ಕರ್ನಾಟಕ

karnataka

ETV Bharat / bharat

ನಾಯಿಗಳಿಗೆ ಸತ್ತ ಮೊಲ ತಿನ್ನಿಸಿ ಟಿಕ್​​ಟಾಕ್:​ ಮೂವರು ಯುವಕರು ಅರೆಸ್ಟ್​​​ - ಬ್ಯಾನ್​ ಟಿಕ್​ಟಾಕ್​

ಟಿಕ್​ಟಾಕ್​ನಲ್ಲಿ ವನ್ಯಜೀವಿಗಳನ್ನು ಬಳಸಿಕೊಂಡು ವಿಡಿಯೋ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇದರ ಬೆನ್ನಲ್ಲೇ ಸತ್ತ ಮೊಲದ ಮಾಂಸವನ್ನು ನಾಯಿಗಳಿಗೆ ತಿನ್ನಿಸಿ ಟಿಕ್​ಟಾಕ್ ವಿಡಿಯೋ ಮಾಡಿದ್ದ ಮೂವರು ಯುವಕರನ್ನು ಅರಣ್ಯ ಇಲಾಖೆ ವಶಕ್ಕೆ ಬಂಧಿಸಿತ್ತು. ಬಳಿಕ ಮೂವರಿಗೆ ತಲಾ 7 ಸಾವಿರದಂತೆ ದಂಡ ವಿಧಿಸಿ ಎಚ್ಚರಿಕೆ ನೀಡಿ ಬಿಡುಗಡೆ ಮಾಡಲಾಗಿದೆ.

TikTok video of died rabbit feed to dogs get viral; 3 youngsters arrested
ನಾಯಿಗಳಿಗೆ ಸತ್ತ ಮೊಲ ತಿನ್ನಿಸಿ ಟಿಕ್​​ಟಾಕ್:​ ಮೂವರು ಯುವಕರು ಅರೆಸ್ಟ್​​​

By

Published : May 30, 2020, 8:45 PM IST

ಕೊಯಿಮತ್ತೂರು(ತಮಿಳುನಾಡು):ಇಲ್ಲಿನ ಕಿನಾತುಕಾಡಾವುನ ಯುವಕನೊಬ್ಬ ಕೆಲವು ದಿನಗಳ ಹಿಂದೆ ಕಾಡು ಮೊಲಗಳನ್ನು ನಾಯಿಗಳಿಗೆ ಆಹಾರ ನೀಡುವಂತಹ ಟಿಕ್‌ಟಾಕ್ ವಿಡಿಯೋವನ್ನು ಪೋಸ್ಟ್ ಮಾಡಿದ್ದ. ಬಳಿಕ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು. ಇದಾದ ನಂತರ ಅರಣ್ಯ ಇಲಾಖೆ ಈ ವಿಷಯದ ಬಗ್ಗೆ ವಿಚಾರಣೆಯನ್ನು ಪ್ರಾರಂಭಿಸಿ ಇದೀಗ ಮೂವರು ಯುವಕರನ್ನು ಬಂಧಿಸಿದೆ.

ನಾಯಿಗಳಿಗೆ ಸತ್ತ ಮೊಲ ತಿನ್ನಿಸಿ ಟಿಕ್​​ಟಾಕ್:​ ಮೂವರು ಯುವಕರು ಅರೆಸ್ಟ್​​​

ವಿಚಾರಣೆಯಲ್ಲಿ ಆತನ ಹೆಸರು ಕಾರ್ತಿ ಎಂದು ತಿಳಿದು ಬಂದಿದೆ. ಆತ ರಸ್ತೆಯಲ್ಲಿ ಸತ್ತು ಬಿದ್ದಿದ್ದ ಮೊಲವನ್ನು ನಾಯಿಗಳಿಗೆ ತಿನ್ನಿಸುವ ಮೂಲಕ ಟಿಕ್​ಟಾಕ್​ ವಿಡಿಯೋ ಮಾಡಿದ್ದ.

ಈ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದ ಕಾರ್ತಿಕ್​ ಸ್ನೇಹಿತರಾದ ಕುಮಾರ್ ಮತ್ತು ತಮಿಲ್ವಾನ್​​ ಅವರನ್ನು ಅರಣ್ಯ ಅಧಿಕಾರಿಗಳು ಬಂಧಿಸಿದ್ದಾರೆ. ಅಲ್ಲದೆ ಮೂವರು ಯುವಕರಿಗೆ ಒಟ್ಟು 21 ಸಾವಿರ ರೂಪಾಯಿ ದಂಡ ಹಾಕಿದ್ದಾರೆ. ಅಲ್ಲದೆ ಎಲ್ಲರಿಗೂ ಎಚ್ಚರಿಕೆ ನೀಡಿ ಬಿಡುಗಡೆ ಮಾಡಲಾಗಿದೆ.

ಈ ಕುರಿತು ಕೊಯಿಮತ್ತೂರು ಜಿಲ್ಲಾ ಅರಣ್ಯ ಅಧಿಕಾರಿ ವೆಂಕಟೇಶ್ ಮಾತನಾಡಿ, ವನ್ಯಜೀವಿಗಳೊಂದಿಗೆ ಟಿಕ್​ಟಾಕ್ ವಿಡಿಯೋ ಮಾಡುವುದು ಕಾನೂನು ಪ್ರಕಾರ ಅಪರಾಧವಾಗಿದೆ. ಯಾರಾದರೂ ಕಾಡು ಪ್ರಾಣಿ ಸತ್ತರೆ, ದಯವಿಟ್ಟು ಅರಣ್ಯ ಇಲಾಖೆಗೆ ತಿಳಿಸಿ. ಅಲ್ಲದೆ ಯುವಕರು ಇಂತಹ ಚಟುವಟಿಕೆಗಳಲ್ಲಿ ತೊಡಗುವುದನ್ನು ನಿಲ್ಲಿಸಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.

ABOUT THE AUTHOR

...view details