ನವದೆಹಲಿ: ತೀಸ್ ಹಜಾರಿ ನ್ಯಾಯಾಲಯದ ಸಂಕೀರ್ಣ ಆವರಣದಲ್ಲಿ ನಡೆದ ವಕೀಲರ ಮತ್ತು ಪೊಲೀಸರ ನಡುವಿನ ಘರ್ಷಣೆಯಲ್ಲಿ ಸ್ಥಳದಲ್ಲಿದ್ದ ಮಹಿಳಾ ಡಿಸಿಪಿ ಅವರನ್ನು ಕೆಲ ವಕೀಲರು ನಿಂದಿಸಿದ್ದಾರೆ ಎಂಬುದು ಇಬ್ಬರು ಪೊಲೀಸರ ಮಧ್ಯೆ ನಡೆದ ದೂರವಾಣಿ ಸಂಭಾಷಣೆಯಲ್ಲಿ ದಾಖಲಾಗಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ತೀವ್ರ ಹತಾಶೆಗೆ ಒಳಗಾದ ಕೆಲ ವಕೀಲರು ಕಠಿಣವಾಗಿ ವರ್ತಿಸಿ ಪಿಎಸ್ಒನ (ವೈಯಕ್ತಿಕ ಭದ್ರತಾ ಅಧಿಕಾರಿ) ರಿವಾಲ್ವರ್ ಅನ್ನು ಕಸಿದುಕೊಳ್ಳಲು ಯತ್ನಿಸಿದ್ದರು. ಪಿಎಸ್ಒ ಅವರನ್ನು ಕಬ್ಬಿಣದ ಸರಪಳಿಗಳಿಂದ ಹೊಡೆದು ಪ್ರಜ್ಞಾಹೀನನಾಗಿ ಮಾಡಿದರು ಎಂಬ ದೂರವಾಣಿ ಸಂಭಾಷಣೆಯ ಕ್ಲಿಪ್ ಮಹಿಳಾ ಡಿಸಿಪಿಯ ಗಾಯಗೊಂಡ ಪಿಎಸ್ಒ ಮತ್ತು ಅವರ ಕಚೇರಿ ಸಿಬ್ಬಂದಿ ನಡುವೆ ನಡೆದಿದೆ ಎಂದು ವಿಶ್ವಾಸಾರ್ಹ ಮೂಲಗಳು ತಿಳಿಸಿವೆ.
ಘರ್ಷಣೆಯ ವೇಳೆ ವಕೀಲರು ಹೇಗೆ ತೀವ್ರವಾಗಿ ಹಲ್ಲೆ ನಡೆಸಿದರು. ಇದರ ಪರಿಣಾಮವಾಗಿ ಪಿಎಸ್ಒ ಅವರ ಭುಜದ ಮೂಳೆ ಮುರಿತ, ಪಕ್ಕೆಲುಬು ಮತ್ತು ಕೈಗಳಲ್ಲಿ ಹೇಗೆ ಗಾಯಗಳಾಗಿವೆ ಎಂಬುದನ್ನು ಪಿಎಸ್ಒ ತನ್ನ ಸಹೋದ್ಯೋಗಿಗೆ ದೂರವಾಣಿಯಲ್ಲಿ ತಿಳಿಸಿದ್ದಾನೆ ಎನ್ನಲಾಗ್ತಿದೆ.
