ಕರ್ನಾಟಕ

karnataka

ETV Bharat / bharat

ಗಡಿಯಲ್ಲಿ ಪಾಕ್​​ನಿಂದ ಗುಂಡಿನ ದಾಳಿ: ಎರಡು ದಿನದಲ್ಲಿ ಮೂವರ ಯೋಧರು ಹುತಾತ್ಮ

ಗಡಿಯಲ್ಲಿ ಪಾಕ್ ತನ್ನ ಚಾಳಿ ಮುಂದುವರಿಸಿದೆ. ಬೇರೆ ಬೇರೆ ಕಡೆ ಪಾಕ್ ನಡೆಸಿದ ಗುಂಡಿನ ದಾಳಿಯಲ್ಲಿ ಭಾರತದ ಮೂವರು ಸೈನಿಕರು ಹುತಾತ್ಮರಾಗಿದ್ದಾರೆ. ಶತ್ರು ಪಡೆಗೆ ಭಾರತೀಯ ಪಡೆ ತಕ್ಕ ಪ್ರತ್ಯುತ್ತರ ನೀಡುತ್ತಿದೆ ಸೇನೆ ತಿಳಿಸಿದೆ.

Three soldiers killed in Pak ceasefire
ಮೂವರ ಯೋಧರು ಹುತಾತ್ಮ

By

Published : Oct 3, 2020, 5:49 AM IST

ಶ್ರೀನಗರ: ಜಮ್ಮು-ಕಾಶ್ಮೀರ ಗಡಿ ನಿಯಂತ್ರಣ ರೇಖೆ ಬಳಿ ಪಾಕ್ ಕದನ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸುತ್ತಿರುವ ಪರಿಣಾಮ ಬುಧವಾರ ರಾತ್ರಿಯಿಂದ ಭಾರತದ ಮೂವರು ಯೋಧರು ಹುತಾತ್ಮರಾಗಿದ್ದಾರೆ.

ಕುಪ್ವಾರದಲ್ಲಿ ಅ.1ರಂದು ಗುಂಡಿನ ದಾಳಿ ವೇಳೆ ಗಾಯಗೊಂಡಿದ್ದ ಹವಾಲ್ದಾರ್ ಕುಲ್ದೀಪ್ ಸಿಂಗ್ ಮತ್ತು ರೈಫಲ್​ಮ್ಯಾನ್ ಶುಭಂ ಶರ್ಮಾ ಹುತಾತ್ಮರಾಗಿದ್ದಾರೆ. ಪೂಂಛ್ ಜಿಲ್ಲೆಯ ಕೃಷ್ಣಾ ಘಾಟಿ ವಲಯದಲ್ಲಿ ಸೆ.30 ರಂದು ನಡೆದ ಗುಂಡಿನ ದಾಳಿಯಲ್ಲಿ ಲ್ಯಾನ್ಸ್ ನಾಯಕ್ ಕರ್ನಲ್ ಸಿಂಗ್ ಹುತಾತ್ಮರಾಗಿದ್ದರು.

ಪಾಕ್ ಸೇನೆಗೆ ಪ್ರತ್ಯುತ್ತರ ನೀಡುವಾಗ ಕುಲ್ದೀಪ್ ಸಿಂಗ್ ಹಾಗೂ ಶುಭಂ ಶರ್ಮಾ ಹುತಾತ್ಮರಾಗಿದ್ದಾರೆ. ಲೆ.ಜ ಬಿಎಸ್ ರಾಜು, ಚೀನಾರ್ ಕಾರ್ಪ್ಸ್ ಕಮಾಂಡರ್ ಮತ್ತು ಸೇನಾ ಪಡೆಯು ಶ್ರೀನಗರದಲ್ಲಿ ಹುತಾತ್ಮ ಸೈನಿಕರಿಗೆ ಗೌರವ ನಮನ ಸಲ್ಲಿಸಿದರು.

ಪಂಜಾಬ್ ಮೂಲದ ಹುತಾತ್ಮ ಲ್ಯಾನ್ಸ್ ನಾಯಕ್ ಕರ್ನಲ್ ಸಿಂಗ್ ಅವರ ಕುಟುಂಬಕ್ಕೆ ಪಂಜಾಬ್ ಸರ್ಕಾರ 50 ಲಕ್ಷ ರೂ. ಹಣ ಹಾಗೂ ಕುಟುಂಬದ ಓರ್ವ ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿದೆ.

ABOUT THE AUTHOR

...view details