ಮಹಾಸಮುಂದ್ (ಛತ್ತೀಸ್ಗಢ):ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ನಡೆದ ಘರ್ಷಣೆಯಲ್ಲಿ ಮೂವರು ಸಾವನ್ನಪ್ಪಿ, ನಾಲ್ವರು ಗಾಯಗೊಂಡಿರುವ ಘಟನೆ ಛತ್ತಿಸ್ಗಢದ ಮಹಾಸಮುಂದ್ ಜಿಲ್ಲೆಯಲ್ಲಿ ನಡೆದಿದೆ.
ಜೋಬಾ ಗ್ರಾಮದ ಜಾಗೃತಿ ಗಾಯಕವಾಡ್, ಟೀನಾ ಕುಮಾರಿ ಹಾಗೂ ಮನೀಷ್ ಕುಮಾರ್ ಎಂಬುವವರು ಘರ್ಷಣೆಯಲ್ಲಿ ಮೃತಪಟ್ಟಿದ್ದಾರೆ. ಗಾಯಗೊಂಡ ಓಶ್ ಕುಮಾರ್, ಒಮ್ರಾನ್, ಗೀತಾಂಜಲಿ, ಅನರ್ ಬಾಯಿ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.