ಹೊಸದಿಲ್ಲಿ: ನಿರ್ಭಯಾ ಅತ್ಯಾಚಾರ ಪ್ರಕರಣದ ನಾಲ್ಕು ಅಪರಾಧಿಗಳ ಪೈಕಿ ಮೂವರು ಅಂತಾರಾಷ್ಟ್ರೀಯ ನ್ಯಾಯಾಲಯದ (ಐಸಿಜೆ) ಮೊರೆ ಹೋಗಿದ್ದು, ತಮಗೆ ವಿಧಿಸಲಾದ ಮರಣ ದಂಡನೆ ಶಿಕ್ಷೆಗೆ ತಡೆ ನೀಡಬೇಕೆಂದು ಅರ್ಜಿ ಸಲ್ಲಿಸಿದ್ದಾರೆ. ಅಕ್ಷಯ ಸಿಂಗ್, ಪವನ್ ಗುಪ್ತಾ ಮತ್ತು ಮುಕೇಶ ಸಿಂಗ್ ಇವರೇ ಅಂತಾರಾಷ್ಟ್ರೀಯ ನ್ಯಾಯಾಲಯದ ಮೊರೆ ಹೋದ ಅಪರಾಧಿಗಳಾಗಿದ್ದಾರೆ.
ಅಂತಾರಾಷ್ಟ್ರೀಯ ನ್ಯಾಯಾಲಯದ ಮೊರೆ ಹೋದ ನಿರ್ಭಯಾ ಹಂತಕರು ! - ನಿರ್ಭಯಾ ಹಂತಕರು ಲೇಟೆಸ್ಟ್ ನ್ಯೂಸ್
ತಮಗೆ ವಿಧಿಸಲಾದ ಮರಣ ದಂಡನೆ ಶಿಕ್ಷೆಗೆ ತಡೆ ನೀಡಬೇಕೆಂದು ನಿರ್ಭಯಾ ಅತ್ಯಾಚಾರ ಪ್ರಕರಣದ ನಾಲ್ಕು ಅಪರಾಧಿಗಳ ಪೈಕಿ ಮೂವರು ಅಂತಾರಾಷ್ಟ್ರೀಯ ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಅಂತಾರಾಷ್ಟ್ರೀಯ ನ್ಯಾಯಾಲಯದ ಮೊರೆ ಹೋದ ನಿರ್ಭಯಾ ಹಂತಕರು
ಭಾರತದ ನ್ಯಾಯಾಲಯದ ಆದೇಶದ ಪ್ರಕಾರ ಈ ಮೂವರು ಅಪರಾಧಿಗಳಿಗೆ ಮಾರ್ಚ್ 20ರ ಬೆಳಗ್ಗೆ 5.30ಕ್ಕೆ ಗಲ್ಲು ಶಿಕ್ಷೆ ಜಾರಿ ಮಾಡಬೇಕಿದೆ. ಆದರೆ, ಈಗ ಈ ಅಪರಾಧಿಗಳು ಅಂತಾರಾಷ್ಟ್ರೀಯ ನ್ಯಾಯಾಲಯದ ಮೊರೆ ಹೋಗಿದ್ದು, ಮುಂದೆ ಯಾವ ರೀತಿ ಬೆಳವಣಿಗೆಗಳಾಗಲಿವೆ ಎಂದು ಕಾದು ನೋಡುವಂತಾಗಿದೆ.
ಪ್ಯಾರಾಮೆಡಿಕಲ್ ವಿದ್ಯಾರ್ಥಿನಿಯಾಗಿದ್ದ ನಿರ್ಭಯಾಳನ್ನು ಡಿಸೆಂಬರ್ 2012 ರಲ್ಲಿ ಆರು ಜನರ ತಂಡ ಅತ್ಯಾಚಾರವೆಸಗಿ ಬರ್ಬರವಾಗಿ ಹತ್ಯೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು. ನಂತರ 2012 ರ ಡಿಸೆಂಬರ್ 29 ರಂದು ನಿರ್ಭಯಾ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಳು.