ತಿರುಪ್ಪುರ್ (ತಮಿಳುನಾಡು):ಕೊರೊನಾ ಸೋಂಕು ಹರಡದಂತೆ ತಡೆಯಲು ಎಲ್ಲಾ ರಾಜ್ಯಗಳು ತಮ್ಮದೇ ಆದ ಕ್ರಮಗಳನ್ನು ತೆಗೆದುಕೊಂಡಿದೆ. ಈಗ ತಮಿಳುನಾಡಿನ ತಿರುಪ್ಪುರ್ ಜಿಲ್ಲಾಡಳಿತ ಸೋಂಕು ಹರಡದಂತೆ ತಡೆಯಲು ಸೋಂಕು ನಿವಾರಕ ಸುರಂಗವನ್ನು ಅನುಷ್ಠಾನಗೊಳಿಸಿದೆ. ಭಾರತದಲ್ಲೇ ಇದು ಮೊದಲ ಸೋಂಕು ನಿವಾರಕ ಸುರಂಗವಾಗಿದ್ದು ತಿರುಪ್ಪುರ್ ಜಿಲ್ಲಾಧಿಕಾರಿ ಕೆ.ವಿಜಯ ಕಾರ್ತಿಕೇಯನ್ ಉದ್ಘಾಟಿಸಿದ್ದಾರೆ.
ಉಝಾವರ್ ಸಂಥೈ ಪ್ರದೇಶದಲ್ಲಿರುವ ಈ ಸೋಂಕು ನಿವಾರಕ ಘಟಕದಲ್ಲಿ ಸೋಡಿಯಂ ಹೈಪೋಕ್ಲೋರೈಟ್ ಅನ್ನು ಉಪಯೋಗಿಸಲಾಗುತ್ತಿದ್ದು, ವೈದ್ಯರು ಪರೀಕ್ಷಿಸಿದ್ದಾರೆ ಎಂದು ವಿಜಯ್ ಕಾರ್ತಿಕೇಯನ್ ತಿಳಿಸಿದ್ದಾರೆ.