ಕರ್ನಾಟಕ

karnataka

ETV Bharat / bharat

ಭಾರತದ ಬತ್ತಳಿಕೆಯಲ್ಲಿ ‘ನಿಶ್ಯಬ್ದ ಹಂತಕ’ ರಫೆಲ್​ ; ಶತ್ರುಗಳ ಎದೆಯಲ್ಲಿ ನಡುಕ - Rafael fighter jet news

ಸ್ಕ್ಯಾಲ್ಪ್‌ ಕ್ರೂಯ್ಸ್‌ ಮಿಸೈಲ್‌ ನೆಲದ ಮೇಲಿನ ಗುರಿಗಳನ್ನು ನಾಶ ಮಾಡುವಂಥದು. 300 ಕಿ.ಮೀಗಳಿಗೂ ಅಧಿಕ ದೂರದಲ್ಲಿರುವ ಶತ್ರು ನೆಲೆಗಳನ್ನು ನಾಶ ಮಾಡುವ ಸಾಮರ್ಥ್ಯವನ್ನು ಇದು ಹೊಂದಿದೆ. ಮೈಕಾ ಕ್ಷಿಪಣಿ ಹತ್ತಿರದಲ್ಲಿರುವ ಶತ್ರು ವಿಮಾನವನ್ನು ಆಗಸದಲ್ಲಿಯೇ ಹೊಡೆದುರುಳಿಸಬಲ್ಲುದು..

ರಫೆಲ್‌ ಯುದ್ಧವಿಮಾನ
ರಫೆಲ್‌ ಯುದ್ಧವಿಮಾನ

By

Published : Jul 29, 2020, 6:58 PM IST

ಇನ್ನು ಮುಂದೆ ಪಾಕಿಸ್ತಾನದಲ್ಲಿರುವ ಭಯೋತ್ಪಾದಕರ ನೆಲೆಗಳ ಮೇಲೆ ದಾಳಿ ನಡೆಸಬೇಕೆಂದರೆ ನಾವು ಆ ದೇಶದ ವ್ಯಾಪ್ತಿಯೊಳಗೆ ಪ್ರವೇಶ ಮಾಡುವ ಅವಶ್ಯಕತೆ ಇಲ್ಲ. ನಮ್ಮ ವಾಯು ಪ್ರದೇಶದಲ್ಲಿ ಇದ್ದುಕೊಂಡೇ ನೆರೆಯ ದೇಶದಲ್ಲಿರುವ ಭಯೋತ್ಪಾದಕರ ನೆಲೆಗಳ ಮೇಲೆ ನಮ್ಮ ವಾಯುಪಡೆ ಕೋಲ್ಮಿಂಚಿನ ಮಳೆಯನ್ನೇ ಸುರಿಸಬಹುದು. ಅದೂ ಯಾವುದೇ ಸಂಶಯಕ್ಕೆ ಆಸ್ಪದ ನೀಡದಂತೆ, ರಫೆಲ್‌ ಯುದ್ಧವಿಮಾನಗಳ ಆಗಮನದೊಂದಿಗೆ, ಅಂತಹ ಅಸಾಧ್ಯ ಎನಿಸುವ ಸಂಗತಿಗಳು ಇನ್ನು ಮುಂದೆ ಸಾಧ್ಯ ಎನಿಸಲಿವೆ. ಬೆಟ್ಟಗಳಿಂದ ತುಂಬಿದ, ಚೀನಾ ಗಡಿಗೆ ಹತ್ತಿರ ಇರುವ ಲೇಹ್‌ನಂತಹ ಪ್ರದೇಶಗಳಿಂದಲೂ ಈ ಯುದ್ಧವಿಮಾನ ಸುಲಭವಾಗಿ ಟೇಕಾಫ್‌ ಆಗಬಲ್ಲುದು.

