ಕರ್ನಾಟಕ

karnataka

ETV Bharat / bharat

ಜೆಎನ್‌ಯು ಹಿಂಸಾಚಾರ ಪ್ರಕರಣ:  ಮೂವರು ಶಂಕಿತ ಆರೋಪಿಗಳು ಪರಾರಿ..? - ವಾರ್ಸಿಟಿ ಕ್ಯಾಂಪಸ್‌ನಲ್ಲಿ ನಡೆದ ಹಿಂಸಾಚಾರ

ಜೆಎನ್‌ಯು ಹಿಂಸಾಚಾರ ಪ್ರಕರಣದ ಶಂಕಿತ ಆರೋಪಿಗಳು ಪರಾರಿಯಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಫೋರೆನ್ಸಿಕ್ ಸೈನ್ಸ್ ಲ್ಯಾಬೊರೇಟರಿ (ಎಫ್‌ಎಸ್‌ಎಲ್) ತಂಡವು ನಿನ್ನೆ ಇಡೀ ದಿನ ಸರ್ವರ್‌ನಿಂದ ಸಿಸಿಟಿವಿ ದೃಶ್ಯಾವಳಿಗಳನ್ನು ಪಡೆದುಕೊಳ್ಳಲು ಹರಸಾಹಸಪಟ್ಟಿದೆ. ಈ ಸಂಬಂಧ ಇಂದೂ ಕೂಡಾ ದೆಹಲಿ ಪೊಲೀಸರು ತನಿಖೆ ಹಾಗೂ ಪರಿಶೀಲನೆ ಮುಂದುವರೆಸಲಿದ್ದಾರೆ.

suspects in JNU violence
ಜೆಎನ್‌ಯು ಹಿಂಸಾಚಾರ ಪ್ರಕರಣ

By

Published : Jan 15, 2020, 10:40 AM IST

ನವದೆಹಲಿ:ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ (ಜೆಎನ್‌ಯು) ಹಿಂಸಾಚಾರ ಪ್ರಕರಣದ ಮೂವರು ಶಂಕಿತ ಆರೋಪಿಗಳು ಪರಾರಿಯಾಗಿದ್ದಾರೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಕೋಮಲ್ ಶರ್ಮಾ, ರೋಹಿತ್ ಶಾ ಮತ್ತು ಅಕ್ಷತ್ ಅವಸ್ಥಿ ಪರಾರಿಯಾದ ಶಂಕಿತ ಆರೋಪಿಗಳು. ಈ ಕುರಿತು ಮಾಹಿತಿ ಕಲೆ ಹಾಕಲು ಫೋರೆನ್ಸಿಕ್ ಸೈನ್ಸ್ ಲ್ಯಾಬೊರೇಟರಿ (ಎಫ್‌ಎಸ್‌ಎಲ್) ತಂಡವು ನಿನ್ನೆ ಇಡೀ ದಿನ ಸರ್ವರ್‌ನಿಂದ ಸಿಸಿಟಿವಿ ದೃಶ್ಯಾವಳಿಗಳನ್ನು ಪಡೆದುಕೊಳ್ಳಲು ಕಾದಿದೆ. ಇಂದು ಕೂಡ ಮತ್ತೆ ಎಫ್‌ಎಸ್‌ಎಲ್ ತಂಡ ಭೇಟಿ ನೀಡಲಿದೆ.

ಜೆಎನ್​​ಯು ಮೇಲೆ ದಾಳಿ ಸಂಘಟಿಸಲು ಬಳಸಲಾಗಿರುವ ವಾಟ್ಸ್​ಆ್ಯಪ್​ ಗ್ರೂಪ್​​ನ ಸದಸ್ಯರ ಮೊಬೈಲ್​ ಫೋನ್​ಗಳನ್ನು ವಶಪಡಿಸಿಕೊಳ್ಳುವಂತೆ ದೆಹಲಿ ಹೈಕೋರ್ಟ್​ ಪೊಲೀಸರಿಗೆ ಸೂಚಿಸಿದೆ. ಪೊಲೀಸರು ಕೇಳಿದ ಸಿಸಿಟಿವಿ ದೃಶ್ಯಾವಳಿಗಳನ್ನು ಆದಷ್ಟು ಬೇಗ ಒದಗಿಸುವಂತೆ ನ್ಯಾಯಮೂರ್ತಿ ಬ್ರಿಜೇಶ್ ಸೇಥಿ ವಿಶ್ವವಿದ್ಯಾಲಯಕ್ಕೆ ಸೂಚಿಸಿದ್ದಾರೆ. ಅಲ್ಲದೇ ಈ ಘಟನೆಗೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ಪೊಲೀಸರಿಗೆ ನೀಡುವಂತೆ ವಾಟ್ಸ್​ಆ್ಯಪ್​ ಮತ್ತು ಗೂಗಲ್‌ಗೆ ನ್ಯಾಯಾಲಯ ತಿಳಿಸಿದೆ.

ವಾರ್ಸಿಟಿ ಕ್ಯಾಂಪಸ್‌ನಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಸೋಮವಾರ ಜೆಎನ್‌ಯುಎಸ್‌ಯು ಅಧ್ಯಕ್ಷೆ ಆಯಿಷೆ ಘೋಷ್, ಪಂಕಜ್ ಮಿಶ್ರಾ ಮತ್ತು ವಾಸ್ಕರ್ ವಿಜಯ್ ಅವರನ್ನು ಪ್ರಶ್ನಿಸಿ ಹೇಳಿಕೆಗಳನ್ನು ದಾಖಲಿಸಿದ್ದಾರೆ.

ABOUT THE AUTHOR

...view details