ಕರ್ನಾಟಕ

karnataka

ETV Bharat / bharat

ದಾವೂದ್​ ಹೆಸರಲ್ಲಿ ಮಹಾರಾಷ್ಟ್ರ ಸಿಎಂ ಉದ್ಧವ್​ ಠಾಕ್ರೆ ನಿವಾಸಕ್ಕೆ ಬೆದರಿಕೆ ಕರೆ! - ಮಹಾರಾಷ್ಟ್ರ ಸಿಎಂ ಉದ್ಧವ್​ ಠಾಕ್ರೆ ನಿವಾಸಕ್ಕೆ ಬೆದರಿಕೆ ಕರೆ

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ನಿವಾಸ ಸ್ಫೋಟಿಸುವುದಾಗಿ ದುಬೈನಿಂದ ಭೂಗತ ಪಾತಕಿ ದಾವೂದ್​ ಹೆಸರಲ್ಲಿ ಕರೆ ಮಾಡಿ ಬೆದರಿಕೆ ಹಾಕಲಾಗಿದೆ.

thretning call to maharastra cm uddhava thackery
ಮಹಾರಾಷ್ಟ್ರ ಸಿಎಂ ಉದ್ಧವ್​ ಠಾಕ್ರೆ ನಿವಾಸಕ್ಕೆ ಬೆದರಿಕೆ ಕರೆ

By

Published : Sep 6, 2020, 5:47 PM IST

Updated : Sep 6, 2020, 6:00 PM IST

ಮುಂಬೈ:ಮಹಾರಾಷ್ಟ್ರ ಸಿಎಂ ಉದ್ಧವ್​ ಠಾಕ್ರೆ ನಿವಾಸಕ್ಕೆ ಅಂಡರ್​ವರ್ಲ್ಡ್​​ ಡಾನ್​ ದಾವೂದ್​ ಇಬ್ರಾಹಿಂ ಹೆಸರಲ್ಲಿ ಬೆದರಿಕೆ ಕರೆವೊಂದು ಬಂದಿದೆ.

ಇಲ್ಲಿನ ಬಾಂದ್ರಾದಲ್ಲಿರುವ ಉದ್ಧವ್​ ಠಾಕ್ರೆ ನಿವಾಸ 'ಮಾತೋಶ್ರೀ'ಯನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಲಾಗಿದೆ. ದುಬೈನಿಂದ ದಾವೂದ್​ ಇಬ್ರಾಹಿಂ ಹೆಸರಲ್ಲಿ ಬೆದರಿಕೆ ಕರೆ ಬಂದಿದ್ದು, ಮನೆ ಸ್ಫೋಟಿಸುವುದಾಗಿ ಹೆದರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸಿಎಂ ಉದ್ಧವ್​ ನಿವಾಸಕ್ಕೆ ಬಿಗಿ ಭದ್ರತೆ ಹೆಚ್ಚಿಸಲಾಗಿದೆ.

ದುಷ್ಕರ್ಮಿಗಳು ಮೂರರಿಂದ ನಾಲ್ಕು ಬಾರಿ ಲ್ಯಾಂಡ್​ ಫೋನ್​ಗೆ ಕರೆ ಮಾಡಿ ಬೆದರಿಸಿದ್ದು, ಆತಂಕದ ವಾತಾವರಣ ನಿರ್ಮಾಣವಾಗಿದೆ.

ಮಾತೋಶ್ರೀನಲ್ಲಿನ ಲ್ಯಾಂಡ್‌ಲೈನ್‌ನಲ್ಲಿ 2 ಕರೆಗಳು ಬಂದ ನಂತರ ಮುನ್ನೆಚ್ಚರಿಕೆ ಕ್ರಮವಾಗಿ ಮಹಾರಾಷ್ಟ್ರ ಸಿಎಂ ಅವ ಮಾತೋಶ್ರೀ ನಿವಾಸದ ಭದ್ರತೆಯನ್ನು ಬಿಗಿಗೊಳಿಸಲಾಯಿತು. ಕರೆ ಮಾಡಿದವರು ದಾವೂದ್ ಇಬ್ರಾಹಿಂ ಪರವಾಗಿ ಕರೆ ಮಾಡುತ್ತಿರುವುದಾಗಿ ಮತ್ತು ಸಿಎಂ ಅವರೊಂದಿಗೆ ಮಾತನಾಡಲು ಬಯಸಿದ್ದರು. ಕರೆ ಮಾಡಿದವರನ್ನು ಪತ್ತೆ ಮಾಡಲು ತನಿಖೆ ಶುರು ಮಾಡಿರುವುದಾಗಿ ಮುಂಬೈ ಪೊಲೀಸರು ಮಾಹಿತಿ ನೀಡಿದ್ದಾರೆ.

Last Updated : Sep 6, 2020, 6:00 PM IST

ABOUT THE AUTHOR

...view details