ದೆಹಲಿ: ಕೊರೊನಾ ವೈರಸ್ ಹರಡುವ ಭೀತಿಯಲ್ಲಿ ಮುಂದಿನ ಕೆಲ ದಿನಗಳಲ್ಲೇ ತಿಹಾರ್ ಜೈಲಿನ 3000 ಕೈದಿಗಳನ್ನು ಬಿಡುಗಡೆ ಮಾಡಬಹುದು ಎಂಬ ಮಾಹಿತಿ ದೊರೆತಿದೆ.
ಕೊರೊನಾ ಎಫೆಕ್ಟ್: 3000 ಕೈದಿಗಳಿಗೆ ಬಿಡುಗಡೆ ಭಾಗ್ಯ ಸಾಧ್ಯತೆ..! - Tihar jail to release 3000 prisoners as corona scare
ಕೊರೊನಾ ವೈರಸ್ನಿಂದ ಎಲ್ಲರೂ ಭಯಭೀತರಾಗಿದ್ದರೆ ದೆಹಲಿಯತಿಹಾರ್ ಜೈಲಿನಲ್ಲಿರುವ ಕೈದಿಗಳಿಗೆ ಮಾತ್ರ ವರವಾಗಿ ಪರಿಣಮಿಸಿದೆ.

3000 ಕೈದಿಗಳಿಗೆ ಬಿಡುಗಡೆ ಭಾಗ್ಯ ಸಾಧ್ಯತೆ
ಇವರಲ್ಲಿ 1500 ಬಿಡುಗಡೆಗೆ ಅರ್ಹ ಕೈದಿಗಳು ಹಾಗೂ 1500 ವಿಚಾರಣಾಧೀನ ಕೈದಿಗಳಾಗಿದ್ದಾರೆ. ಕೆಲವು ದಿನಗಳವರೆಗೆ ಪೆರೋಲ್ ಮತ್ತು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗುತ್ತದೆ ಎಂದು ದೆಹಲಿ ಸರ್ಕಾರ ಹೈಕೋರ್ಟ್ಗೆ ಮನವಿ ಸಲ್ಲಿಸಿರುವುದಾಗಿ ತಿಳಿದು ಬಂದಿದೆ.
ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
Last Updated : Mar 23, 2020, 10:37 PM IST