗೆ ದೇಣಿಗೆ ಸಲ್ಲಿಸಿದ ಸಾರ್ವಜನಿಕರು, ಸಂಘ-ಸಂಸ್ಥೆಗಳು ಹಾಗೂ ವಿಶೇಷವಾಗಿ ಟಾಟಾ ಗ್ರೂಪ್ಗೆ ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಅಭಿನಂದನೆ ಸಲ್ಲಿಸಿದ್ದಾರೆ.