ಕರ್ನಾಟಕ

karnataka

ETV Bharat / bharat

ಬಾರಾಮುಲ್ಲಾದಲ್ಲಿ ಲಷ್ಕರ್​- ಇ -ತೊಯ್ಬಾ ಉಗ್ರರ ದಫನ್​ - Lashkar-e-Toiba (LeT) militants

ಎನ್​ಕೌಂಟರ್​ನಲ್ಲಿ ಹತರಾಗಿದ್ದ ಲಷ್ಕರ್​- ಇ -ತೊಯ್ಬಾದ ಉಗ್ರರ ಮೃತದೇಹಗಳನ್ನು ಜಮ್ಮು - ಕಾಶ್ಮೀರದ ಬಾರಾಮುಲ್ಲಾದಲ್ಲಿ ದಫನ್ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.

Lashkar-e-Toiba
ಬಾರಾಮುಲ್ಲಾದಲ್ಲಿ ಲಷ್ಕರ್​- ಇ -ತೊಯ್ಬಾ ಉಗ್ರರ ದಫನ್​

By

Published : Jul 13, 2020, 1:41 PM IST

ಬಾರಾಮುಲ್ಲಾ: ಭಾನುವಾರ ಹತರಾಗಿದ್ದ ಲಷ್ಕರ್​- ಇ -ತೊಯ್ಬಾ (ಎಲ್‌ಇಟಿ) ಸಂಘಟನೆಯ ಮೂವರು ಉಗ್ರರ ಮೃತದೇಹಗಳನ್ನು ಉತ್ತರ ಕಾಶ್ಮೀರದ ಬಾರಾಮುಲ್ಲಾದಲ್ಲಿ ಮಣ್ಣು ಮಾಡಲಾಗಿದೆ.

ಬಾರಾಮುಲ್ಲಾದ ಸೋಪೋರ್​ ಪಟ್ಟಣ್ಣದ ರೆಬನ್ ಪ್ರದೇಶದಲ್ಲಿ ನಿನ್ನೆ ಭದ್ರತಾ ಪಡೆ ಹಾಗೂ ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಉಗ್ರರನ್ನು ಹತ್ಯೆ ಮಾಡಲಾಗಿತ್ತು. ಇಂದು ಅವರ ಮೃತದೇಹಗಳನ್ನು ಬಾರಾಮುಲ್ಲಾದ ಶೀರಿ ಗ್ರಾಮದಲ್ಲಿ ಎಲ್ಲ ಕೋವಿಡ್​ ನಿಯಮಗಳನ್ನು ಅನುಸರಿಸಿ ದಫನ್​ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.

ಉಗ್ರರಿಂದ ವಶಪಡಿಸಿಕೊಂಡ ದಾಖಲೆಗಳ ಪ್ರಕಾರ, ಇವರಲ್ಲಿ ಒಬ್ಬ ಪಾಕಿಸ್ತಾನದ ನಿವಾಸಿ ಉಸ್ಮಾನ್ ಎಂಬುದು ತಿಳಿದು ಬಂದಿದೆ. ಉಳಿದ ಇಬ್ಬರ ಬಗ್ಗೆ ಖಚಿತ ಮಾಹಿತಿ ತಿಳಿದು ಬಂದಿಲ್ಲ. ಇವರು ಸ್ಥಳೀಯರೂ ಆಗಿರಬಹುದು ಎಂದು ಅವರು ಹೇಳಿದರು.

ABOUT THE AUTHOR

...view details