ವಿಕಾರಾಬಾದ್:ಜಿಲ್ಲೆಯಲ್ಲಿ ಭಯಾನಕ ಅಪಘಾತ ಸಂಭವಿಸಿದೆ. ರೈಲು ಇಂಜಿನ್ ಡಿಕ್ಕಿ ಹೊಡೆದು ಮೂವರು ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ.
ಮೂಸಿ ನದಿ ಸೇತುವೆ ಮೇಲೆ 12 ರೈಲ್ವೆ ಕಾರ್ಮಿಕರು ಬಣ್ಣ ಹಚ್ಚುವ ಕೆಲಸದಲ್ಲಿ ನಿರತರಾಗಿದ್ದರು. ಸುಮಾರು 100 ರಿಂದ 200 ಮೀಟರ್ ಉದ್ದವಿರುವ ಈ ರೈಲ್ವೆ ಸೇತುವೆಯಲ್ಲಿ ಅಕ್ಕ - ಪಕ್ಕ ನಿಲ್ಲುವುದಕ್ಕೆ ಸ್ಥಳವಿಲ್ಲ. ಸ್ವಲ್ಪ ಯಾಮಾರಿದರೂ ಸೇತುವೆ ಮೇಲಿಂದ ಬೀಳುವುದು ಖಚಿತ.
ಪ್ರಾಣವನ್ನೇ ಕಳೆದುಕೊಂಡ ಮೂವರು ರೈಲ್ವೆ ಕಾರ್ಮಿಕರು ಇಂತಹ ಸಂದಿಗ್ದ ಸ್ಥಿತಿಯಲ್ಲಿಯೂ ಕಾರ್ಮಿಕರು ಸೇತುವೆಗೆ ಬಣ್ಣ ಹಚ್ಚುವ ಕೆಲಸ ಮಾಡುತ್ತಿದ್ದರು. ಕೆಲಸದಲ್ಲಿ ನಿರತರಾಗಿದ್ದ ಅವರು ರೈಲು ಬರುತ್ತಿರುವುದನ್ನು ಗಮನಿಸಿಲ್ಲ. ಈ ವೇಳೆ, ರೈಲು ಅವರ ಹತ್ತಿರ ಸಮೀಪಿಸಿದೆ. ಎಚ್ಚೆತ್ತ ಕಾರ್ಮಿಕರು ತಮ್ಮ ಪ್ರಾಣವನ್ನು ಉಳಿಸಿಕೊಳ್ಳಲು ಸೇತುವೆ ಮೇಲಿಂದ ಕೆಳಕ್ಕೆ ಹಾರಿದ್ದಾರೆ. ಆದರೆ, ಮೂವರು ಕಾರ್ಮಿಕರು ರೈಲಿನಡಿ ಸಿಲುಕಿ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ.
ನವೀನ್ (34), ಶಂಷೀರ್ ಅಲಿ (22) ಮತ್ತು ಪ್ರತಾಪ್ರೆಡ್ಡಿ (58) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸುದ್ದಿ ತಿಳಿದ ತಕ್ಷಣವೇ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಘಟನೆ ಕುರಿತು ವಿಕಾರಾಬಾದ್ ರೈಲ್ವೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.