ಕರ್ನಾಟಕ

karnataka

ETV Bharat / bharat

ಶೊಪಿಯಾನ್​ನಲ್ಲಿ ಯೋಧರ ಭರ್ಜರಿ ಬೇಟೆ... ಎನ್​ಕೌಂಟರ್​ನಲ್ಲಿ ಮೂವರು ಉಗ್ರರು ಖತಂ

ಜಮ್ಮು ಮತ್ತು ಕಾಶ್ಮೀರದ ಶೊಪಿಯಾನ್​ನಲ್ಲಿ ಸೈನಿಕರು ಭರ್ಜರಿ ಬೇಟೆಯಾಡಿದ್ದಾರೆ. ಎನ್​ಕೌಂಟರ್​ನಲ್ಲಿ ಮೂವರು ಉಗ್ರರನ್ನು ಹೊಡೆದುರುಳಿಸಿದ್ದಾರೆ.

By

Published : Mar 28, 2019, 8:48 AM IST

ಶೊಪಿಯಾನ್ ಎನ್​ಕೌಂಟರ್​ನಲ್ಲಿ ಮೂವರು ಉಗ್ರರ ಹತ

ಶೊಪಿಯಾನ್​: ಇಲ್ಲಿನ ಕೆಲ್ಲೆರ್​ ಏರಿಯಾದಲ್ಲಿ ಭದ್ರತಾ ಪಡೆ ಮಿಂಚಿನ ಕಾರ್ಯಾಚರಣೆ ನಡೆಸಿ, ಮೂವರು ಉಗ್ರರನ್ನು ಹೊಡೆದುರುಳಿಸಿದ್ದಾರೆ.

ಶೊಪಿಯಾನ್ ಎನ್​ಕೌಂಟರ್​ನಲ್ಲಿ ಮೂವರು ಉಗ್ರರ ಹತ

ಬೆಳಗ್ಗೆಯಿಂದ ಉಗ್ರರು ಹಾಗೂ ಭದ್ರತಾ ಪಡೆ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಸಿಆರ್​ಪಿಎಫ್​, ಸೇನೆ ಹಾಗೂ ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಮೂವರು ಉಗ್ರರನ್ನು ಬೇಟೆಯಾಡಿದ್ದಾರೆ.

ಇಬ್ಬರು ಉಗ್ರರ ಕಳೆಬರವನ್ನು ಪತ್ತೆ ಮಾಡಲಾಗಿದ್ದು, ಅವರ ಬಳಿಯಿದ್ದ ಶಸ್ತ್ರಾಸ್ತ್ರಗಳನ್ನು ಸೈನಿಕರು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.


ABOUT THE AUTHOR

...view details