ಕರ್ನಾಟಕ

karnataka

ETV Bharat / bharat

ಮ್ಯಾನ್​ಹೋಲ್​ಗೆ ಬಿದ್ದ 3 ವರ್ಷದ ಮಗು.. ಸಿಸಿಟಿವಿಯಲ್ಲಿ ಸೆರೆಯಾಯ್ತು ದೃಶ್ಯ - undefined

ಮುಂಬೈನಲ್ಲಿ ಬಾಲಕನೋರ್ವ ಆಟವಾಡುತ್ತಾ ಬಂದು ಮ್ಯಾನ್​ ಹೋಲ್​​​ ವೊಂದಕ್ಕೆ ಬಿದ್ದಿದ್ದು, ಬಾಲಕನ ರಕ್ಷಣೆಗೆ ಸ್ಥಳೀಯ ಆಡಳಿತ ನಿರಂತರವಾಗಿ ಪ್ರಯತ್ನಿಸುತ್ತಿದೆ.

3 ವರ್ಷದ ಮಗು

By

Published : Jul 11, 2019, 9:35 AM IST

ಮುಂಬೈ: ದೇಶದ ವಾಣಿಜ್ಯ ನಗರಿ ಮುಂಬೈನಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಓರ್ವ ಬಾಲಕ ರಸ್ತೆಯ ಬದಿಲ್ಲಿನ ಮ್ಯಾನ್​ ಹೋಲ್​​ವೊಂದಕ್ಕೆ ಬಿದ್ದಿದ್ದಾನೆ.

ಇಲ್ಲಿನ ಅಂಬೇಡ್ಕರ್​ ನಗರದ ಗೋರೇಗಾಂವ್​ ಬಳಿ ನಿನ್ನೆ ರಾತ್ರಿ 10:24 ರ ಸುಮಾರಿಗೆ 3 ವರ್ಷದ ಬಾಲಕನೊಬ್ಬ ಆಟವಾಡುತ್ತಾ ಬಂದು ಮ್ಯಾನ್​ ಹೋಲ್​ಗೆ ಬಿದ್ದಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಮಗುವಿನ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.

ಈ ಡ್ರೈನೇಜ್​ ಮೂರರಿಂದ ನಾಲ್ಕು ಅಡಿ ಆಳವಾಗಿದೆ. ಭಾರಿ ಮಳೆಯ ಹಿನ್ನೆಲೆಯಲ್ಲಿ ಈ ಕಾಲುವೆಗಳಲ್ಲಿ ನೀರಿನ ಪ್ರಮಾಣ ಜಾಸ್ತಿ ಇದ್ದು, ಕಾಲುವೆ 10-15 ಅಡಿ ಆಳದ ರಾಜಕಾಲುವೆಯನ್ನ ಸೇರುತ್ತದೆ ಎನ್ನಲಾಗಿದೆ. ಇದೀಗ ಬಾಲಕನ ರಕ್ಷಣೆಗೆ ಸ್ಥಳೀಯ ಆಡಳಿತ ನಿರಂತರವಾಗಿ ಪ್ರಯತ್ನಿಸುತ್ತಿದೆ.

For All Latest Updates

TAGGED:

ABOUT THE AUTHOR

...view details