ಪಿಲಿಬಿಟ್ (ಉತ್ತರಪ್ರದೇಶ): ವರುಣ್ ಗಾಂಧಿ ಪ್ರತಿನಿಧಿಸುವಪಿಲಿಬಿಟ್ ಕ್ಷೇತ್ರದ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಹುಲಿ ದಾಳಿಯಿಂದ ಮತ್ತೊಬ್ಬ ಯುವಕ ಸಾವನಪ್ಪಿದ್ದಾನೆ. 28 ವರ್ಷದ ಮಾಲಾ ಕಾಲೋನಿಯ ನಿವಾಸಿ ಕೃಷ್ಣಾ ರೈ ಅರಣ್ಯ ಪ್ರದೇಶದಲ್ಲಿ ಹುಲಿ ದಾಳಿಗೆ ತುತ್ತಾಗಿದ್ದಾನೆ. ಇದು ಈ ವರ್ಷ ದಾಖಲಾದ 4ನೇ ಪ್ರಕರಣವಾಗಿದೆ. ಕಳೆದ ತಿಂಗಳು ಇದೇ ಗ್ರಾಮದ 50 ವರ್ಷದ ಮಹಿಳೆ ಸಹ ಹುಲಿ ದಾಳಿಯಿಂದ ಸಾವನಪ್ಪಿದ್ದರು.
ಈ ಪ್ರದೇಶದ ಅರಣ್ಯದಲ್ಲಿ 4ನೇ ಬಲಿಪಡೆದ ಹುಲಿ - ಹುಲಿ ದಾಳಿಗೆ ಯುವಕ ಬಲಿ
ಉತ್ತರಪ್ರದೇಶದ ಪಿಲಿಬಿಟ್ ಅರಣ್ಯ ಪ್ರದೇಶದಲ್ಲಿ ಹುಲಿ ದಾಳಿ ತೀವ್ರಗೊಂಡಿದೆ. ಇಲ್ಲಿನ ಮಾಲಾ ಹುಲಿ ಮೀಸಲು ಅರಣ್ಯ ಭಾಗದಲ್ಲಿ 28 ವರ್ಷದ ವ್ಯಕ್ತಿ ಮೇಲೆ ಹುಲಿ ದಾಳಿ ನಡೆಸಿ ಕೊಂದು ಹಾಕಿದೆ. ಈ ವರ್ಷದಲ್ಲಿ ನಡೆದ 4ನೇ ಪ್ರಕರಣ ಇದಾಗಿದ್ದು, ಕಳೆದ ತಿಂಗಳ ಅಂತ್ಯದಲ್ಲಿ 50 ವರ್ಷದ ಮಹಿಳೆಯನ್ನು ಇದೇ ಹುಲಿ ದಾಳಿಗೆ ತುತ್ತಾಗಿ ಅಸುನೀಗಿದ್ದರು.
ಉತ್ತರ ಪ್ರದೇಶದ ಪಿಲಿಬಿಟ್ ಅರಣ್ಯದಲ್ಲಿ 4ನೇ ಬಲಿಪಡೆದ ಹುಲಿ
ಘಟನೆ ಬಳಿಕ ಜನ ಲಾಕ್ಡೌನ್ ಆದೇಶವನ್ನೂ ದಿಕ್ಕರಿಸಿ ಘಟನಾ ಸ್ಥಳಕ್ಕೆ ಬಂದು ಅರಣ್ಯ ಇಲಾಖೆಯ ಅಧಿಕಾರಿಗಳು ವಿರುದ್ಧ ಪ್ರತಿಭಟನೆ ನಡೆಸಿದರು. ಈ ವೇಳೆ ಸ್ಥಳಕ್ಕಾಗಮಿಸಿದ ಪಿಲಿಬಿಟ್ ಸದರ್ ತಹಶೀಲ್ದಾರ್ ವಿವೇಕ್ ಕುಮಾರ್ ಮಿಶ್ರಾ ಮೃತಪಟ್ಟ ವ್ಯಕ್ತಿಯ ಕುಟುಂಬಸ್ಥರಿಗೆ 4 ಲಕ್ಷ ರೂಪಾಯಿ ಪರಿಹಾರ ಘೋಷಿಸಿದರು.