ಆನಂದ (ಗುಜರಾತ್): ಸರ್ಕಾರದ ಸೇವೆಗಳಲ್ಲಿ ಯಾವುದೇ ವ್ಯತ್ಯಯವಾಗಬಾರದೆಂದು ತುಂಬು ಗರ್ಭಿಣಿಯಾಗಿದ್ದರೂ ಕೆಲಸಕ್ಕೆ ಹಾಜರಾಗುತ್ತಿರುವ ಮಹಿಳೆಯ ಕರ್ತವ್ಯ ಪ್ರಜ್ಞೆ ಎಲ್ಲರಿಗೂ ಮಾದರಿಯಾಗುವಂತಿದೆ. ಆನಂದ ಜಿಲ್ಲೆಯ ಪೆಟ್ಲಾಡ್ನ ಸರ್ಕಾರಿ ಆಹಾರ ಗೋದಾಮಿನಲ್ಲಿ ಮ್ಯಾನೇಜರ್ ಆಗಿರುವ ಮಹಿಳೆ ಈಗ 9 ತಿಂಗಳ ತುಂಬು ಗರ್ಭಿಣಿ. ಕೋವಿಡ್-19 ನ ತುರ್ತು ಸಂದರ್ಭದಲ್ಲಿ ಪಡಿತರ ಅಂಗಡಿಗಳಿಗೆ ಹಾಗೂ ಗ್ರಾಹಕರಿಗೆ ಆಹಾರ ಧಾನ್ಯ ಪೂರೈಕೆಯಲ್ಲಿ ಯಾವುದೇ ತೊಂದರೆಯಾಗಬಾರದೆಂಬ ಕಾಳಜಿಯಿಂದ ಗರ್ಭಿಣಿಯಾಗಿದ್ದರೂ ಇವರು ಕರ್ತವ್ಯದ ಕರೆಗೆ ಓಗೊಟ್ಟಿದ್ದಾರೆ.
ಎಲ್ಲರಿಗೂ ಮಾದರಿ ಈ ತುಂಬು ಗರ್ಭಿಣಿ ಅಧಿಕಾರಿಯ ಕರ್ತವ್ಯ ಪ್ರಜ್ಞೆ - ಸರ್ಕಾರಿ ಆಹಾರ ಗೋದಾಮು
ಗುಜರಾತಿನ ಆನಂದ ಜಿಲ್ಲೆಯ ಪೆಟ್ಲಾಡ್ನ ಸರಕಾರಿ ಆಹಾರ ಗೋದಾಮಿನಲ್ಲಿ ಮ್ಯಾನೇಜರ್ ಆಗಿರುವ ವನಿತಾ ಬೆನ್ 9 ತಿಂಗಳ ತುಂಬು ಗರ್ಭಿಣಿ.. ಹೀಗಿದ್ದರೂ ಕರ್ತವ್ಯಕ್ಕೆ ಹಾಜರಾಗುತ್ತಿರುವುದು ಎಲ್ಲರಿಗೂ ಮಾದರಿಯಾಗಿದೆ. ಸಂಕಷ್ಟದ ಸಮಯದಲ್ಲಿ ಬಡವರಿಗೆ ಆಹಾರ ಧಾನ್ಯ ತಲುಪಿಸುವುದು ತನ್ನ ಆರೋಗ್ಯಕ್ಕಿಂತ ಮುಖ್ಯವಾಗಿದೆ ಎನ್ನುತ್ತಾರೆ ವನಿತಾ ಬೆನ್.
ಗೋದಾಮು ಮ್ಯಾನೇಜರ್ ವನಿತಾ ಬೆನ್ ರಾಠೋಡ್ ಅವರಿಗೆ ಸರ್ಕಾರ ಹೆರಿಗೆ ರಜೆಯನ್ನು ಈಗಾಗಲೇ ಮಂಜೂರು ಮಾಡಿದೆ. ಆದರೂ ಇವರು ಸ್ವಯಂ ಪ್ರೇರಣೆಯಿಂದ ಕೆಲಸಕ್ಕೆ ಬರುತ್ತಿದ್ದಾರೆ. ಸಂಕಷ್ಟದ ಸಮಯದಲ್ಲಿ ಬಡವರಿಗೆ ಆಹಾರ ಧಾನ್ಯ ತಲುಪಿಸುವುದು ತನ್ನ ಆರೋಗ್ಯಕ್ಕಿಂತ ಮುಖ್ಯವಾಗಿದೆ ಎನ್ನುತ್ತಾರೆ ವನಿತಾ ಬೆನ್.
ತನ್ನ ಕಷ್ಟಗಳನ್ನು ಮರೆತು ಜನಸೇವೆ ಮಾಡುತ್ತಿರುವ ಇಂಥವರು ಎಲ್ಲರಿಗೂ ಮಾದರಿಯಾಗಿದ್ದಾರೆ. ಇವರ ಕರ್ತವ್ಯ ಪ್ರಜ್ಞೆ ಹಾಗೂ ಸಾಮಾಜಿಕ ಕಾಳಜಿಯನ್ನು ನೋಡಿ ಜನಸಾಮಾನ್ಯರೂ ಪಾಠ ಕಲಿಯಬೇಕಿದೆ. ಸಾಮಾನ್ಯ ಜನತೆ ಕನಿಷ್ಠ ಮನೆಯಲ್ಲಿದ್ದು ಸಾಮಾಜಿಕ ಅಂತರ ಕಾಪಾಡಿಕೊಂಡಲ್ಲಿ ಕೋವಿಡ್ ಹೋರಾಟದಲ್ಲಿ ಜಯಗಳಿಸುವುದು ದೂರವೇನಿಲ್ಲ.