ಕರ್ನಾಟಕ

karnataka

ETV Bharat / bharat

ನಕಲಿ ಟಿಕ್​ಟಾಕ್​: ಸೈಬರ್​ ಹ್ಯಾಕರ್ಸ್​ಗೆ ಹೊಸ ಅಸ್ತ್ರ... ಎಚ್ಚೆತ್ತುಕೊಳ್ಳದಿದ್ದರೆ ಆಪತ್ತು ನಿಶ್ಚಿತ! - ಸೈಬರ್​​​ ಖದೀಮರು

ಭಾರತ ಸರ್ಕಾರ ಟಿಕ್​ಟಾಕ್​ ಸೇರಿದಂತೆ 59 ಚೀನಾ ನಿರ್ಮಿತ ಅಪ್ಲಿಕೇಷನ್​ಗಳನ್ನು ಇತ್ತೀಚೆಗೆ ನಿಷೇಧಿಸಿತ್ತು. ಸದ್ಯ ಅದನ್ನೇ ಬಂಡವಾಳವನ್ನಾಗಿಸಿಕೊಂಡಿರುವ ಹ್ಯಾಕರ್ಸ್​​ ಟಿಕ್​ಟಾಕ್​ ಪ್ರಿಯರ ಮೂಲಕ ಪರಿಸ್ಥಿತಿಯ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ ಎಂಬ ಎಚ್ಚರಿಕೆಯ ಸಂದೇಶವನ್ನು ಸೈಬರ್​ ತಜ್ಞರು ನೀಡಿದ್ದಾರೆ.

tiktok-new-weapon-for-cyber-criminals
ಸೈಬರ್​ ಹ್ಯಾಕರ್ಸ್​ಗಳ ಹೊಸ ಅಸ್ತ್ರ

By

Published : Jul 13, 2020, 6:28 AM IST

ಜೈಪುರ: ಪ್ರಪಂಚದಾದ್ಯಂತ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದ್ದ ಚೈನೀಸ್​ ಟಿಕ್​ಟಾಕ್​ ಆ್ಯಪ್​​ನ್ನು ಸದ್ಯ ಭಾರತ ಸರ್ಕಾರ ನಿಷೇಧಿಸಿದೆ. ವಿಶ್ವದಾದ್ಯಂತ ಸುಮಾರು 800 ಮಿಲಿಯನ್​ ಚಂದಾದಾರನ್ನು ಹೊಂದಿರುವ ಆ್ಯಪ್​ ಪ್ರಸ್ತುತ ಸೈಬರ್​ ಖದೀಮರಿಗೆ ಡೇಟಾ ಕಳ್ಳತನಕ್ಕೆ ರಾಜಮಾರ್ಗವಾಗಿದೆ.

ಭಾರತ ಸರ್ಕಾರ ಟಿಕ್​ಟಾಕ್​ ಸೇರಿದಂತೆ ಚೀನಾದ 58 ಆ್ಯಪ್​ಗಳ ಬಳಕೆಯನ್ನು ನಿಷೇಧಿಸಿದೆ. ಆದ್ರೆ ಕೆಲ ಜನರು ಅಕ್ರಮವಾಗಿ ಮತ್ತೆ ಟಿಕ್​ಟಾಕ್​ ಅಪ್ಲಿಕೇಷನ್​ ಪಡೆಯಲು ಮುಂದಾಗಿ ಸೈಬರ್​​ ಹ್ಯಾಕರ್​ಗಳಿಗೆ ಬಲಿಯಾಗುತ್ತಿದ್ದಾರೆ.