ರಫೆಲ್‌ ಅಂದರೆ ಫ್ರೆಂಚ್‌ ಭಾಷೆಯಲ್ಲಿ ‘ಬೆಂಕಿಯ ಆಸ್ಫೋಟ’ ಎಂದರ್ಥ. ಹೆಸರಿಗೆ ತಕ್ಕಂತೆ ಭಾರತದ ಶತ್ರುಗಳ ಪಾಲಿಗೆ ಬೆಂಕಿಯ ಸುಂಟರಗಾಳಿಯಾಗಲಿದೆ ರಫೆಲ್‌. ಫ್ರಾನ್ಸ್‌ ಮತ್ತು ಈಜಿಪ್ತ್‌ನಂತಹ ದೇಶಗಳು ಈಗಾಗಲೇ ರಫೆಲ್‌ ಯುದ್ಧವಿಮಾನಗಳನ್ನು ಹೊಂದಿವೆ. ಆದರೆ, ಭಾರತಕ್ಕೆ ಮಾದರಿಗಳು ಅತ್ಯಂತ ಆಧುನಿಕವಾದಂಥವು. ಇಸ್ರೇಲ್‌ನಂತಹ ದೇಶಗಳಿಂದ ಇನ್ನಷ್ಟು ಆಧುನಿಕ ವ್ಯವಸ್ಥೆಗಳನ್ನು ಖರೀದಿಸಿ ಅವನ್ನು ಜೋಡಿಸುವ ಮೂಲಕ, ಭಾರತದ ಶತ್ರುಗಳ ಪಾಲಿಗೆ ರಫೆಲ್‌ ಯುದ್ಧವಿಮಾನ ಮಾರಕವಾಗಿ ರೂಪಾಂತರ ಹೊಂದಿದೆ.

ಮಿಟಿಯರ್‌ ಕ್ಷಿಪಣಿಯು ಆಕಾಶದಿಂದ ಆಕಾಶಕ್ಕೆ ಗುರಿಗಳನ್ನು ತಡೆಗಟ್ಟುವ ಸಾಮರ್ಥ್ಯ ಹೊಂದಿದೆ. ಶತ್ರು ಯುದ್ಧ ವಿಮಾನಗಳನ್ನು, ಡ್ರೋನ್‌ಗಳನ್ನು ಹಾಗೂ 150 ಕಿ.ಮೀ ವ್ಯಾಪ್ತಿಯ ನಿರ್ದೇಶಿತ ಕ್ಷಿಪಣಿಗಳನ್ನು ಹೊಡೆದುರುಳಿಸಬಲ್ಲುದು. ನಮ್ಮ ಯುದ್ಧವಿಮಾನದ ಅಸ್ತಿತ್ವ ತಿಳಿಯುವ ಮುನ್ನವೇ ಶತ್ರು ಯುದ್ಧವಿಮಾನದ ಕತೆ ಮುಗಿದಿರುತ್ತದೆ. ರೆಡಾರ್‌ ನಿರ್ದೇಶಿತ ಮಿಟಿಯರ್‌ ಕ್ಷಿಪಣಿಯು ‘ರಾಕೆಟ್‌ ರ‍್ಯಾಮ್‌ ಜೆಟ್‌ ಮೋಟಾರ್‌’ ಹೊಂದಿದೆ. ಇದರ ಪರಿಣಾಮವಾಗಿ, ಕ್ಷಿಪಣಿಯ ಇಂಜಿನ್‌ ಸಾಮರ್ಥ್ಯ ಅತ್ಯಂತ ಉನ್ನತವಾಗಿರುತ್ತದೆ. ಎಲ್ಲಾ ರೀತಿಯ ಹವಾಮಾನ ಪರಿಸ್ಥಿತಿಗಳಲ್ಲಿಯೂ ಇದು ಕೆಲಸ ಮಾಡಬಲ್ಲುದು.

