ಕರ್ನಾಟಕ

karnataka

ETV Bharat / bharat

ಬಿಹಾರ ಯುವಕರ ಸಾಧನೆ: ಚೀನಿ ಅಪ್ಲಿಕೇಶನ್​ಗಳಿಗೆ ಸೆಡ್ಡು ಹೊಡೆದಿದೆ 'ಮ್ಯಾಗ್ ಟ್ಯಾಪ್' - ಸಮಸ್ತಿಪುರದ ಮೋಹನ್‌ಪುರ ಬ್ಲಾಕ್‌ನ ನಿವಾಸಿ ರೋಹನ್ ಸಿಂಗ್

ಕೇಂದ್ರ ಸರ್ಕಾರ 59 ಆ್ಯಪ್‌ಗಳನ್ನು ನಿಷೇಧಿಸಿದ ನಂತರ 'ಮೇಕ್ ಇನ್ ಇಂಡಿಯಾ' ಆ್ಯಪ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಬಿಹಾರದ ಯುವಕರು ರಚಿಸಿರುವ ಈ ಆ್ಯಪ್​​ ಚೀನಾದ ಅಪ್ಲಿಕೇಶನ್‌ಗಳಿಗೆ ಸೆಡ್ಡು ಹೊಡೆಯುತ್ತಿದೆ.

ಬಿಹಾರ ಯುವಕರ ಸಾಧನೆ
ಬಿಹಾರ ಯುವಕರ ಸಾಧನೆ

By

Published : Jul 3, 2020, 6:44 PM IST

ಗಯಾ: ಬಿಹಾರದ ಯುವಕರು ಚೀನಾದ ಅಪ್ಲಿಕೇಶನ್‌ಗೆ ಸ್ಪರ್ಧೆಯನ್ನು ನೀಡುವಂತಹ ಆ್ಯಪ್ ರಚಿಸಿದ್ದಾರೆ. ಇವರು ರಚಿಸಿರುವ ವೆಬ್ ಬ್ರೌಸರ್ 'ಮ್ಯಾಗ್ ಟ್ಯಾಪ್' ಅನ್ನು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಹೆಚ್ಚಾಗಿ ಡೌನ್‌ಲೋಡ್ ಮಾಡಲಾಗುತ್ತಿದೆ.

ದೇಶದಲ್ಲಿ ಚೀನಿ ಆ್ಯಪ್‌ಗಳನ್ನು ಬಹಿಷ್ಕರಿಸುವ ಅಭಿಯಾನ ಆರಂಭವಾದಗಿನಿಂದ ಮತ್ತು ಕೇಂದ್ರ ಸರ್ಕಾರ 59 ಆ್ಯಪ್‌ಗಳನ್ನು ನಿಷೇಧಿಸಿದ ನಂತರ 'ಮೇಕ್ ಇನ್ ಇಂಡಿಯಾ' ಆ್ಯಪ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಬಿಹಾರದ ಯುವಕರು ರಚಿಸಿರುವ ಈ ಆ್ಯಪ್​​ ಚೀನಾದ ಅಪ್ಲಿಕೇಶನ್‌ಗಳಿಗೆ ಸೆಡ್ಡು ಹೊಡೆಯುತ್ತಿದೆ.

ಚೀನಿ ಅಪ್ಲಿಕೇಶನ್​ಗಳಿಗೆ ಸೆಡ್ಡು ಹೊಡೆದಿದೆ 'ಮ್ಯಾಗ್ ಟ್ಯಾಪ್'

ವೆಬ್ ಬ್ರೌಸರ್ 'ಮ್ಯಾಗ್ ಟ್ಯಾಪ್' ಗೂಗಲ್ ಪ್ಲೇ ಸ್ಟೋರ್‌ಗೆ ಬಂದ ಕೆಲವೇ ತಿಂಗಳುಗಳಲ್ಲಿ, ಇದನ್ನು 8 ಲಕ್ಷಕ್ಕೂ ಹೆಚ್ಚು ಜನರು ಡೌನ್‌ಲೋಡ್ ಮಾಡಿದ್ದಾರೆ. ಅಲ್ಲದೇ ಪ್ರಸ್ತುತ 4.9 ರೇಟಿಂಗ್ ಹೊಂದಿದೆ.

