ಕರ್ನಾಟಕ

karnataka

ETV Bharat / bharat

ದೇಶದಲ್ಲಿ ಟಿಕ್​ ಟಾಕ್​ ಬ್ಯಾನ್​: ಕೇಂದ್ರದ ವಿರುದ್ಧ ನಟಿ, ಸಂಸದೆ ನುಸ್ರತ್​ ಜಹಾನ್​ ವಾಗ್ದಾಳಿ! - ಸಂಸದೆ ನುಸ್ರತ್​ ಜಹಾನ್​

ಟಿಕ್ ​ಟಾಕ್​ ಬ್ಯಾನ್​ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ಹಠಾತ್​ ನಿರ್ಧಾರ ಎಂದು ಟಿಎಂಸಿ ಸಂಸದೆ ನುಸ್ರತ್​ ಜಹಾನ್​ ವಾಗ್ದಾಳಿ ನಡೆಸಿದರು.

TMC's Nusrat Jahan
TMC's Nusrat Jahan

By

Published : Jul 1, 2020, 4:03 PM IST

Updated : Jul 1, 2020, 6:06 PM IST

ನವದೆಹಲಿ:ಟಿಕ್​ ಟಾಕ್​ ಸೇರಿದಂತೆ ಚೀನಾದ 59 ಆ್ಯಪ್​ಗಳ ಮೇಲೆ ಕೇಂದ್ರ ಸರ್ಕಾರ ನಿಷೇಧ ಹೇರಿ ಮಹತ್ವದ ನಿರ್ಧಾರ ಕೈಗೊಂಡಿದ್ದು, ಇದಕ್ಕೆ ದೇಶಾದ್ಯಂತ ಪರ-ವಿರೋಧ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಸಂಸದೆ ನುಸ್ರತ್​ ಜಹಾನ್​ ವಾಗ್ದಾಳಿ!

ಇದೀಗ ನಟಿ, ತೃಣಮೂಲ ಕಾಂಗ್ರೆಸ್​​ನ ಸಂಸದೆ ನುಸ್ರತ್​ ಜಹಾನ್​ ಕೂಡ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಟಿಕ್​ ಟಾಕ್​ ಒಂದು ಮನೋರಂಜನಾ ಅಪ್ಲಿಕೇಶನ್​. ಹಠಾತ್​ ಬ್ಯಾನ್​ ಮಾಡಿರುವ ಕೇಂದ್ರದ ನಿರ್ಧಾರ ಸರಿಯಲ್ಲ. ಇದಕ್ಕಾಗಿ ನೀವು ಯಾವ ರೀತಿಯ ನೀತಿ ಮಾಡಿದ್ದೀರಿ? ಬ್ಯಾನ್​ ಮಾಡಿರುವುದರಿಂದ ಅನೇಕ ಜನರು ನಿರುದ್ಯೋಗಿಗಳಾಗಿದ್ದಾರೆ. ಈ ಹಿಂದೆ ನೋಟ್​ ಬ್ಯಾನ್​ ಮಾಡಿದಾಗ ನಿರ್ಮಾಣವಾದಂತಹ ಪರಿಸ್ಥಿತಿ ಇದೀಗ ನಿರ್ಮಾಣವಾಗಿದೆ ಎಂದಿರುವ ಸಂಸದೆ, ಈ ನಿರ್ಧಾರದಿಂದ ನನಗೆ ಯಾವುದೇ ತೊಂದರೆ ಇಲ್ಲ. ಆದರೆ ಈ ಮೇಲಿನ ಪ್ರಶ್ನೆಗಳಿಗೆ ಯಾರು ಉತ್ತರಿಸುತ್ತಾರೆ ಎಂದು ಕೇಳಿದ್ದಾರೆ.

ಕೋಲ್ಕತ್ತಾದ ಇಸ್ಕಾನ್​​ನಲ್ಲಿ ಆಯೋಜನೆ ಮಾಡಿದ್ದ ಉಲ್ಟಾ ರಥಯಾತ್ರೆಯಲ್ಲಿ ಭಾಗಿಯಾಗಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಕಳೆದ ಸೋಮವಾರ ಕೇಂದ್ರ ಸರ್ಕಾರ ದಿಢೀರ್​ ಆಗಿ ಟಿಕ್​ ಟಾಕ್​ ಬ್ಯಾನ್​ ಮಾಡಿದ್ದು, ಈ ನಿರ್ಧಾರದ ವಿರುದ್ಧ ಈಗಾಗಲೇ ಅನೇಕರು ತಮ್ಮ ಅಭಿಪ್ರಾಯ ಹೊರ ಹಾಕಿದ್ದಾರೆ.

Last Updated : Jul 1, 2020, 6:06 PM IST

ABOUT THE AUTHOR

...view details