ನವದೆಹಲಿ:ಬೇಸಿಗೆಯ ಬಿಸಿಯಲ್ಲಿ ಬಳಲಿರುವ ದೇಶದ ಜನತೆಗೆ ಖಾಸಗಿ ಹವಾಮಾನ ಸಂಸ್ಥೆ ಸ್ಕೈಮೆಟ್ ಶಾಕಿಂಗ್ ಸುದ್ದಿಯನ್ನು ಹೇಳಿದೆ.
ಈ ಬಾರಿ ಮುಂಗಾರು ಉತ್ತಮವಾಗಿ ಸುರಿಯುವ ಸಾಧ್ಯತೆ ಇದೆ ಅಂದುಕೊಂಡವರಿಗೆ ಸ್ಕೈಮೆಟ್ ವರದಿ ಬೇಸರ ಮೂಡಿಸುವುದು ಗ್ಯಾರಂಟಿ. ಮುಂಗಾರಿನ ಪ್ರಮಾಣ ಕಡಿಮೆ ಇರುವ ಸಾಧ್ಯತೆಯನ್ನು ಸ್ಕೈಮೆಟ್ ಅಂದಾಜಿಸಿದೆ.
ಎಲ್ ನಿನೋ ಪ್ರಭಾವ:
ಮಳೆ ಪ್ರಮಾಣ ಕಡಿಮೆಯಾಗಲು ಎಲ್ ನಿನೋ ಪ್ರಭಾವನ್ನು ಮುಂದಿಟ್ಟಿದೆ ಸ್ಕೈಮೆಟ್ ತಂಡ. ಮಳೆ ಕಡಿಮೆಯಾದಲ್ಲಿ ಕೃಷಿ ವಲಯಕ್ಕೆ ಹೊಡೆತ ಬೀಳೋದು ಗ್ಯಾರಂಟಿ ಎಂದು ಸ್ಕೈಮೆಟ್ ಎಂಡಿ ಜತಿನ್ ಸಿಂಗ್ ಹೇಳಿದ್ದಾರೆ.
ಸ್ಕೈಮೆಟ್ ವರದಿ ನಿಜವಾದಲ್ಲಿ 2014ರಿಂದ ನಾಲ್ಕನೇ ಬಾರಿಗೆ ಮಳೆ ಪ್ರಮಾಣ ಕಡಿಮೆ ಆದಂತಾಗಲಿದೆ. 2015 ಹಾಗೂ 2016ರಲ್ಲಿ ಎಲ್ ನಿನೋ ಪ್ರಭಾವ ತೀರಾ ಹೆಚ್ಚಾಳ ಮಳೆ ಪ್ರಮಾಣ ಇಳಿಕೆಯಾಗಿತ್ತು.