ನವದೆಹಲಿ: ನಿರ್ಭಯಾ ಸಾಮೂಹಿಕ ಅತ್ಯಾಚಾರ ಪ್ರಕರಣದ ಅಪರಾಧಿಗಳನ್ನು ಗಲ್ಲಿಗೇರಿಸುವ ಸಂಬಂಧ ತಿಹಾರ್ ಜೈಲಿನಲ್ಲಿ ರಿಹರ್ಸಲ್ ನಡೆಸಲಾಯಿತು ಎಂದು ಜೈಲಾಧಿಕಾರಿಗಳು ತಿಳಿಸಿದ್ದಾರೆ.
ಶುಕ್ರವಾರ ನಿರ್ಭಯಾ ಅಪರಾಧಿಗಳಿಗೆ ಗಲ್ಲು: ತಿಹಾರ್ ಜೈಲಲ್ಲಿ ರಿಹರ್ಸಲ್ - ತಿಹಾರ್ ಜೈಲಿನಲ್ಲಿ ರಿಹರ್ಸಲ್ ನಡೆಸಿದ ಹ್ಯಾಂಗ್ಮ್ಯಾನ್
2012ರ ದೆಹಲಿ ಗ್ಯಾಂಗ್ ರೇಪ್ ಪ್ರಕರಣದ ನಾಲ್ವರು ಅಪರಾಧಿಗಳಿಗೆ ಶುಕ್ರವಾರ ಮರಣದಂಡನೆ ಶಿಕ್ಷೆ ಜಾರಿಯಾಗಲಿದೆ. ಈ ನಿಟ್ಟಿನಲ್ಲಿ ತಿಹಾರ್ ಜೈಲಲ್ಲಿ ಪಿಡಬ್ಲ್ಯೂಡಿ ಅಧಿಕಾರಿಗಳು ಹಾಗು ಎಂಜಿನಿಯರ್ಗಳು ಮರಣದಂಡನೆಯ ತಾಲೀಮು(ಡಮ್ಮಿ) ನಡೆಸುತ್ತಿದ್ದಾರೆ. ಹ್ಯಾಂಗ್ ಮನ್ ಪವನ್ ನಾಲ್ವರನ್ನು ಗಲ್ಲಿಗೇರಿಸಲು ತಲಾ 20 ಸಾವಿರ ರೂ ಪಡೆಯಲಿದ್ದಾರೆ ಎಂಬ ಮಾಹಿತಿ ದೊರೆತಿದೆ.
ಶುಕ್ರವಾರ ನಿರ್ಭಯಾ ಆರೋಪಿಗಳ ಮರಣದಂಡನೆ
2012ರ ದೆಹಲಿ ಗ್ಯಾಂಗ್ ರೇಪ್ ಪ್ರಕರಣದಲ್ಲಿ ಅಪರಾಧಿಗಳಾದ ಮುಖೇಶ್ ಸಿಂಗ್, ಪವನ್ ಗುಪ್ತಾ, ವಿನಯ್ ಶರ್ಮಾ ಮತ್ತು ಅಕ್ಷಯ್ ಕುಮಾರ್ ಸಿಂಗ್ ಎಂಬ ನಾಲ್ವರನ್ನು ಮಾರ್ಚ್ 20ರಂದು ಬೆಳಗ್ಗೆ 5.30ಕ್ಕೆ ಗಲ್ಲಿಗೆರಿಸುವಂತೆ ಡೆತ್ ವಾರೆಂಟ್ ಹೊರಡಿಸಲಾಗಿದೆ.
ಹೀಗಾಗಿ ಇಂದು ಮುಂಜಾನೆ ಹ್ಯಾಂಗ್ಮ್ಯಾನ್ ಪವನ್ ಮರಣದಂಡನೆ ರಿಹರ್ಸಲ್ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.