ಭಿವಂಡಿ(ಮಹಾರಾಷ್ಟ್ರ):ಥಾಣೆ ಜಿಲ್ಲೆಯ ಭಿವಂಡಿ ಪಟ್ಟಣದ ಪಟೇಲ್ ಕಾಂಪೌಂಡ್ ಪ್ರದೇಶದಲ್ಲಿ ಮೂರು ಅಂತಸ್ತಿನ ಕಟ್ಟಡವೊಂದು ಕುಸಿದು ಬಿದ್ದು, ಕನಿಷ್ಠ 10 ಮಂದಿ ಮೃತಪಟ್ಟಿದ್ದಾರೆ.
ಕಟ್ಟಡ ಕುಸಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಸುತ್ತಮುತ್ತಲಿನ ಜನರು 25 ಜನರನ್ನು ರಕ್ಷಿಸಿದ್ದಾರೆ. ಅವಶೇಷಗಳಡಿಯಲ್ಲಿ ಇನ್ನೂ 20ರಿಂದ 25 ಮಂದಿ ಸಿಲುಕಿರುವ ಸಾಧ್ಯತೆ ಇದ್ದು, ಎನ್ಡಿಆರ್ಎಫ್ ರಕ್ಷಣಾ ಕಾರ್ಯ ನಡೆಸುತ್ತಿದೆ.
ಕಟ್ಟಡ ಕುಸಿದ ಸ್ಥಳದಲ್ಲಿ ಎನ್ಡಿಆರ್ಎಫ್ ಕಾರ್ಯಾಚರಣೆ ಸ್ಥಳೀಯರು ನೀಡಿದ ಮಾಹಿತಿ ಪ್ರಕಾರ ಜಿಲಾನಿ ಹೆಸರಿನ ಅಪಾರ್ಟ್ಮೆಂಟ್ 1984ರಲ್ಲಿ ನಿರ್ಮಾಣವಾಗಿತ್ತು. ಬೆಳಗಿನ ಜಾವ 3:20ರ ಸುಮಾರಿಗೆ ಈ ಪ್ರದೇಶದಲ್ಲಿ ಕಟ್ಟಡ ಕುಸಿದಿದ್ದು, ಭಯಭೀತರಾಗಿದ್ದ ಜನರ ಕೂಗಾಟ ಕೇಳಿ ನಾವು ಓಡೋಡಿ ಬಂದೆವು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಜನರು ನಿದ್ದೆಯಲ್ಲಿದ್ದಾಗ ತಡರಾತ್ರಿ 21 ಫ್ಲ್ಯಾಟ್ಗಳನ್ನು ಹೊಂದಿರುವ ಈ ಅಪಾರ್ಟ್ಮೆಂಟ್ ಅರ್ಧದಷ್ಟು ಕುಸಿದು ಬಿತ್ತು ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.
ಅವಶೇಷಗಳಡಿಯಲ್ಲಿ ಸಿಲುಕಿದ್ದ ಮಗುವೊಂದನ್ನು ಎನ್ಡಿಆರ್ಎಫ್ ತಂಡದವರು ರಕ್ಷಿಸಿದ್ದಾರೆ. ರಕ್ಷಣಾ ಕಾರ್ಯ ಮುಂದುವರೆದಿದೆ.