ಇಟಾವ(ಉತ್ತರಪ್ರದೇಶ):ದ್ವಿಚಕ್ರ ವಾಹನಸವಾರಿ ಮಾಡುತ್ತಿದ್ದ ವೇಳೆ ಹಿಂಬದಿಯಿಂದ ಬಸ್ ಡಿಕ್ಕಿ ಹೊಡೆದಿದ್ದು, ಪರಿಣಾಮ ಮೂವರು ಸೋದರ ಸಂಬಂಧಿಗಳು ಸಾವನ್ನಪ್ಪಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಬೈಕ್ಗೆ ಬಸ್ ಡಿಕ್ಕಿ: ಮೂವರು ಸೋದರ ಸಂಬಂಧಿಗಳು ಸಾವು - ಮಣಿಪುರ ಸುದ್ದಿ
ಇಟಾವ ಜಿಲ್ಲೆಯ ಜನನಿಬಿಡ ಪ್ರದೇಶದಲ್ಲಿ ವೇಗವಾಗಿ ಬಂದ ಬಸ್ ಹಿಂದಿನಿಂದ ಬೈಕ್ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಮೂವರು ಸೋದರ ಸಂಬಂಧಿಗಳು ಸಾವನ್ನಪ್ಪಿದ್ದಾರೆ.
![ಬೈಕ್ಗೆ ಬಸ್ ಡಿಕ್ಕಿ: ಮೂವರು ಸೋದರ ಸಂಬಂಧಿಗಳು ಸಾವು ಇಟಾವ ಜಿಲ್ಲೆಯಲ್ಲಿ ಅಪಘಾತ](https://etvbharatimages.akamaized.net/etvbharat/prod-images/768-512-8870983-235-8870983-1600600378680.jpg)
ಮಣಿಪುರ ಮೂಲದ ಅಮನ್(23), ಇಟಾವ ಮೂಲದ ಶಿವಂ(18), ಗೋವಿಂದ್ (16) ಮೃತರು. ಇವರು ಇಟಾವದಲ್ಲಿರುವ ತಮ್ಮ ಸೋದರ ಮಾವನ ಮನೆಗೆ ಮಣಿಪುರದಿಂದ ದ್ವಿಚಕ್ರ ವಾಹನದ ಮೂಲಕ ತೆರಳುತ್ತಿದ್ದರು. ಈ ವೇಳೆ ಹಿಂಬದಿಯಿಂದ ಬಸ್ ಡಿಕ್ಕಿ ಹೊಡೆದಿದ್ದು, ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಇನ್ನು ಸ್ಥಳದಿಂದ ಬಸ್ ಚಾಲಕ ವಾಹನ ಸಮೇತ ಪರಾರಿಯಾಗಿದ್ದಾನೆ. ಸದ್ಯ ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ರವಾನಿಸಲಾಗಿದೆ.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಓಂ ವೀರ್ ಸಿಂಗ್ ಮಾತನಾಡಿದ್ದು,"ಬಸ್ ಚಾಲಕ ವೇಗವಾಗಿ ವಾಹನ ಚಲಾಯಿಸುತ್ತಿದ್ದು, ಈ ಘಟನೆಗೆ ಕಾರಣವಾಗಿದೆ ಎಂದು ಪ್ರತ್ಯಕ್ಷದರ್ಶಿಗಲು ತಿಳಿಸಿದ್ದಾರೆ. ಇನ್ನು ಸಿಸಿಟಿವಿ ಫೂಟೇಜ್ಗಳನ್ನು ಪರಿಶೀಲಿಸುತ್ತಿದ್ದೇವೆ. ಶೀಘ್ರವಾಗಿ ಅಪರಾಧಿಗಳನ್ನು ಪತ್ತೆಹಚ್ಚುತ್ತೇವೆ" ಎಂದು ಹೇಳಿದರು