ಬಲಿಯಾ(ಉತ್ತರ ಪ್ರದೇಶ): ಇಲ್ಲಿನ ಪಾಟ್ಪರ್ ಗ್ರಾಮದ ಬಳಿ ಇಂದು ಮುಂಜಾನೆ ವೇಗವಾಗಿ ಬಂದ ಕಾರೊಂದು ಮರಕ್ಕೆ ಗುದ್ದಿದ ಪರಿಣಾಮ ಸ್ಥಳದಲ್ಲೇ ಮೂವರು ಮೃತಪಟ್ಟಿದ್ದಾರೆ.
ಮದುವೆಯಿಂದ ಹಿಂದಿರುಗಿದವರು ಹೋಗಿದ್ದು ಮಾತ್ರ ಸ್ಮಶಾನಕ್ಕೆ! ನಡೆದಿದ್ದಾದರೂ ಏನು? - ಪಾಟ್ಪರ್ ಗ್ರಾಮದ ಬಳಿ ಅಪಘಾತ
ಪರಿಚಯಸ್ಥರ ಮದುವೆ ಮುಗಿಸಿ ಕಾರಿನಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಮರಕ್ಕೆ ಕಾರು ಗುದ್ದಿದ ಪರಿಣಾಮ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸಾಂದರ್ಭಿಕ ಚಿತ್ರ
ಅಭಿಷೇಕ್ ಗುಪ್ತಾ (17), ಅನುಪ್ ಗುಪ್ತಾ (18) ಮತ್ತು ಸುನಿಲ್ ಗುಪ್ತಾ (42) ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ. ಈ ಮೂವರು ಪರಿಚಯಸ್ಥರ ಮದುವೆಗೆ ತೆರಳಿದ್ದು, ಶುಭಕಾರ್ಯ ಮುಗಿಸಿ ಹಿಂತಿರುಗುವ ವೇಳೆ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.