ಬಿಹಾರದ ಗಯಾ ಮೂಲದ ಸತ್ಯಪಾಲ್ ಚಂದ್ರ ಮತ್ತು ಅವರ ತಂಡವು ಚೀನಾದ ಅನೇಕ ಅಪ್ಲಿಕೇಶನ್‌ಗಳೊಂದಿಗೆ ಸ್ಪರ್ಧಿಸುವಂತಹ ಆ್ಯಪ್​​ನನ್ನು ರಚಿಸಿದೆ.

ಚೀನಿ ಅಪ್ಲಿಕೇಶನ್​ಗಳಿಗೆ ಸೆಡ್ಡು ಹೊಡೆದಿದೆ 'ಮ್ಯಾಗ್ ಟ್ಯಾಪ್'

ಈ ಆ್ಯಪ್‌ನ ವೈಶಿಷ್ಟ್ಯವನ್ನು ಈಟಿವಿ ಭಾರತ್‌ಗೆ ಸತ್ಯಪಾಲ್ ಚಂದ್ರ ಅವರು ವಿವರಿಸುವಾಗ 'ಮ್ಯಾಗ್ ಟ್ಯಾಪ್' ಸಂಪೂರ್ಣವಾಗಿ 'ಮೇಡ್ ಇನ್ ಇಂಡಿಯಾ'ಆಗಿದೆ. ಇದು ವಿಡಿಯೋ ಬ್ರೌಸರ್ ಜೊತೆಗೆ ಡಾಕ್ಯುಮೆಂಟ್ ರೀಡರ್, ಅನುವಾದ ಮತ್ತು ಇ-ಲರ್ನಿಂಗ್ ಅಪ್ಲಿಕೇಶನ್ ಹೊಂದಿದೆ. ದೇಶದಲ್ಲಿ ಹಿಂದಿ ಮಾತನಾಡುವ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಈ ಆ್ಯಪ್ ವಿನ್ಯಾಸಗೊಳಿಸಲಾಗಿದೆ ಎಂದರು.

'ಮ್ಯಾಗ್‌ಟಾಪ್'ನ ವಿಶೇಷತೆ:

ಸತ್ಯಪಾಲ್ ಹೇಳುವಂತೆ, "ಈ ಅಪ್ಲಿಕೇಶನ್ ಪ್ಲೇ ಸ್ಟೋರ್‌ನಲ್ಲಿನ ಶಿಕ್ಷಣ ವಿಭಾಗದಲ್ಲಿ ವಿಶ್ವದಾದ್ಯಂತ ಪ್ರಥಮ ಸ್ಥಾನದಲ್ಲಿದೆ. ಇತ್ತೀಚೆಗೆ ಅದರ ಆವೃತ್ತಿ 2 ಅನ್ನು ಸಹ ಬಿಡುಗಡೆ ಮಾಡಲಾಗಿದೆ.

ಚೀನಿ ಅಪ್ಲಿಕೇಶನ್‌ಗಳ ನಿಷೇಧದ ನಂತರ, 'ಮ್ಯಾಗ್ ಟ್ಯಾಪ್' ಅನ್ನು ಸುಮಾರು 2.5 ರಿಂದ 3 ಲಕ್ಷ ಜನರು ಡೌನ್‌ಲೋಡ್ ಮಾಡಿದ್ದಾರೆ."

ಅಪ್ಲಿಕೇಶನ್ ಕೇವಲ 34 ಎಂಬಿ ಮಾತ್ರ ಇದ್ದು, ಇದು ಹಿಂದಿ ಸೇರಿದಂತೆ ದೇಶದ 12 ಭಾಷೆಗಳಲ್ಲಿ ಪದಗಳು, ವಾಕ್ಯಗಳನ್ನು ಅಥವಾ ಸಂಪೂರ್ಣ ಪ್ಯಾರಾಗಳನ್ನು ಅನುವಾದಿಸುತ್ತದೆ.

