ಕರ್ನಾಟಕ

karnataka

ETV Bharat / bharat

ಮಾರುತಿ ವ್ಯಾನ್​ಗೆ ಅಪ್ಪಳಿಸಿದ ಸರ್ಕಾರಿ ಬಸ್​: ಭೀಕರ ಅಪಘಾತದಲ್ಲಿ ಮೂವರ ದುರ್ಮರಣ - ಉತ್ತರ ಪ್ರದೇಶ ಅಪಘಾತ ಸುದ್ದಿ

ಉತ್ತರ ಪ್ರದೇಶದ ಕಾನ್ಪುರ ಬಳಿ ನಡೆದ ಭೀಕರ ಅಪಘಾತದಲ್ಲಿ ಮೂವರು ಸಾವನ್ನಪ್ಪಿ, ಇಬ್ಬರು ಗಾಯಗೊಂಡಿದ್ದಾರೆ.

road accident in kanpur
ಕಾನ್ಪುರದಲ್ಲಿ ರಸ್ತೆ ಅಪಘಾತ

By

Published : Nov 29, 2020, 10:47 PM IST

ಕಾನ್ಪುರ (ಉತ್ತರ ಪ್ರದೇಶ):ಸರ್ಕಾರಿ ಸಾರಿಗೆ ಬಸ್​ ಮಾರುತಿ ವ್ಯಾನ್​​ಗೆ ಡಿಕ್ಕಿಯಾಗಿ ಇಬ್ಬರು ಮಹಿಳೆಯರು ಸೇರಿ ಮೂವರು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರ ಬಳಿಯ ಧಮ್ನಿ ನಿವಾಡ ಬಳಿ ಭಾನುವಾರ ನಡೆದಿದೆ.

ಶಿವರಾಜ್​ಪುರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮಾರುತಿ ವ್ಯಾನ್​ನಲ್ಲಿ ಐದು ಮಂದಿ ಪ್ರಯಾಣಿಸುತ್ತಿದ್ದರು. ಮೂವರು ಸಾವನ್ನಪ್ಪಿದ್ದು, ಇಬ್ಬರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.

ಮಾರುತಿ ವ್ಯಾನ್ ಚಾಲನೆ ಮಾಡುತ್ತಿದ್ದ ರಿಂಕು(21), ಮಾಯಾ ದೇವಿ (35) ಮತ್ತು ರಾಮ್‌ಕಲಿ (42) ಎಂದು ಮೃತರನ್ನು ಗುರುತಿಸಲಾಗಿದೆ. ಪುರನ್‌ಲಾಲ್ ಮತ್ತು ರಾಮ್ ಪ್ರಕಾಶ್ ಅವರಿಗೆ ಗಾಯಗಳಾಗಿದ್ದು, ಅವರನ್ನು ಕಾನ್ಪುರದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮೃತರು ಕನೌಜ್ ಜಿಲ್ಲೆಗೆ ಸೇರಿದವರಾಗಿದ್ದು, ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಶಿವರಾಜ್​ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ABOUT THE AUTHOR

...view details