ಸ್ಕ್ಯಾಲ್ಪ್‌ ಕ್ರೂಯ್ಸ್‌ ಮಿಸೈಲ್‌ ನೆಲದ ಮೇಲಿನ ಗುರಿಗಳನ್ನು ನಾಶ ಮಾಡುವಂಥದು. 300 ಕಿ.ಮೀಗಳಿಗೂ ಅಧಿಕ ದೂರದಲ್ಲಿರುವ ಶತ್ರು ನೆಲೆಗಳನ್ನು ನಾಶ ಮಾಡುವ ಸಾಮರ್ಥ್ಯವನ್ನು ಇದು ಹೊಂದಿದೆ. ಮೈಕಾ ಕ್ಷಿಪಣಿ ಹತ್ತಿರದಲ್ಲಿರುವ ಶತ್ರು ವಿಮಾನವನ್ನು ಆಗಸದಲ್ಲಿಯೇ ಹೊಡೆದುರುಳಿಸಬಲ್ಲುದು. ಇದು 80 ಕಿ.ಮೀ ವ್ಯಾಪ್ತಿ ಹೊಂದಿದ್ದು, ‘ನಿಶ್ಯಬ್ದ ಹಂತಕ’ ಎಂದೇ ಹೆಸರಾಗಿದೆ.

ರಫೆಲ್‌ ಯುದ್ಧವಿಮಾನ

ಸ್ಪೆಕ್ಟ್ರಾ ಎಂಬುದು ಎಲೆಕ್ಟ್ರಾನಿಕ್‌ ಯುದ್ಧ ವ್ಯವಸ್ಥೆಯಾಗಿದೆ. ಶತ್ರು ರೆಡಾರ್‌ಗಳನ್ನು ಮಧ್ಯೆಯೇ ತಡೆಹಿಡಿದು ಆಗಸದಲ್ಲಿ ರಫೆಲ್‌ ಇರುವ ಸ್ಥಳವನ್ನು ಮರೆಮಾಚುತ್ತದೆ. ಶಕ್ತಿಶಾಲಿ ಜಾಮರ್‌ಗಳು (ತಡೆ ವ್ಯವಸ್ಥೆ), ಲೇಸರ್‌ ಎಚ್ಚರಿಕೆ ರಿಸೀವರ್‌ಗಳು ಹಾಗೂ 360 ಡಿಗ್ರಿ ಕೋನದಲ್ಲಿದ್ದರೂ ಒಳ ಬರುತ್ತಿರುವ ಶತ್ರು ಕ್ಷಿಪಣಿಗಳನ್ನು ಪತ್ತೆ ಹಚ್ಚಬಲ್ಲ ವ್ಯವಸ್ಥೆ ಹೊಂದಿರುವ ಇದು, ಪೈಲಟ್‌ನನ್ನು ಎಚ್ಚರಿಸುತ್ತದೆ.

ಜೊತೆಗೆ, ಗುರಿಗಳ ಮೇಲೆ ದಾಳಿ ನಡೆಸಲು ಪೈಲಟ್‌ಗೆ ಇದು ನೆರವಾಗುತ್ತದೆ. ಫ್ಲೇರ್‌ (ಬೆಂಕಿ ಮಳೆ) ಹಾಗೂ ಚಾಫ್‌ (ಲೋಹ ತುಣುಕು) ಸುರಿಸುವ ಎಳೆದೊಯ್ಯಲ್ಪಡುವ (ಟೋಡ್‌) ಮರಸು ವ್ಯವಸ್ಥೆಗಳು ಶತ್ರು ರೆಡಾರ್‌ಗಳು ಹಾಗೂ ಕ್ಷಿಪಣಿ ಉಡಾವಣಾ ವ್ಯವಸ್ಥೆಯಲ್ಲಿ ಗೊಂದಲ ಮೂಡಿಸುವುದಲ್ಲದೇ ಅವುಗಳ ಗಮನವನ್ನು ಬೇರೆಡೆಗೆ ಹರಿಸುತ್ತವೆ. ಇದರ ಪರಿಣಾಮವಾಗಿ, ಈ ಯುದ್ಧ ವಿಮಾನವು ಶತ್ರುವಿನ ಮೇಲೆ ದಾಳಿ ನಡೆಸಿ ಯಾವುದೇ ರೀತಿಯಿಂದ ಘಾಸಿಗೊಳ್ಳದೇ ಯಶಸ್ವಿಯಾಗಿ ಹಿಂದಿರುಗಬಲ್ಲುದು.

RBE-2A Active Electronically Scanned Array (AESA)‌ ಬಹು ವಿಧದ ರೆಡಾರ್ :ವಿಮಾನದ ಹಿಂಬದಿಯಲ್ಲಿ ಸ್ಥಿರವಾಗಿದ್ದರೂ 128 ಮೈಲುಗಳಿಗೂ ಹೆಚ್ಚು ವ್ಯಾಪ್ತಿಯಲ್ಲಿ ನೂರಾರು ಗುರಿಗಳ ಮೇಲೆ ನಿಗಾ ಇಡುವ ಸಾಮರ್ಥ್ಯವನ್ನು ಈ ಎಲೆಕ್ಟ್ರಾನಿಕ್‌ ರೆಡಾರ್‌ ವ್ಯವಸ್ಥೆ ಹೊಂದಿದೆ. ಏಕಕಾಲದಲ್ಲಿ ಇದು 8 ಗುರಿಗಳ ಮೇಲೆ ನಿಗಾ ಇಡಬಲ್ಲುದು. ಆಕಾಶದಲ್ಲಿನ ಅಪಾಯಗಳನ್ನು ಗುರುತಿಸಿ, ಅವುಗಳನ್ನು ವಿಶಿಷ್ಟವಾಗಿ ವರ್ಗೀಕರಿಸುವುದಲ್ಲದೇ ಆ ಎಲ್ಲಾ ವಿವರಗಳನ್ನು ಪೈಲಟ್‌ಗೆ ರವಾನಿಸುತ್ತದೆ.

ರಫೆಲ್‌ನ ಕಾಕ್‌ಪಿಟ್‌ ಅತ್ಯಂತ ಆಧುನಿಕವಾಗಿದ್ದು, ಹೊಲೊಗ್ರಾಫಿಕ್‌ (ಪ್ರತಿಫಲಿಸುವ) ಕಾಕ್‌ಪಿಟ್‌ ಪ್ರದರ್ಶನಾ ವ್ಯವಸ್ಥೆಯಿಂದ ನಿರ್ಮಾಣವಾಗಿದೆ. ಇದರಿಂದಾಗಿ ಯುದ್ಧವಿಮಾನಗಳ ನಿಯಂತ್ರಣ, ಯೋಜನಾ ದತ್ತಾಂಶ ನಿರ್ವಹಣೆ ಹಾಗೂ ಶಸ್ತ್ರ ಉಡಾವಣೆ ಹೆಚ್ಚು ಸರಳವಾಗಿದೆ.

