ನವದೆಹಲಿ:ನಿರ್ಭಯಾ ಅತ್ಯಾಚಾರ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾದ ನಾಲ್ವರು ಅಪರಾಧಿಗಳಿಗೆ ತಿಹಾರ್ ಜೈಲು ಅಧಿಕಾರಿಗಳು ಪತ್ರ ಬರೆದಿದ್ದು, ಯಾವಾಗ ಕುಟುಂಬಸ್ಥರನ್ನು ಭೇಟಿಯಾಗುತ್ತೀರಾ? ಎಂದು ಕೇಳಿದ್ದಾರೆ.
ನಾಲ್ವರು ಅಪರಾಧಿಗಳಾದ ಮುಖೇಶ್, ಪವನ್, ಅಕ್ಷಯ್ ಮತ್ತು ವಿನಯ್‌ಗೆ ಮಾರ್ಚ್ 3ರಂದು ಬೆಳಿಗ್ಗೆ ಗಲ್ಲಿಗೇರಿಸುವಂತೆ ದೆಹಲಿ ಕೋರ್ಟ್ ಆದೇಶ ನೀಡಿದೆ. ಹೀಗಾಗಿ ಅಪರಾಧಿಗಳು ಕೊನೆಯದಾಗಿ ತನ್ನ ಕುಟುಂಬಸ್ಥರನ್ನು ಭೇಟಿ ಮಾಡುವ ಕುರಿತು ಈ ಪತ್ರದಲ್ಲಿ ಕೇಳಲಾಗಿದೆ. ಈ ಹಿಂದೆ ಅಂದರೆ ಫೆ.1ಕ್ಕೆ ಮರಣದಂಡನೆ ಶಿಕ್ಷೆ ನಿಗದಿಯಾಗಿತ್ತು. ಆಗ ಮುಖೇಶ್, ಪವನ್ ತಮ್ಮ ಕುಟುಂಬಸ್ಥರನ್ನು ಭೇಟಿಯಾಗಿದ್ದರು. ಹೀಗಾಗಿ ಅಕ್ಷಯ್ ಮತ್ತು ವಿನಯ್‌ಗೆ ಮಾತ್ರ ಕುಟುಂಬಸ್ಥರನ್ನು ಯಾವಾಗ ಭೇಟಿಯಾಗುತ್ತೀರೆಂದು ಕೇಳಲಾಗಿದೆ.