ನವದೆಹಲಿ: ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಚೀನಾದ ಸೈನಿಕರೊಂದಿಗೆ ಹಿಂಸಾತ್ಮಕ ಘರ್ಷಣೆಯಲ್ಲಿ ಭಾರತೀಯ ಸೇನಾಧಿಕಾರಿ ಮತ್ತು ಇಬ್ಬರು ಸೈನಿಕರು ಹುತಾತ್ಮರಾದ ಘಟನೆಯ ಬಗ್ಗೆ ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಪ್ರತಿಕ್ರಿಯಿಸಿದ್ದಾರೆ
ಈ ಕುರಿತು ‘ಲಡಾಖ್ನಲ್ಲಿ ಏನಾಯಿತು ಎಂಬುದರ ವಿವರಗಳನ್ನು ನಾವು ಅಂತಿಮವಾಗಿ ತಿಳಿಯುತ್ತೇವೆ. ಅದು ನಮ್ಮ ಹಕ್ಕು. ಆದರೆ ಇದೀಗ, ನಾವು ನಮ್ಮ ಹುತಾತ್ಮ ಸೈನಿಕರ ಕುಟುಂಬಗಳೊಂದಿಗೆ ದುಃಖಿಸಬೇಕು ಮತ್ತು ನಿಲ್ಲಬೇಕು. ನಮ್ಮ ಸಶಸ್ತ್ರ ಪಡೆಗಳಿಗೆ ಬೆಂಬಲವಾಗಿ ದೃಢವಾಗಿ ನಿಲ್ಲಬೇಕು’ ಎಂದು ಟ್ವೀಟ್ ಮಾಡಿದ್ದಾರೆ.