ನವದೆಹಲಿ:ಉತ್ತರ ಪ್ರದೇಶ ಹಾಗೂ ಉತ್ತರಾಖಂಡ್ ಮಾಜಿ ಸಿಎಂ ಪುತ್ರ ರೋಹಿತ್ ಶೇಖರ್ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ರೋಹಿತ್ ಪತ್ನಿ ಅಪೂರ್ವ ತಿವಾರಿ ಅವರನ್ನ ದೆಹಲಿ ಕ್ರೈಂ ಬ್ರಾಂಚ್ ಪೊಲೀಸರು ಬಂಧಿಸಿದ್ದಾರೆ.
ಏಪ್ರಿಲ್ 21 ರಂದು ದೆಹಲಿ ಅಪರಾಧ ವಿಭಾಗದ ಪೊಲೀಸರು ರೋಹಿತ್ ಪತ್ನಿ ಅಪೂರ್ವಳನ್ನ ವಶಕ್ಕೆ ಪಡೆದಿದ್ದರು. ಪತಿ ಸಾವಿನ ಕುರಿತಂತೆ ಸುದೀರ್ಘ ವಿಚಾರಣೆ ನಡೆಸಿದ್ದರು. ಇದೀಗ ಅವರನ್ನು, ಪೊಲೀಸರು ಬಂಧಿಸಿದ್ದಾರೆ.