ಲಖನೌ: ದಿನದಿಂದ ದಿನಕ್ಕೆ ಮಹಾಮಾರಿ ಕೊರೊನಾ ವೈರಸ್ ಬಗ್ಗೆ ಆತಂಕ ಹೆಚ್ಚಾಗುತ್ತಿದೆ. ಇದೀಗ ಉತ್ತರ ಪ್ರದೇಶದ ಲಖನೌದಲ್ಲಿ 4 ಜನರಿಗೆ ಕೊವಿಡ್-19 ಇರುವುದು ಖಚಿತವಾಗಿದೆ.
ಒಂದೇ ಕುಟುಂಬದ ಮೂವರಲ್ಲಿ ಸೋಂಕು ಪತ್ತೆ: ಲಖನೌದಲ್ಲಿ 9ಕ್ಕೇರಿದ ಕೊರೊನಾ ಪ್ರಕರಣ - ಉತ್ತರಪ್ರದೇಶದ ಲಖನೌದಲ್ಲಿ ಮತ್ತೆ ನಾಲ್ಕು ಕೊರೊನಾ ವೈರಸ್ ಪ್ರಕರಣಗಳು ದೃಢ
ಉತ್ತರಪ್ರದೇಶದ ಲಖನೌದಲ್ಲಿ ಮತ್ತೆ ನಾಲ್ಕು ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ದೃಢಪಟ್ಟಿವೆ. ಪತ್ತೆಯಾದ ನಾಲ್ಕು ಪ್ರಕರಣದಲ್ಲಿ ಒಂದೇ ಕುಟುಂಬದ ಮೂವರಿಗೆ ಸೋಂಕು ತಗುಲಿದೆ.
ನಾಲ್ಕರಲ್ಲಿ ಒಂದೇ ಕುಟುಂಬದ ಮೂವರಿಗೆ ಸೋಂಕು ಪತ್ತೆ
ಸೋಂಕು ತಗುಲಿರುವುದು ಕನ್ಫರ್ಮ್ ಆಗಿದ್ದು, ನಾಲ್ಕು ಜನರನ್ನು ಆಸ್ಪತ್ರೆಯ ಪ್ರತ್ಯೇಕ ಕೊಠಡಿಯಲ್ಲಿರಿಸಿ ಚಿಕಿತ್ಸೆಗೆ ಒಳಪಡಿಸಲಾಗಿದೆ. ನಾಲ್ಕು ಹೊಸ ಪ್ರಕರಣದಲ್ಲಿ ಮೂವರು ಒಂದೇ ಕುಟುಂಬದವರಿಗೆ ಸೋಂಕು ತಗುಲಿರುವ ವಿಚಾರವನ್ನು ಇಲ್ಲಿನ ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯ ತಿಳಿಸಿದೆ.
ಈ ಮೂಲಕ ಲಖನೌದಲ್ಲಿ ಕಾಣಿಸಿಕೊಂಡ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ 9ಕ್ಕೇರಿದೆ.