ತಲೆಯ ಮೇಲ್ಭಾಗದಲ್ಲಿ ಪ್ರದರ್ಶನ ವ್ಯವಸ್ಥೆ ಇರುವುದರಿಂದ, ಮಹತ್ವದ ವಿವರಗಳನ್ನು ನೋಡಲು ಪೈಲಟ್‌ ತನ್ನ ತಲೆಯನ್ನು ತಗ್ಗಿಸಬೇಕಿಲ್ಲ. ವಿಮಾನವು ಅತ್ಯಾಧುನಿಕ ಲೇಪನ ಹೊಂದಿದ್ದು, ಇದು ಶತ್ರು ರೆಡಾರ್‌ ಅಲೆಗಳನ್ನು ಪ್ರತಿಫಲಿಸಲು ಬಿಡದೇ ಹೀರಿಕೊಂಡು ಬಿಡುತ್ತದೆ. 30 ಮಿ.ಮೀ ವ್ಯಾಸದ ಸಣ್ಣ ಫಿರಂಗಿಯನ್ನೂ ಇದು ಒಳಗೊಂಡಿದ್ದು ಶಕ್ತಿಶಾಲಿ ಗುಂಡುಗಳನ್ನು ಸಿಡಿಸಬಲ್ಲುದು. ಆಗಸದಲ್ಲಿಯೇ ಇಂಧನ ಭರ್ತಿ ಮಾಡುವ ಸಾಮರ್ಥ್ಯವಿದೆ. ಅವಶ್ಯಕತೆ ಬಂದರೆ, ಈ ವಿಮಾನದಿಂದ ಇತರ ಯುದ್ಧ ವಿಮಾನಗಳಿಗೂ ಆಗಸದಲ್ಲಿಯೇ ಇಂಧನ ಮರುಭರ್ತಿ ಮಾಡಬಹುದು.

ನಮ್ಮ ಅವಶ್ಯಕತೆಗಳಿಗೆ ತಕ್ಕಂತೆ :ತನ್ನ ರಕ್ಷಣಾ ಅವಶ್ಯಕತೆಗಳಿಗೆ ಸೂಕ್ತವಾಗುವಂತೆ ಭಾರತವು ರಫೆಲ್‌ನಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿದೆ. ಅತ್ಯಾಧುನಿಕ ಹೆಲ್ಮೆಟ್‌ ಪ್ರದರ್ಶನಾ ಸಾಧನವನ್ನು ಇಸ್ರೇಲ್‌ನಲ್ಲಿ ಸಿದ್ಧಪಡಿಸಲಾಗಿದೆ. ಇದರಿಂದಾಗಿ ಶಸ್ತ್ರಾಸ್ತ್ರ ಉಡಾವಣೆ ಉತ್ತಮ ರೀತಿಯಲ್ಲಿ ಸಾಧ್ಯವಾಗಲಿದೆ.

ರೆಡಾರ್‌ ಎಚ್ಚರಿಕೆ ರಿಸೀವರ್‌ಗಳು :

  • ಕೆಳ ತರಂಗಾಂತರದ ಜಾಮರ್‌ಗಳು (ನಿರೋಧಕಗಳು)
  • 10 ಗಂಟೆಗಳ ವೈಮಾನಿಕ ದತ್ತಾಂಶ ಸಂಗ್ರಹ ಸೌಲಭ್ಯ
  • ಇನ್ಫ್ರಾರೆಡ್‌ ಶೋಧ ಮತ್ತು ಹಿಂಬಾಲಿಸುವ ವ್ಯವಸ್ಥೆ
  • ‘ಕೋಲ್ಡ್‌ ಇಂಜಿನ್‌ ಸ್ಟಾರ್ಟ್‌’ (ಇದ್ದಕ್ಕಿದ್ದಂತೆ ಎಂಜಿನ್‌ ಪ್ರಾರಂಭಿಸಬಲ್ಲ) ಸಾಮರ್ಥ್ಯ. ಇದರಿಂದಾಗಿ ಲೇಹ್‌ನಂತಹ ಅತಿ ಎತ್ತರದ ಪ್ರದೇಶಗಳಲ್ಲಿಯೂ ಈ ಯುದ್ಧವಿಮಾನಗಳನ್ನು ಸೇವೆಗೆ ತೊಡಗಿಸಲು ಸಾಧ್ಯ.
  • ಹ್ಯಾಮರ್‌ ಕ್ಷಿಪಣಿ ವ್ಯವಸ್ಥೆ. ಇದು 60 ಕಿ.ಮೀ ಅಂತರದಲ್ಲಿರುವ ಗುರಿಗಳನ್ನು ನಾಶ ಮಾಡಬಲ್ಲುದು.

