ಕರ್ನಾಟಕ

karnataka

ETV Bharat / bharat

ಈ ಬಾರಿ ನಾವೇ ಗೆಲ್ಲೋದು.. ಮೋದಿ ಅಧಿಕಾರಕ್ಕೆ ಬರಲ್ಲ: ಇದು ಇವರ ಭವಿಷ್ಯ - Rahul Gandhi

ಕೇಂದ್ರದಲ್ಲಿ ಈ ಬಾರಿ ಬಿಜೆಪಿಯೇತರ ಸರ್ಕಾರ ಬರುವುದು ಖಚಿತ. ಕಾಂಗ್ರೆಸ್​ ಗೆಲುವು ಸಾಧಿಸುವುದು ನಿಶ್ಚಿತ ಎಂದು ಕಾಂಗ್ರೆಸ್​​ನ ಮುಖ್ಯಸ್ಥ ಸ್ಯಾಮ್ ಪಿತ್ರೋಡಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಭಾರತೀಯ ಸಾಗರೋತ್ತರ ಕಾಂಗ್ರೆಸ್​​ನ ಮುಖ್ಯಸ್ಥ ಸ್ಯಾಮ್ ಪಿತ್ರೋಡಾ

By

Published : May 4, 2019, 10:44 AM IST

Updated : May 4, 2019, 10:51 AM IST

ನವದೆಹಲಿ: ವಾಸ್ತವಾಂಶಗಳ ಆಧಾರದ ಮೇಲೆ ಹೇಳುವುದಾದರೆ ನಾವು ಅಂದರೆ ಕಾಂಗ್ರೆಸ್​ ಗೆಲುವು ಸಾಧಿಸುವುದು ನಿಶ್ಚಿತ ಎಂಬುದು ನಮ್ಮ ನಂಬಿಕೆ ಎಂದು ಭಾರತೀಯ ಸಾಗರೋತ್ತರ ಕಾಂಗ್ರೆಸ್​​ನ ಮುಖ್ಯಸ್ಥ ಸ್ಯಾಮ್ ಪಿತ್ರೋಡಾ ಅಚಲ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಖಾಸಗಿ ಮಾಧ್ಯಮವೊಂದಕ್ಕೆ ಮಾತನಾಡಿದ ಅವರು, ಮಾಧ್ಯಮಗಳು ವರದಿ ಮಾಡುವುದಕ್ಕೂ ಮತ್ತು ವಾಸ್ತವಕ್ಕೂ ಅಜಗಜಾಂತರವಿದೆ. ಆ ಬಗ್ಗೆ ಯಾರೂ ವರದಿ ಮಾಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಈ ಬಾರಿ ಬಿಜೆಪಿಯೇತರ ಸರ್ಕಾರ ರಚನೆ ಆಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ನಡುವೆ ರಾಹುಲ್​ ಗಾಂಧಿ ಅವರ ಪೌರತ್ವ ವಿಚಾರದ ಬಗ್ಗೆ ಮಾತನಾಡಿದ ಅವರು, ರಾಹುಲ್​ 15 ವರ್ಷಗಳಿಂದ ಎಂಪಿ ಆಗಿದ್ದಾರೆ. ಸಂಸತ್​ನಲ್ಲಿ ಅವರು ಕುಳಿತು ಸರ್ಕಾರದ ವಿರುದ್ಧ ಹೋರಾಟ ನಡೆಸಿದ್ದಾರೆ. ಇವತ್ತ್ಯಾಕೆ ಈ ವಿಷಯ ಮತ್ತೆ ಪ್ರಸ್ತಾಪವಾಗಿದೆ. ಜನ ಏನು ಮೂರ್ಖರು ಎಂದು ತಿಳಿದುಕೊಂಡಿದ್ದೀರಾ? ಭಾರತೀಯರ ಜಾಣ್ಮೆಯನ್ನ ಅಂಡರ್​ ಎಸ್ಟೀಮೇಟ್​ ಮಾಡಬೇಡಿ ಎಂದು ಪಿತ್ರೋಡಾ ಎಚ್ಚರಿಕೆ ನೀಡಿದ್ದಾರೆ.

ಪ್ರತಿಪಕ್ಷಗಳು ಒಗ್ಗಟ್ಟಿನಿಂದಿವೆ ಆ ಬಗ್ಗೆ ಯಾವುದೇ ಆತಂಕ ಬೇಡ. ಸೂಕ್ತ ಸಮಯದಲ್ಲಿ ಅವೆಲ್ಲ ಒಗ್ಗೂಡಲಿವೆ. ನಮ್ಮೆಲ್ಲರ ಹಾಗೂ ಎಲ್ಲ ಪ್ರತಿಪಕ್ಷಗಳ ಗುರಿ ಒಂದೇ, ದೇಶದ ಪ್ರಜಾಪ್ರಭುತ್ವ ಉಳಿಯಬೇಕಾಗಿದೆ. ಶಾಂತಿಬೇಕಾಗಿದೆ ಎಂದು ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

Last Updated : May 4, 2019, 10:51 AM IST

ABOUT THE AUTHOR

...view details