ಅಂತರ್ಜಾಲದಲ್ಲಿ ಮಾಹಿತಿಗಾಗಿ ಹುಡುಕಿದ ಹೆಚ್ಚಿನವು ಇಂಗ್ಲಿಷ್‌ನಲ್ಲಿವೆ. ಆದ್ದರಿಂದ ಅದನ್ನು ಓದುವಾಗ, ಈ ಅಪ್ಲಿಕೇಶನ್ ಯಾವುದೇ ಪದ, ವಾಕ್ಯ ಅಥವಾ ಸಂಪೂರ್ಣ ಪ್ಯಾರಾಗ್ರಾಫ್​​ನನ್ನು ಹಿಂದಿ ಸೇರಿದಂತೆ 12 ಭಾರತೀಯ ಭಾಷೆಗಳಿಗೆ ಅನುವಾದಿಸಬಹುದು.

ವಾಟ್ಸಾಪ್, ಫೇಸ್‌ಬುಕ್, ಮೆಸೆಂಜರ್ ಮುಂತಾದ ಯಾವುದೇ ಅಪ್ಲಿಕೇಶನ್‌ನಂತೆ ಒಂದು ಪದದ ಮೇಲೆ ಟ್ಯಾಪ್ ಮಾಡುವ ಮೂಲಕ ಅದರ ಅರ್ಥವನ್ನು ತಿಳಿಯಬಹುದು.

ಚೀನಿ ಅಪ್ಲಿಕೇಶನ್​ಗಳಿಗೆ ಸೆಡ್ಡು ಹೊಡೆದಿದೆ 'ಮ್ಯಾಗ್ ಟ್ಯಾಪ್'

ಮೂರು ಸ್ನೇಹಿತರು ಅಭಿವೃದ್ಧಿಪಡಿಸಿದ ಅಪ್ಲಿಕೇಶನ್:

ಸಮಸ್ತಿಪುರದ ಮೋಹನ್‌ಪುರ ಬ್ಲಾಕ್‌ನ ನಿವಾಸಿ ರೋಹನ್ ಸಿಂಗ್ ಮತ್ತು ಸತ್ಯಪಾಲ್ ಚಂದ್ರ ಅವರ ಸಹೋದರ ಅಭಿಷೇಕ್ ಸಿಂಗ್ ಇಬ್ಬರೂ ಆ್ಯಪ್‌ ಅಭಿವೃದ್ಧಿ ಪಡಿಸುವಲ್ಲಿ ಮುಖ್ಯರಾಗಿದ್ದಾರೆ.

'ಮ್ಯಾಗ್ ಟ್ಯಾಪ್' ಆ್ಯಪ್ ತಯಾರಿಸುವ ಕಂಪನಿಯು ಮುಂಬೈನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ.

'ಮ್ಯಾಗ್ ಟ್ಯಾಪ್' ಅನ್ನು ರೋಹನ್ ವಿನ್ಯಾಸಗೊಳಿಸಿದ್ದು, 18 ವರ್ಷದ ಸಹೋದರ ಅಭಿಷೇಕ್ ಸಿಂಗ್ ಅವರು ಅಪ್ಲಿಕೇಶನ್‌ನ ತಾಂತ್ರಿಕ ಅಂಶಗಳನ್ನು ನಿರ್ವಹಿಸುತ್ತಾರೆ.

ಬಿಹಾರ ಯುವಕರ ಸಾಧನೆ

“ನನ್ನ ಮಗ ಬಾಲ್ಯದಿಂದಲೂ ಬುದ್ಧಿವಂತನಾಗಿದ್ದನು. ಅವನು ಪ್ರಾಥಮಿಕ ಶಿಕ್ಷಣವನ್ನು ಇಮಾಮ್‌ಗಂಜ್‌ನಲ್ಲಿ ಪಡೆದ. ಹೋಮಿಯೋಪತಿ ಔಷಧಿಯನ್ನು ಮಾರಾಟ ಮಾಡುವ ಮೂಲಕ, ನಾನು ಸಾಧ್ಯವಾದಷ್ಟು ಓದಿಸಿದೆ. ಇದಲ್ಲದೆ, ಅವರು ತಮ್ಮದೇ ಆದ ಗುರುತನ್ನು ಸ್ಥಾಪಿಸಿಕೊಂಡಿದ್ದಾರೆ. ನಾನು ತುಂಬಾ ಸಂತೋಷವಾಗಿದ್ದೇನೆ ಎಂದು ಸತ್ಯಪಾಲ್ ಅವರ ತಂದೆ ಮಹೇಂದ್ರ ಪ್ರಸಾದ್ ಸಿಂಗ್ ಹೇಳುತ್ತಾರೆ.

ABOUT THE AUTHOR

...view details