ಕರ್ನಾಟಕ

karnataka

By

Published : May 31, 2020, 9:34 PM IST

ETV Bharat / bharat

ಜೂನ್ 8ರಿಂದ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಅನುಮತಿ.. ಆದರೆ, ಕಂಡೀಷನ್ಸ್‌..

ದೇವಾಲಯದ ಸಮೀಪವಿರುವ ಪುಷ್ಕರಿಣಿ, ಸರೋವರಗಳು ಮತ್ತು ಕೊಳಗಳಲ್ಲಿ ಭಕ್ತರಿಗೆ ಸ್ನಾನ ಮಾಡಲು ಅವಕಾಶವಿರುವುದಿಲ್ಲ. ಗಿರಿಗೆ ಬರವ ಭಕ್ತರು ಒಂದಿಷ್ಟು ಮಾನದಂಡಗಳನ್ನ ಪಾಲಿಸಲೇಬೇಕಿದೆ.

Tirumala Temple will be opened from June 8
ಜೂನ್ 8 ರಿಂದ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಅನುಮತಿ..!

ವಿಶಾಖಪಟ್ಟಣಂ(ಆಂಧ್ರಪ್ರದೇಶ):ಜೂನ್ 8ರಿಂದ ತಿರುಪತಿಯ ತಿರುಮಲ ದೇವಸ್ಥಾನ ತೆರೆಯಲಿದೆ. ತಿಮ್ಮಪ್ಪನ ದರ್ಶನಕ್ಕೆ ಭಕ್ತಾದಿಗಳಿಗೆ ಅವಕಾಶ ನೀಡಲಾಗುತ್ತೆ. ಗಂಟೆಗೆ 300 ಯಾತ್ರಾರ್ಥಿಗಳಿಗೆ ಮಾತ್ರ ದೇವಾಲಯಕ್ಕೆ ಭೇಟಿ ನೀಡಲು ಅವಕಾಶವಿದೆ. ಈ ಕುರಿತು ಧರ್ಮದತ್ತಿ ಇಲಾಖೆಯು ಹಲವಾರು ಮಾರ್ಗಸೂಚಿಗಳನ್ನು ಸಿದ್ಧಪಡಿಸಿದೆ.

ಅವುಗಳನ್ನು ವೈದ್ಯಕೀಯ ವಿಭಾಗದ ಅನುಮೋದನೆಗೆ ಕಳುಹಿಸಿಸಲಾಗಿದೆ. ವೈದ್ಯಕೀಯ ಇಲಾಖೆ ಇವುಗಳನ್ನು ಅನುಮೋದಿಸಿ ಅಧಿಕೃತ ಆದೇಶಗಳನ್ನು ನೀಡಬೇಕಾಗಿದೆ.

ಜೂನ್ 8ರಿಂದ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಅನುಮತಿ..

ಧಾರ್ಮಿಕ ದತ್ತಿ ಇಲಾಖೆಯ ಪ್ರಮುಖ ಅಂಶಗಳು..!

  • ದೇವಾಲಯಗಳ ಭೇಟಿಯ ಸಮಯವನ್ನು ಕಾರ್ಯನಿರ್ವಾಹಕ ಅಧಿಕಾರಿಗಳು ನಿರ್ಧರಿಸಬೇಕು.
  • ಭಕ್ತರು ಮುಂಚಿತವಾಗಿ ಕಾಯ್ದಿರಿಸಿದರೆ ಅವರಿಗೆ ಸಮಯ ಸ್ಲಾಟ್ ದರ್ಶನ ನೀಡಲಾಗುತ್ತದೆ.
  • ದರ್ಶನಕ್ಕೆ ಹೋಗುವ ಪ್ರತಿಯೊಬ್ಬ ಭಕ್ತನು ಆಧಾರ್ ಅಥವಾ ಇನ್ನಾವುದೇ ಗುರುತಿನ ಚೀಟಿ ಕೊಂಡೊಯ್ಯಬೇಕು.
  • ರಾಹು, ಕೇತು ಪೂಜೆಗಳು, ವ್ರತಗಳು ಮತ್ತು ಹೋಮಗಳನ್ನು ಮಾಡಲು ಕೇವಲ ಶೇ.30ರಷ್ಟು ಭಕ್ತರಿಗೆ ಮಾತ್ರ ಅವಕಾಶ ನೀಡಬೇಕು.
  • ಕೇವಲ ಶೇ.50ರಷ್ಟು ಕೊಠಡಿಗಳನ್ನು ಮಾತ್ರ ಭಕ್ತರಿಗೆ ಮೀಸಲಿಡಬೇಕು.
  • ಕೂದಲು ಕತ್ತರಿಸುವ ಸ್ಥಳದಲ್ಲಿ ಕ್ಷೌರಿಕರು ಪ್ರತಿ ಬಾರಿಯೂ ಎಚ್ಚರಿಕೆ ವಹಿಸಬೇಕು.
  • ದೇವಾಲಯದ ಆವರಣದಲ್ಲಿರುವ ಅಂಗಡಿಗಳನ್ನು ಒಂದರ ನಂತರ ಒಂದರಂತೆ ತೆರೆಯಲು ಅವಕಾಶ ನೀಡಬೇಕು.
  • ಭಕ್ತರಿಗೆ ಯಾವುದೇ ಪ್ರಸಾದ ವಿತರಣೆ ಇರುವುದಿಲ್ಲ.
  • ದೇವಾಲಯದ ಸಮೀಪವಿರುವ ಪುಷ್ಕರಿಣಿ, ಸರೋವರಗಳು ಮತ್ತು ಕೊಳಗಳಲ್ಲಿ ಭಕ್ತರಿಗೆ ಸ್ನಾನ ಮಾಡಲು ಅವಕಾಶವಿರುವುದಿಲ್ಲ.

ABOUT THE AUTHOR

...view details