ಪೂರ್ವ ಗೋದಾವರಿ:ಬೈಕ್ ಮೇಲೆ ಜಮೀನಿಗೆ ತೆರಳುತ್ತಿದ್ದ ರೈತರಿಗೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಮೂವರು ಸಾವನ್ನಪ್ಪಿರುವ ಘಟನೆ ಆಲೂರು ತಾಲೂಕಿನ ಜೊನ್ನಾಡ ಗ್ರಾಮದ ಬಳಿ ಸಂಭವಿಸಿದೆ.
ಬೈಕ್-ಲಾರಿ ಡಿಕ್ಕಿ: ಹೊಲಕ್ಕೆ ತೆರಳುತ್ತಿದ್ದ ಮೂವರು ರೈತರು ಸಾವು! - ಪೂರ್ವ ಗೋದಾವರಿ ಅಪಘಾತ ಸುದ್ದಿ
ಬೈಕ್ ಮತ್ತು ಲಾರಿ ಮಧ್ಯೆ ಅಪಘಾತ ಸಂಭವಿಸಿ ಮೂವರು ರೈತರು ಸಾವನ್ನಪ್ಪಿರುವ ಘಟನೆ ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ನಡೆದಿದೆ.
ಹೊಲಕ್ಕೆ ತೆರಳುತ್ತಿದ್ದ ಮೂವರು ರೈತರು ಸಾವು
ರಾವುಲಪಾಲೆಂ ಗ್ರಾಮದಲ್ಲಿರುವ ಹೊಲಕ್ಕೆ ಬೈಕ್ನಲ್ಲಿ ತೆರಳುತ್ತಿದ್ದ ಮೂವರು ರೈತರಿಗೆ ರಾಜಮಹೇಂದ್ರ ವರ್ಮ್ ಜಿಲ್ಲೆಯಿಂದ ಬರುತ್ತಿದ್ದ ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರು ರೈತರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನೊಬ್ಬ ರೈತ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲೇ ಸಾವನ್ನಪ್ಪಿದ್ದಾರೆ. ಮೃತರನ್ನು ಶ್ರೀನು, ವಿಷ್ಣು ಮತ್ತು ರಾಂ ಪ್ರಸಾದ್ ಎಂದು ಗುರುತಿಸಲಾಗಿದೆ.
ಈ ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು. ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.