ಸೈಬರ್​ ಹ್ಯಾಕರ್ಸ್​ಗಳ ಹೊಸ ಅಸ್ತ್ರ

ಟಿಕ್​ಟಾಕ್​ ಎಂಬ ಅಪ್ಲಿಕೇಷನ್ ಎಪಿಕೆ (apk) ಫಾರ್ಮೆಟ್​ನಲ್ಲಿ ಡೌನ್​ಲೋಡ್​​ ಮಾಡಿಕೊಂಡು ಇನ್​ಸ್ಟಾಲ್​ ಮಾಡಬಹುದಾದ ಒಂದು ಆ್ಯಪ್​ ಆಗಿದ್ದು, ಸದ್ಯ ಇದೇ ನೆಪ ಇಟ್ಟುಕೊಂಡ ಸೈಬರ್​ ಅಪರಾಧಿಗಳು ಟಿಕ್​ಟಾಕ್​ ಆ್ಯಪ್​ ಪಡೆಯುವ ಕುರಿತ ಲಿಂಕ್​ ಸಹಿತ ಸಂದೇಶ ರವಾನಿಸಿ ಬಳಕೆದಾರರನ್ನು ಬಲಿ ಪಶುಗಳನ್ನಾಗಿ ಮಾಡುತ್ತಿದ್ದಾರೆ.

ಸದ್ಯ ಟಿಕ್​ಟಾಕ್​ ಆ್ಯಪ್​ ಮರಳಿ ಪಡೆಯುವ ಕುರಿತು ಸಂದೇಶವೊಂದು ವೈರಲ್​​​ ಆಗುತ್ತಿದ್ದು, ಅದರಲ್ಲಿ ಕೊಟ್ಟಿರುವ ಲಿಂಕ್​ ಮೇಲೆ ಕ್ಲಿಕ್​​ ಮಾಡಿದ್ರೆ ಟಿಕ್​ಟಾಕ್​ ಅಪ್ಲಿಕೇಷನ್​ ಬರುವ ಬದಲಿಗೆ ಜಾಹೀರಾತು ಪ್ರದರ್ಶನಗೊಳ್ಳುತ್ತಿದೆ.

ಟಿಕ್​ಟಾಕ್​ ಸೈಬರ್​ ಹ್ಯಾಕರ್ಸ್​ ಹೊಸ ಅಸ್ತ್ರ

ಈ ಕುರಿತು ಈಟಿವಿ ಭಾರತ ಜನರನ್ನು ಜಾಗೃತಗೊಳಿಸುವ ಪ್ರಯತ್ನ ಮಾಡುತ್ತಿದ್ದು, ಲಿಂಕ್​ ಬಳಸಿದರೆ ಮೊಬೈಲ್​ನಲ್ಲಿರುವ ದೂರವಾಣಿ ಸಂಖ್ಯೆಗಳು ಸೈಬರ್​ ಕಳ್ಳನ ಖಾತೆ ಸೇರುತ್ತವೆಯೇ ಹೊರತು ಟಿಕ್​ಟಾಕ್​ ಆ್ಯಪ್​ ಸಿಗುವುದಿಲ್ಲ ಎಂಬ ಸತ್ಯವನ್ನು ಜನರಿಗೆ ತಿಳಿಸುತ್ತಿದೆ.

ಇಂತಹ ಸಂದೇಶಗಳು ಬಳಕೆದಾರರ ಸೆಲ್‌ಫೋನ್‌ನಿಂದ ಡೇಟಾವನ್ನು ಫಿಶಿಂಗ್ ಮಾಡಲು ಬಳಸಲಾಗುವ ಮಾಲ್‌ವೇರ್ ಲಿಂಕ್‌ಗಳಾಗಿರುವುದರಿಂದ ಜನರು ತಮ್ಮ ಡೇಟಾದ ಗೌಪ್ಯತೆ ಕಾಪಾಡಿಕೊಂಡಿರಬೇಕು ಎಂದು ತಜ್ಞರು ಹೇಳುತ್ತಾರೆ.

ಸದ್ಯ ಟಿಕ್​ಟಾಕ್​ ಪ್ರಿಯರನ್ನೇ ಮುಖ್ಯ ಗುರಿಯನ್ನಾಗಿಸಿಕೊಂಡಿರುವ ಹ್ಯಾಕರ್ಸ್​ ಮಾಲ್​ವೇರ ಬಳಸಿ ಗೌಪ್ಯ ಮಾಹಿತಿಯನ್ನು ಖದಿಯಲು ಮುಂದಾಗಿದ್ದು, ಜನರು ಇನ್ನಾದರೂ ಎಚ್ಚರಿಕೆಯಿಂದ ಇರಬೇಕಾಗಿದೆ.

ABOUT THE AUTHOR

...view details