ನಾನು ವಕೀಲರ ಗುಂಪಿನಿಂದ ಸುತ್ತುವರಿದ ಮೇಡಮ್ (ಮಹಿಳಾ ಡಿಸಿಪಿ) ಅವರನ್ನು ರಕ್ಷಿಸಲು ಪ್ರಯತ್ನಿಸಿದೆ. ಆಗ ಕೆಲ ವಕೀಲರು ಡಿಸಿಪಿ ಅವರನ್ನು ನಿಂದಿಸಿದರು. ಮಹಿಳಾ ಅಧಿಕಾರಿಯ ಕಾಲರ್ ಅನ್ನು ಎಳೆಯಲು ಪ್ರಯತ್ನಿಸಿದರು. ನಾನು ಅವರನ್ನು ರಕ್ಷಿಸಲು ಹತ್ತಿರ ಹೋದಾಗ, ಅವರು ನನ್ನ ಪಿಸ್ತೂಲ್ ಅನ್ನು ಕಸಿದುಕೊಳ್ಳಲು ಪ್ರಯತ್ನಿಸಿದರು ಎಂದು ಹಿಂಸಾಚಾರದ ವಿವರಗಳನ್ನು ಬಹಿರಂಗಪಡಿಸಿದ್ದಾರೆ.
ಅವರು (ವಕೀಲರು) ಸುಮಾರು 300-400 ರಷ್ಟಿದ್ದರು ಮತ್ತು ಅವರು ನಮ್ಮನ್ನು ಹೊಡೆಯಲು ಆರಂಭಿಸಿದಾಗ ಮೇಡಂ ಸೇರಿ ನಾವು ಕೇವಲ 4-5 ಪೊಲೀಸರು ಮಾತ್ರ ಇದ್ದೆವು. ಮೊದಲು ಓರ್ವ ಬೆನ್ನಿಗೆ ಕಬ್ಬಿಣದ ಸರಪಳಿಯಿಂದ ಹೊಡೆದ. ನಾನು ತಕ್ಷಣ ಪಿಸ್ತೂಲ್ ಅನ್ನು ಲಾಕ್ ಮಾಡಿದೆ. ತಲೆಗೆ ಕಬ್ಬಿಣದ ರಾಡ್ನಿಂದ ಹೊಡೆದಾಗ ಅದನ್ನು ನನ್ನ ಬೆಲ್ಟ್ನಲ್ಲಿ ಸೇರಿಸಲು ಪ್ರಯತ್ನಿಸಿದೆ. ನಾನು ಜಾರಿಬೀಳುತ್ತಿದ್ದಂತೆ, ಅವರಲ್ಲಿ ಕೆಲವರು ನನ್ನ ಮುಖಕ್ಕೆ ಒದ್ದರು ಎಂದು ಪಿಎಸ್ಒ ಹೇಳಿರುವುದು ದೂರವಾಣಿಯಲ್ಲಿದೆ ಎನ್ನಲಾಗುತ್ತಿದೆ.
ಅಷ್ಟೊಂದು ಜನಸಮೂಹ ಕ್ರೂರವಾಗಿ ದೌರ್ಜನ್ಯಕ್ಕೊಳಗಾಗುತ್ತಿದ್ದಾಗಲೂ ಇಲಾಖೆಯ ಓರ್ವ ಅಧಿಕಾರಿಯೂ ಸಹ 'ತು ಜಿಂದಾ ಹೈ .... ಯಾ ಟಿಕ್ ಹೈ ... ಮೇರಾ ಪೊಲೀಸ್ ಕಿ ನೌಕ್ರಿ ಸೇ ಮಾನ್ ಉಟ್ ಗಯಾ' (ಜೀವಂತವಾಗಿ, ನೀವು ಸರಿಯಾಗಿದ್ದೀರಾ? ನಾನು ಈಗ ಪೊಲೀಸ್ ಸೇವೆಯ ಬಗ್ಗೆ ಭ್ರಮನಿರಸನಗೊಂಡಿದ್ದೇನೆ) ಎಂದು ಕೇಳಲು ತಲೆಕೆಡಿಸಿಕೊಳ್ಳಲಿಲ್ಲ ಎಂದು ಹೇಳಿದ್ದಾರೆ ಎಂಬುದು ದೂರವಾಣಿ ಟೇಪ್ನಲ್ಲಿದೆ ಎಂದು ತಿಳಿದುಬಂದಿದೆ.