ಕೋಲ್ಕತ್ತಾ:ಕೊರೊನಾ ಸೋಂಕಿಗೆ ಒಳಗಾಗಿ ಪಶ್ಚಿಮ ಬಂಗಾಳದ ಪೂರ್ವ ಮಿಡ್ನಾಪುರ್ ಜಿಲ್ಲೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಶಾಸಕ ಸಮರೇಶ್ ದಾಸ್ ಇಂದು ನಿಧನರಾಗಿದ್ದಾರೆ.
ಕೋವಿಡ್ಗೆ ಟಿಎಂಸಿ ಶಾಸಕ ಬಲಿ... ಸಿಎಂ ಮಮತಾ ಬ್ಯಾನರ್ಜಿ ಸಂತಾಪ - ತೃಣಮೂಲ ಕಾಂಗ್ರೆಸ್ (ಟಿಎಂಸಿ ) ಶಾಸಕ, ಹಿರಿಯ ನಾಯಕ ಸಮರೇಶ್ ದಾಸ್
ಕೊರೊನಾಗೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಶಾಸಕ ಸಮರೇಶ್ ದಾಸ್ ಬಲಿಯಾಗಿದ್ದು, ಇವರ ಸಾವಿಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಂತಾಪ ಸೂಚಿಸಿದ್ದಾರೆ.
![ಕೋವಿಡ್ಗೆ ಟಿಎಂಸಿ ಶಾಸಕ ಬಲಿ... ಸಿಎಂ ಮಮತಾ ಬ್ಯಾನರ್ಜಿ ಸಂತಾಪ MLA Samaresh Das](https://etvbharatimages.akamaized.net/etvbharat/prod-images/768-512-8448841-thumbnail-3x2-megha.jpg)
ಕೋವಿಡ್ಗೆ ಟಿಎಂಸಿ ಶಾಸಕ ಬಲಿ
ಏಗ್ರಾ ವಿಧಾನಸಭಾ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಸಮರೇಶ್ ದಾಸ್ (76), ತಮ್ಮ ಕೋವಿಡ್ ವರದಿ ಪಾಸಿಟಿವ್ ಬಂದ ಬಳಿಕ ಆಸ್ಪತ್ರೆಗೆ ದಾಖಲಾಗಿದ್ದರು. ಇವರು ಹೃದಯ ಮತ್ತು ಕಿಡ್ನಿ ಸಮಸ್ಯೆಯಿಂದ ಕೂಡ ಬಳಲುತ್ತಿದ್ದರು.
ಶಾಸಕನ ಸಾವಿಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಪಕ್ಷದ ಮುಖಂಡರು ಸಂತಾಪ ಸೂಚಿಸಿದ್ದಾರೆ.