ಕೋಲ್ಕತ್ತಾ: ದುರ್ಗಾ ಪೂಜೆಯಲ್ಲಿ ಭಾಗವಹಿಸಿ ಹಲವರ ಟೀಕೆಗೆ ಗುರಿಯಾಗಿದ್ದ ಟಿಎಂಸಿ ಸಂಸದೆ ನುಸ್ರತ್ ಜಹನ್ ಇಂದು ದುರ್ಗಾ ಪೂಜೆ ಪ್ರಯುಕ್ತ ನಡೆದ 'ಸಿಂಧೂರ್ ಖೇಲ' ಆಚರಣೆಯಲ್ಲಿ ಪಾಲ್ಗೊಂಡಿದ್ದಾರೆ.
ಪತಿ ನಿಖಿಲ್ ಜೈನ್ ಅವರೊಂದಿಗೆ ಆಗಮಿಸಿದ ನುಸ್ರತ್ ಜಹನ್ ಸಿಂಧೂರ್ ಖೇಲ ಆಚರಣೆಯಲ್ಲಿ ಪಾಲ್ಗೊಂಡಿದ್ದರು. ಇದೇ ವೇಳೆ, ಮಾತನಾಡಿದ ಅವರು ನಾನು ದೇವರ ವಿಶೇಷ ಮಗಳು. ನಾನು ಎಲ್ಲಾ ಹಬ್ಬವನ್ನ ಆಚರಿಸುತ್ತೇನೆ. ಮಾನವೀಯತೆ ಮತ್ತು ಪರಸ್ಪರ ಪ್ರೀತಿಯನ್ನ ಗೌರವಿಸುತ್ತೇನೆ. ನನಗೆ ನನ್ನ ಸಂತೋಷ ಮುಖ್ಯ ಯಾವುದೇ ವಿವಾದಗಳು ನನಗೆ ಮುಖ್ಯವಲ್ಲ ಎಂದಿದ್ದಾರೆ.