ಕರ್ನಾಟಕ

karnataka

ETV Bharat / bharat

ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ.. ಆರೋಪಿಗಳ ಬಂಧನ - ಬಾಲಕಿ ಲೈಂಗಿಕ ದೌರ್ಜನ್ಯ

ರಾಜಸ್ಥಾನದ ಭರತ್​​ಪುರದ ಕಮನ್ ಪೊಲೀಸ್ ವ್ಯಾಪ್ತಿಯಲ್ಲಿರುವ ಹಳ್ಳಿಯೊಂದರಲ್ಲಿ ಅಪ್ರಾಪ್ತೆ ಮೇಲೆ ಮೂವರು ಅತ್ಯಾಚಾರವೆಸಗಿದ್ದಾರೆ. ಇದೀಗ ಬಾಲಕಿ 4 ತಿಂಗಳ 1 ವಾರದ ಗರ್ಭಿಣಿಯಾಗಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ದಲಿತ ಅಪ್ರಾಪ್ತ ಬಾಲಕಿಯ ಸಾಮೂಹಿಕ ಅತ್ಯಾಚಾರ
ದಲಿತ ಅಪ್ರಾಪ್ತ ಬಾಲಕಿಯ ಸಾಮೂಹಿಕ ಅತ್ಯಾಚಾರ

By

Published : Jul 5, 2020, 8:38 PM IST

Updated : Jul 6, 2020, 6:04 AM IST

ಕಮಾನ್ (ರಾಜಸ್ಥಾನ):ರಾಜಸ್ಥಾನದ ಭರತ್​​ಪುರದ ಕಮಾನ್ ಪೊಲೀಸ್ ವ್ಯಾಪ್ತಿಯಲ್ಲಿರುವ ಹಳ್ಳಿಯೊಂದರಲ್ಲಿ ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪದ ಮೇಲೆ ಮೂವರು ಯುವಕರನ್ನು ರಾಜಸ್ಥಾನ ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ಸದ್ದಾಂ, ತೌಫಿಕ್ ಮತ್ತು ಮಮ್ಮನ್​ ಎಂಬುವರೇ ಬಂಧಿತ ಆರೋಪಿಗಳಾಗಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ ಅತ್ಯಾಚಾರಕ್ಕೊಳಗಾದ 13 ವರ್ಷದ ಬಾಲಕಿ 4 ತಿಂಗಳು 1 ವಾರದ ಗರ್ಭಿಣಿಯಾಗಿದ್ದು, ಕೆಲ ತಿಂಗಳು ಮುಂಚೆ ಭರತ್​​ಪುರದ ಮೂವರು ಯುವಕರು ಆಕೆಯ ಮೇಲೆ ಅತ್ಯಾಚಾರವೆಸಗಿದ್ದರು ಎಂದು ಆರೋಪಿಸಲಾಗಿದೆ..

ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ.. ಆರೋಪಿಗಳ ಬಂಧನ

ಕೆಲವು ದಿನಗಳ ಹಿಂದೆ ಬಾಲಕಿಗೆ ಹೊಟ್ಟೆ ನೋವೆಂದು ಆಸ್ಪತ್ರೆಗೆ ಕರೆದೊಯ್ದಾಗ ಆಕೆ ಗರ್ಭಿಣಿಯಾಗಿರುವುದು ತಿಳಿದುಬಂದಿದೆ. ನಂತರ ಬಾಲಕಿ ಲೈಂಗಿಕ ದೌರ್ಜನ್ಯದ ಬಗ್ಗೆ ಪೋಷಕರಿಗೆ ತಿಳಿಸಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ. ಬಾಲಕಿಯ ಕುಟುಂಬವು ಕಮಾನ್ ಪೊಲೀಸರಿಗೆ ದೂರು ನೀಡಿದ ನಂತರ ಈ ಘಟನೆ ಬೆಳಕಿಗೆ ಬಂದಿದ್ದು, ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

ಎಫ್‌ಐಆರ್ ಪ್ರಕಾರ, ಮೂವರು ಪುರುಷರು ಸುಮಾರು ನಾಲ್ಕು ತಿಂಗಳ ಹಿಂದೆ ಕಮಾನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಹಳ್ಳಿಯ ಈ ಹುಡುಗಿಯನ್ನು ಸಾಸಿವೆ ಹೊಲಕ್ಕೆ ಎಳೆದೊಯ್ದು ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ.

ಕಮನ್ ಪೊಲೀಸ್ ಠಾಣೆ ಡಿಸಿಪಿ ಪ್ರದೀಪ್ ಯಾದವ್

ಸಂತ್ರಸ್ತೆಯ ಕುಟುಂಬ ಸದಸ್ಯರ ಆರೋಪದ ಪ್ರಕಾರ, ಆರೋಪಿಗಳು ಬಾಲಕಿಗೆ ಹಲವಾರು ರೀತಿಯಲ್ಲಿ ಆಮಿಷವೊಡ್ಡಿ ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ಪದೇ ಪದೇ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ.

ಕಮಾನ್ ಪೊಲೀಸ್ ಠಾಣೆ ಡಿಸಿಪಿ ಪ್ರದೀಪ್ ಯಾದವ್, ಮೂವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಮತ್ತು ಅಪ್ರಾಪ್ತ ಬಾಲಕಿಯ ವೈದ್ಯಕೀಯ ಪರೀಕ್ಷೆ ಮಾಡಲಾಗಿದೆ. ಆರೋಪಿಗಳನ್ನು ಮ್ಯಾಜಿಸ್ಟ್ರೇಟ್ ಅವರ ಮುಂದೆ ಹಾಜರುಪಡಿಸಲಾಗಿದೆ ಮತ್ತು ಬಾಲಕಿಯ ಹೇಳಿಕೆಯನ್ನು ಸಿಆರ್​ಪಿಸಿ ಸೆಕ್ಷನ್ 164ರ ಅಡಿಯಲ್ಲಿ ದಾಖಲಿಸಲಾಗಿದೆ. ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಈ ಮೂವರನ್ನು ಮಕ್ಕಳ ರಕ್ಷಣೆ ಕಾಯ್ದೆ (ಪೊಕ್ಸೊ) ಅಡಿಯಲ್ಲಿ ಬಂಧಿಸಲಾಗಿದೆ. ರಾಜಸ್ಥಾನ ಹೈಕೋರ್ಟ್‌ನ ಆದೇಶದ ಪ್ರಕಾರ ಪೊಲೀಸ್ ಆಡಳಿತವು ಅಪ್ರಾಪ್ತ ಬಾಲಕಿಯ ಗರ್ಭಪಾತ ಮಾಡಿಸಿದೆ.

Last Updated : Jul 6, 2020, 6:04 AM IST

ABOUT THE AUTHOR

...view details