ಕರ್ನಾಟಕ

karnataka

ETV Bharat / bharat

ಇತಿಹಾಸದ ಪುಟಗಳಿಂದ..: ಕುತ್ತಿಗೆಗೆ ಹಗ್ಗ ಬಿಗಿದೆಳೆದ ನಂತರವೂ ಆತನ ನಾಡಿಮಿಡಿತ ಬಡಿದುಕೊಳ್ತಿತ್ತು! - murder of Nirbhaya hanged

1978ರಲ್ಲಿ ಕುಲ್​ಜೀತ್​ ಸಿಂಗ್​ ಅಲಿಯಾಸ್​ ರಂಗ ಮತ್ತು ಜಸ್​ಬೀರ್​ ಸಿಂಗ್​ ಅಲಿಯಾಸ್​ ಬಿಲ್ಲ ಎಂಬಿಬ್ಬರು ಗೀತಾ, ಸಂಜಯ್​ ಚೋಪ್ರಾ ಎಂಬ ಇಬ್ಬರು ಸಹೋದರ, ಸಹೋದರಿಯನ್ನು ಅಪಹರಿಸಿದ್ದರು.

Tihar witnessed hanging of two other rape convicts in 1982 - Ranga and Billa
ರಂಗ- ಬಿಲ್ಲ: 1982ರಲ್ಲೂ ತಿಹಾರ್​ ಜೈಲು ಇಬ್ಬರು ಅತ್ಯಾಚಾರಿಗಳ ಗಲ್ಲಿಗೆ ಸಾಕ್ಷಿಯಾಗಿತ್ತು

By

Published : Mar 20, 2020, 3:14 PM IST

Updated : Mar 20, 2020, 3:23 PM IST

ನವದೆಹಲಿ:1982ರಲ್ಲಿ ನಿರ್ಭಯಾ ಅಪರಾಧಿಗಳ ಮಾದರಿಯಲ್ಲೇ ಇಬ್ಬರು ಅತ್ಯಾಚಾರಿಗಳನ್ನು ಇದೇ ತಿಹಾರ್​ ಜೈಲಿನಲ್ಲಿ ಗಲ್ಲಿಗೇರಿಸಲಾಗಿತ್ತು. ಆ ಪ್ರಕರಣ ಕೂಡ ನಿರ್ಭಯಾ ಕೇಸ್​ನಷ್ಟೇ ಕ್ಲಿಷ್ಟಕರವಾಗಿತ್ತು. ಅದನ್ನು ಇಂದಿಗೂ ರಂಗ-ಬಿಲ್ಲ ಕೇಸ್​ ಎಂದೇ ಇತಿಹಾಸ ಗುರುತಿಸುತ್ತಿದೆ.

ದಶಕಗಳ ಹಿಂದೆ ಅಂದರೆ, 1978ರಲ್ಲಿ ಕುಲ್​ಜೀತ್​ ಸಿಂಗ್​ ಅಲಿಯಾಸ್​ ರಂಗ ಮತ್ತು ಜಸ್​ಬೀರ್​ ಸಿಂಗ್​ ಅಲಿಯಾಸ್​ ಬಿಲ್ಲ ಎಂಬಿಬ್ಬರು ಅಪರಾಧಿಗಳು ಗೀತಾ, ಸಂಜಯ್​ ಚೋಪ್ರಾ ಎಂಬ ಇಬ್ಬರು ಸಹೋದರ ಸಹೋದರಿಯನ್ನು ಅಪಹರಿಸಿದ್ದರು. ತಾವು ಅಪಹರಿಸಿದ ಇಬ್ಬರೂ ನೌಕಾಧಿಕಾರಿಯ ಮಕ್ಕಳೆಂದು ತಿಳಿದ ರಂಗ-ಬಿಲ್ಲ ಅವರನ್ನು ಹಿಂಸಿಸಿ ಅಮಾನುಷವಾಗಿ ಕೊಲೆಗೈದಿದ್ದರು. ಕೊಲೆಯಾಗುವ ಮುನ್ನ ಗೀತಾಳನ್ನು ಅತ್ಯಾಚಾರ ಮಾಡಲಾಗಿತ್ತು.

ಕೊಲೆ ಮತ್ತು ಅತ್ಯಾಚಾರದ ಅಪರಾಧದ ಹಿನ್ನೆಲೆ ರಂಗ ಮತ್ತು ಬಿಲ್ಲನಿಗೆ ಕೋರ್ಟ್ ಗಲ್ಲು ಶಿಕ್ಷೆ ವಿಧಿಸಿತ್ತು. ಬಳಿಕ ಅವರನ್ನು ಗಲ್ಲಿಗೇರಿಸಲು ತಿಹಾರ್​ ಜೈಲಿನಿಂದ ಫಕೀರಾ ಮತ್ತು ಕಲು ಎಂಬ ಇಬ್ಬರನ್ನು ಕರೆಸಿಕೊಳ್ಳಲಾಗಿತ್ತು. ಇವರ ಗಲ್ಲಿಗೂ ಮೊದಲು ಇವರಿಗೆ ಕುಡಿಯಲು ಟೀ ನೀಡಿ ಅವರ ಕೊನೆಯ ಇಚ್ಛೆಗಳನ್ನು ಕೇಳಲಾಗಿತ್ತು. ಆದರೆ, ಅಪರಾಧಿಗಳು ಯಾವುದೇ ಇಚ್ಛೆ ವ್ಯಕ್ತಪಡಿಸಲಿಲ್ಲ ಎಂದು ತಿಹಾರ್​ ಜೈಲಿನ ಕಾನೂನು ಅಧಿಕಾರಿ ಸುನಿಲ್​ ಗುಪ್ತ ಮತ್ತು ಪತ್ರಕರ್ತ ಸುನೇತ್ರ ಚೌಧರಿ ಅವರ ಪುಸ್ತಕ 'ಬ್ಲಾಕ್​ ಕರೆಂಟ್​' ನಲ್ಲಿ ಉಲ್ಲೇಖವಾಗಿದೆ.

ಗಲ್ಲಿನ ನಂತರವೂ ನಿಂತಿರಲಿಲ್ಲ ರಂಗನ ನಾಡಿ ಮಿಡಿತ:

1982ರ ಜನವರಿ 31, ಇಬ್ಬರೂ ಅಪರಾಧಿಗಳನ್ನೂ ನೇಣುಗಂಬಕ್ಕೇರಿಸುವ ಪ್ರಕ್ರಿಯೆ ವೇಳೆ ಕುತ್ತಿಗೆಗೆ ಹಗ್ಗ ಬಿಗಿದು ಎಳೆದ ನಂತರವೂ ರಂಗನ ನಾಡಿ ಮಿಡಿತ ಇನ್ನೂ ಬಡಿದುಕೊಳ್ಳುತ್ತಿತ್ತು ಎಂದು ವೈದ್ಯರು ತಿಳಿಸಿದರು. ಆಗ ತಕ್ಷಣವೇ ರಂಗನನ್ನು ಹಾಕಿದ್ದ ಮರಣ ಬಾವಿಗೆ ಗಾರ್ಡ್​ನ ಇಳಿಸಿ ರಂಗನ ಕಾಲು ಎಳೆಸಿ ಕೊಲ್ಲಿಸಲಾಯಿತು ಎಂಬ ವಿಚಾರವೂ ಪುಸ್ತಕದಲ್ಲಿದೆ.

Last Updated : Mar 20, 2020, 3:23 PM IST

ABOUT THE AUTHOR

...view details