ಕರ್ನಾಟಕ

karnataka

ETV Bharat / bharat

ಗಸ್ತು ತಿರುಗಲು ಬಂದು ಕೃಷಿಕನಾದ ಎಸ್​ಪಿ..!! - ಚಿತ್ತೂರು

ತಿರುಪತಿ ನಗರ ಪೊಲೀಸ್ ವರಿಷ್ಠಾಧಿಕಾರಿ ಅವುಲಾ ರಮೇಶ್ ರೆಡ್ಡಿ , ಜನರು ಲಾಕ್ ಡೌನ್​ ಕ್ರಮ ಅನುಸರಿಸುತ್ತಿದ್ದಾರೆಯೇ ಎಂಬುದನ್ನು ಪರಿಶೀಲಿಸಲು ಗಸ್ತು ಬಂದಿದ್ದರು. ಈ ವೇಳೆ, ರೈತರು ಜಮೀನಿನಲ್ಲಿ ಕೆಲಸ ಮಾಡುವುದನ್ನ ನೋಡಿ ತಾವೂ ಕೆಲಕಾಲ ರೈತರಾಗಿ ಕೆಲಸ ಮಾಡಿದ್ದಾರೆ.

Tirupati (Urban) SP takes part in agricultural work with farmers while out on patrol
ತಿರುಪತಿ ನಗರ ಪೊಲೀಸ್ ವರಿಷ್ಠಾಧಿಕಾರಿ ಅವುಲಾ ರಮೇಶ್ ರೆಡ್ಡಿ

By

Published : May 13, 2020, 3:41 PM IST

ಚಿತ್ತೂರು (ಆಂಧ್ರಪ್ರದೇಶ):ತಿರುಪತಿ ನಗರ ಪೊಲೀಸ್ ವರಿಷ್ಠಾಧಿಕಾರಿ ಅವುಲಾ ರಮೇಶ್ ರೆಡ್ಡಿ ಅವರು ಗಸ್ತು ತಿರುಗುತ್ತಿದ್ದ ವೇಳೆ ಕೃಷಿ ಮಾಡುತ್ತಿದ್ದ ರೈತರನ್ನ ನೋಡಿ ತಾವೂ ಕೂಡ ಭಾಗಿಯಾಗಿದ್ದಾರೆ.

ಜನರು ಲಾಕ್ ಡೌನ್​ ಕ್ರಮ ಅನುಸರಿಸುತ್ತಿದ್ದಾರೆಯೇ ಎಂಬುದನ್ನು ಪರಿಶೀಲಿಸಲು ಗಸ್ತು ಬಂದಿದ್ದರು. ಬಿಎಸ್​ಸಿ ಪದವೀಧರರಾದ ರೆಡ್ಡಿ , ವೆಂಕಟಗಿರಿ ರಸ್ತೆ ಬಳಿಯ ಹೊಲಗಳಲ್ಲಿ ಕೆಲಸ ಮಾಡುತ್ತಿದ್ದ ರೈತರನ್ನು ನೋಡಿ ತಾವೂ ಕೂಡ ಕೆಲಕಾಲ ರೈತರಾಗಿ ಕೆಲಸ ಮಾಡಿದ್ದಾರೆ.

ಈ ವೇಳೆ ಕೊರೊನಾ ಬಗ್ಗೆ ರೈತರಿಗೆ ಮನವರಿಕೆ ಮಾಡಿಕೊಟ್ಟ ಅವರು, ಸಾಮಾಜಿಕ ಅಂತರ ಕಾಪಾಡಿಕೊಂಡು ಕೆಲಸ ಮಾಡಬೇಕು ಎಂದು ರೈತರಿಗೆ ಸಲಹೆಯನ್ನೂ ನೀಡಿದರು.

ABOUT THE AUTHOR

...view details