ಕರ್ನಾಟಕ

karnataka

ETV Bharat / bharat

ಮನೆಯೊಂದರ ‘ಬೆಡ್​ ಮೇಲೆ ಬ್ರೇಕ್​ಫಾಸ್ಟ್’​...  ಬೆಂಗಾಲ್​ ಟೈಗರ್ ಘಮ್ಮತ್ತು ನೋಡಿ ಹೌಹಾರಿದ ಜನ​!

ಮನೆಯ ಬೆಡ್​ ಮೇಲೆ ರಾಯಲ್​ ಆಗಿ ಬೆಂಗಾಲ್​ ಟೈಗರ್​ ಮಸ್ತ್​​ ನಿದ್ದೆ ಮಾಡುತ್ತಿದೆ. ವಿಶೇಷ ಅತಿಥಿಯ ಘಮ್ಮತ್ತು ನೋಡಿದ ಮನೆ ಮಾಲೀಕ ಹೆದರಿ ಅರಣ್ಯ ಇಲಾಖೆಗೆ ಸುದ್ದಿ ತಿಳಿಸಿದ್ದಾರೆ.

ರಾಯಲ್​ ಬೆಂಗಾಲ್​ ಟೈಗರ್

By

Published : Jul 18, 2019, 5:27 PM IST

ಕಾಜಿರಂಗ: ಮನೆ ಬೆಡ್​ ಮೇಲೆ ಹುಲಿಯೊಂದು ಮಲಗಿರುವುದನ್ನು ಕಂಡು ಮಾಲೀಕ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿರುವ ಘಟನೆ ಅಸ್ಸೋಂನ ಕಾಜಿರಂಗ್​ನಲ್ಲಿ ನಡೆದಿದೆ.

ಭಾರತದಲ್ಲಿನ ಅಸ್ಸೋಂನ ಕಾಜಿರಂಗ ನ್ಯಾಷನಲ್ ಪಾರ್ಕ್ ಪ್ರಪಂಚದಲ್ಲಿಯೇ ಅತಿ ಹೆಚ್ಚು ಸಂಖ್ಯೆಯ ಘೇಂಡಾಮೃಗಗಳನ್ನು ಹೊಂದಿರುವ ವನ್ಯಧಾಮವಾಗಿದೆ. ಇಲ್ಲಿ ಇನ್ನಿತರ ಜೀವಿಗಳಾದ ಹುಲಿ ಮತ್ತು ಆನೆಗಳನ್ನೂ ಕಾಣಬಹುದಾಗಿದೆ. ಪ್ರಾಣಿ ಬೇಟೆ ತಪ್ಪಿಸುವ ಉದ್ದೇಶದಿಂದ ಈಗಾಗಲೇ ಅರಣ್ಯ ಇಲಾಖೆ ಸಿಬ್ಬಂದಿ ನ್ಯಾಷನಲ್ ಹೈ ವೇ 37ರಲ್ಲಿಎಚ್ಚರಿಕೆ ಕ್ರಮಗಳನ್ನ ಸಹ ಕೈಗೊಂಡಿದೆ.

ಈ ಹೈವೇ ಬಳಿಯ ಮನೆಯೊಂದರಲ್ಲಿ ಹುಲಿಯೊಂದು ನುಗ್ಗಿದೆ. ಆ ಮನೆಯ ಬೆಡ್​ ಮೇಲೆ ರಾಯಲ್​ ಬೆಂಗಾಲ್​ ಟೈಗರ್​ ಸಖತ್​ ನಿದ್ದೆಯನ್ನೂ ಮಾಡಿದೆ. ಮನೆಯ ಕಿಟಕಿಯೊಂದರಿಂದ ಹುಲಿ ಮಲಗಿರುವುದು ಮತ್ತು ಇನ್ನಿತರ ಫೋಟೋಗಳನ್ನು ಅರಣ್ಯಾಧಿಕಾರಿಗಳು ಕ್ಲಿಕ್ಕಿಸಿದ್ದಾರೆ. ಈ ಫೋಟೋಗಳನ್ನು Wildlife Trust India ಟ್ವೀಟ್​ ಮಾಡಿ ರಾಯಲ್​ ಬೆಂಗಾಲ್​ ಟೈಗರ್​​ ಹವಾ ಬಿಂಬಿಸಿದೆ.

ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಸಖತ್​ ಸುದ್ದಿ ಸಹ ಆಗಿದೆ. ಬೆಡ್​ ಮೇಲೆ ಬ್ರೇಕ್​ಫಾಸ್ಟ್​ ಮಾಡುತ್ತಿದೆ ಎಂದು ನೆಟಿಜೆನ್ಸ್​ ಕಮೆಂಟ್ಸ್​ ಜೊತೆ ಕಾಂಪ್ಲಿಮೆಂಟ್​ ಸಹ ಕೊಟ್ಟಿದ್ದಾರೆ. ಭಾರೀ ಪ್ರವಾಹದ ಕಾರಣದಿಂದಾಗಿ ಕಾಜಿರಂಗ ನ್ಯಾಷನಲ್ ಪಾರ್ಕ್​ನ ಶೇ. 95ರಷ್ಟು ಭಾಗ ನೀರಿನಲ್ಲಿ ಮುಳುಗಡೆ ಆಗಿದೆ. ಪರಿಸ್ಥಿತಿ ಗಂಭೀರವಾಗಿರುವುದರಿಂದಾಗಿ ಅರಣ್ಯಾಧಿಕಾರಿಗಳು ಇಲಾಖೆ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ತೊಡಗುವಂತೆ ಆದೇಶಿಸಿದ್ದಾರೆ.

ABOUT THE AUTHOR

...view details