ಪರಿಪೂರ್ಣ ಬಹು ಉದ್ದೇಶದ ಯುದ್ಧ ವಿಮಾನ :ವಿಶೇಷ ‘ಡೆಲ್ಟಾ’ ವಿನ್ಯಾಸದ ರೆಕ್ಕೆಗಳಿಂದಾಗಿ ಈ ವಿಮಾನವು ವೈಮಾನಿಕ ಕಸರತ್ತುಗಳನ್ನು ಇನ್ನಷ್ಟು ಲೀಲಾ ಜಾಲವಾಗಿ ಮಾಡಬಲ್ಲುದು. ಗಾಳಿಯ ವೇಗಕ್ಕಿಂತ ಹೆಚ್ಚಿನ ವೇಗದಲ್ಲಿಯೂ ಸ್ಥಿರವಾಗಿ ಇರಬಲ್ಲುದು. ತನ್ನ ವಿಶಿಷ್ಟ ರಚನೆ, ಶಸ್ತ್ರಾಸ್ತ್ರಗಳು ಹಾಗೂ ಸಂವೇದಕಗಳಿಂದಾಗಿ, ಇದನ್ನು ಪರಿಪೂರ್ಣ ಬಹು ಉದ್ದೇಶದ ಯುದ್ಧ ವಿಮಾನ ಎಂದು ಪರಿಗಣಿಸಲಾಗಿದೆ.

ವಾಯು ಪ್ರದೇಶವನ್ನು ರಕ್ಷಿಸುತ್ತದೆ, ಭೂ ಸೇನೆಗೆ ಬೆಂಬಲ ನೀಡುತ್ತದೆ, ಶತ್ರುವಿನ ಪ್ರದೇಶದಲ್ಲಿ ನುಸುಳಿ ದಾಳಿ ನಡೆಸುತ್ತದೆ, ಬೇಹುಗಾರಿಕೆ ಮಾಡಬಲ್ಲುದು ಹಾಗೂ ಯುದ್ಧ ನೌಕೆಗಳನ್ನು ಸಹ ನಾಶ ಮಾಡಬಲ್ಲುದು. ಶತ್ರು ರೆಡಾರ್‌ಗಳನ್ನು ನಿಷ್ಕ್ರಿಯಗೊಳಿಸಬಲ್ಲುದು. ಜಲ, ನೆಲ ಹಾಗೂ ಆಗಸದಲ್ಲಿ ಶತ್ರುಗಳ ಸುಳಿವನ್ನು ಗ್ರಹಿಸಬಲ್ಲುದು.

ಇವನ್ನು ಎಲ್ಲಿ ನಿಯೋಜಿಸಲಾಗಿದೆ?

  • ಫಸ್ಟ್‌ ಸ್ಕ್ವಾಡ್ರನ್‌: 17 ಸ್ಕ್ವಾಡ್ರನ್‌ (ಗೋಲ್ಡನ್‌ ಆರೋಸ್‌), ಅಂಬಾಲ
  • ಸೆಕೆಂಡ್‌ ಸ್ಕ್ವಾಡ್ರನ್‌: 101 ಸ್ಕ್ವಾಡ್ರನ್‌ (ಫಾಲ್ಕನ್ಸ್‌), ಹಾಸಿಮಾರ, ಪಶ್ಚಿಮ ಬಂಗಾಳ

ಇವುಗಳ ನಿಯೋಜನೆಗೆ ಬೇಕಾದ ವ್ಯವಸ್ಥೆಯನ್ನು ಭಾರತ ಆಗಲೇ ಸಿದ್ಧಪಡಿಸಿಕೊಂಡಿದೆ. ಭಾರತಕ್ಕೆ ನೀಡಲಾಗಿರುವ 36 ಯುದ್ಧ ವಿಮಾನಗಳ ಪೈಕಿ, 6 ತರಬೇತಿ ವಿಮಾನಗಳಿವೆ.

ABOUT THE AUTHOR

...view details