ಕರ್ನಾಟಕ

karnataka

ETV Bharat / bharat

ಗಾಳಿ ಸಹಿತ ಭಾರೀ ಮಳೆ: ದೋಣಿ ಮಗುಚಿ ಮೂವರು ಮೀನುಗಾರರು ಸಾವು - ಕೇರಳದಲ್ಲಿ ಮೂವರು ಮೀನುಗಾರರು ಸಾವು

ಕೇರಳದ ಹಲವಾರು ಭಾಗಗಳಲ್ಲಿ ಗಾಳಿ ಸಹಿತ ಭಾರೀ ಮಳೆಯಾಗುತ್ತಿದ್ದು, ಸಮುದ್ರಕ್ಕೆ ತೆರಳಿದ್ದ ಮೂವರು ಮೀನುಗಾಗರು ದೋಣಿ ಮಗುಚಿ ಸಾವಿಗೀಡಾಗಿದ್ದಾರೆ.

Three fishermen drown as boat capsizes in Kerala
ದೋಣಿ ಮುಗುಚಿ ಮೂವರು ಮೀನುಗಾರರು ಸಾವು

By

Published : Sep 10, 2020, 6:49 AM IST

Updated : Sep 10, 2020, 6:57 AM IST

ತಿರುವನಂತಪುರಂ: ಕೇರಳದ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಸಮುದ್ರಕ್ಕೆ ತೆರಳಿದ್ದ ಮೂವರು ಮೀನುಗಾಗರು ಸಾವಿಗೀಡಾಗಿದ್ದಾರೆ.

ಭಾರೀ ಮಳೆ ಮತ್ತು ಗಾಳಿಯ ಪರಿಣಾಮ ದೋಣಿ ಮಗುಚಿಕೊಂಡು ತಂಕಪ್ಪನ್ ಎಲಿಯಾಸ್ (55), ಅಲೆಕ್ಸ್ (47) ಮತ್ತು ಪ್ರವೀಣ್ (33) ಎಂಬ ಮೀನುಗಾರರು ಸಾವಿಗೀಡಾಗಿದ್ದಾರೆ. ಮೃತದೇಹಗಳನ್ನು ಚೇತರಿ ಚಿರಯಂಕೀಜು ತಾಲೂಕು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಸರ್ಕಾರದ ಮಾಧ್ಯಮ ಪ್ರಕಟಣೆ ತಿಳಿಸಿದೆ.

ಕೇರಳ ರಾಜಧಾನಿ ತಿರುವನಂತಪುರಂನಲ್ಲಿ 10 ಸೆಂ.ಮೀ. ಮಳೆಯಾಗಿದ್ದು, ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಐದು ಕುಟುಂಬಗಳನ್ನು ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ. ಕೇರಳ ಕರಾವಳಿಯಲ್ಲಿ ಮತ್ತು ಒಳನಾಡು ಪ್ರದೇಶಗಳಲ್ಲಿ 45ರಿಂದ 55 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಸಮುದ್ರಕ್ಕೆ ಹೋಗದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ.

Last Updated : Sep 10, 2020, 6:57 AM IST

ABOUT THE AUTHOR

...view details