ಕರ್ನಾಟಕ

karnataka

ETV Bharat / bharat

ಬಿಜೆಪಿಯಿಂದ ಕಣಕ್ಕಿಳಿದ ಟಿಕ್​ಟಾಕ್ ಸ್ಟಾರ್ ಸೋನಾಲಿ; ಅದಂಪುರ ಕ್ಷೇತ್ರದಿಂದ ಸ್ಪರ್ಧೆ - ಬಿಜೆಪಿ ಪಕ್ಷದಿಂದ ಟಿಕೆಟ್​

ಬಿಜೆಪಿ ಅಭ್ಯರ್ಥಿಯಾಗಿ ಹರಿಯಾಣದ ಅದಂಪುರ್​ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದಿರುವ ಟಿಕ್​ಟಾಕ್​ ಸ್ಟಾರ್​ ಸೋನಾಲಿ ಇಂದು ನಾಮಪತ್ರ ಸಲ್ಲಿಸಿದ್ದು, ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಅಭ್ಯರ್ಥಿ ಸೋನಾಲಿ

By

Published : Oct 4, 2019, 5:50 PM IST

Updated : Oct 4, 2019, 5:57 PM IST

ಚಂಡೀಗಢ:ಹರಿಯಾಣದ ಅದಂಪುರ್ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಟಿಕ್ ಟಾಕ್ ಸ್ಟಾರ್ ಸೋನಾಲಿ ಪೋಗಾಟ್ ಇಂದು ನಾಮಪತ್ರ ಸಲ್ಲಿಸಿದ್ರು.

ಬಿಜೆಪಿಯಲ್ಲಿ ಗುರುತಿಸಿಕೊಂಡಿರುವ ಸೋನಾಲಿಗೆ ಇದೇ ಮೊದಲ ಬಾರಿಗೆ ಪಕ್ಷ ಮಣೆ ಹಾಕಿದೆ. ಕಾಂಗ್ರೆಸ್​ನ ಪ್ರಬಲ ಅಭ್ಯರ್ಥಿ ಕುಲದೀಪ್​ ಬಿಷ್ಣೋಯ್​ ವಿರುದ್ಧ ಇವರು ಕಣಕ್ಕಿಳಿದಿದ್ದಾರೆ. ಕಳೆದ 12 ವರ್ಷಗಳಿಂದ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತೆಯಾಗಿ ದುಡಿದಿದ್ದೇನೆ. ಈ ಬಾರಿ ಚುನಾವಣೆಯಲ್ಲಿ ಗೆಲುವು ದಾಖಲಿಸುವುದಾಗಿ ಅವರುವಿಶ್ವಾಸ ವ್ಯಕ್ತಪಡಿಸಿದ್ರು.

ಬಿಜೆಪಿ ಅಭ್ಯರ್ಥಿ ಸೋನಾಲಿ

90 ಕ್ಷೇತ್ರಗಳನ್ನೊಳಗೊಂಡ ಹರಿಯಾಣ ವಿಧಾನಸಭೆಗೆ ಅಕ್ಟೋಬರ್​ 21ರಂದು ಮತದಾನ ನಡೆಯಲಿದ್ದು, 24ಕ್ಕೆ ಫಲಿತಾಂಶ ಹೊರಬೀಳಲಿದೆ.

Last Updated : Oct 4, 2019, 5:57 PM IST

ABOUT THE AUTHOR

...view details