ಆದಮ್ಪುರ:(ಹರಿಯಾಣ):ಬಿಜೆಪಿ ಅಭ್ಯರ್ಥಿಯಾಗಿ ಹರಿಯಾಣದ ಆದಮ್ಪುರ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಟಿಕ್ಟಾಕ್ ಸ್ಟಾರ್ಗೆ ಹರಿಯಾಣದ ಜನತೆ ಸೋಲಿನ ರುಚಿ ತೋರಿಸಿದ್ದಾರೆ.
ಟಿಕ್ಟಾಕ್ ಸ್ಟಾರ್ ಸೋನಾಲಿ ಸಾಮಾಜಿಕ ಜಾಲತಾಣಗಳಲ್ಲಿ ಟಿಕ್ಟಾಕ್ ವಿಡಿಯೋ ಶೇರ್ ಮಾಡುವ ಮೂಲಕ ಬರೋಬ್ಬರಿ 1 ಲಕ್ಷ 18 ಸಾವಿರ ಪಾಲೋವರ್ಸ್ ಹೊಂದಿದ್ದ ಸೋನಾಲಿ, 2019ರ ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ತನ್ನ ರಾಜಕೀಯ ಭವಿಷ್ಯ ನಿರ್ಧರಿಸಿಕೊಳ್ಳಲು ಮುಂದಾಗಿದ್ದರು. ಇದೀಗ ಫಲಿತಾಂಶ ಹೊರಬಿದ್ದಿದ್ದು, ಬರೋಬ್ಬರಿ 29,471 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಸೋಲು ಕಂಡಿದ್ದಾರೆ.
ಟಿಕ್ಟಾಕ್ ಸ್ಟಾರ್ ಸೋನಾಲಿ ಕಾಂಗ್ರೆಸ್ ಪ್ರಬಲ ಅಭ್ಯರ್ಥಿ ಕುಲ್ದೀಪ್ ಬಿಷ್ಣೋಯ್ ವಿರುದ್ಧ ಸೋನಾಲಿ ಸ್ಪರ್ಧೆ ಮಾಡಿದ್ದರು. ಬಿಜೆಪಿ ಪಕ್ಷದಿಂದ ಟಿಕೆಟ್ ಪಡೆದುಕೊಳ್ಳುತ್ತಿದ್ದಂತೆ ಚುನಾವಣೆ ಪ್ರಚಾರ ನಡೆಸಿದ್ದ ಸೋನಾಲಿ, ನೀವು ಪಾಕಿಸ್ತಾನದಿಂದ ಬಂದಿದ್ದೀರಾ? ಮತ್ಯಾಕೆ ಭಾರತ್ ಮಾತಾ ಕೀ ಜೈ ಘೋಷಣೆ ಕೂಗುತ್ತಿಲ್ಲ ಎಂದು ವಿವಾದಿತ ಹೇಳಿಕೆ ಸಹ ನೀಡಿದ್ದರು.
90 ಕ್ಷೇತ್ರಗಳನ್ನೊಳಗೊಂಡ ಹರಿಯಾಣ ವಿಧಾನಸಭೆಗೆ ಬಿಜೆಪಿ ರಿಲೀಸ್ ಮಾಡಿದ್ದ ಎರಡನೇ ಪಟ್ಟಿಯಲ್ಲಿ ಟಿಕ್ಟಾಕ್ ಸ್ಟಾರ್ ಸೋನಾಲಿ ಟಿಕೆಟ್ ಗಿಟ್ಟಿಸಿದ್ದರು.