ಕಣ್ಣೂರು (ಕೇರಳ): ಸಾಮಾನ್ಯವಾಗಿ ಶಿಕ್ಷಕರ ದಿನಾಚರಣೆಗೆ ವಿದ್ಯಾರ್ಥಿಗಳು ಅವರನ್ನು ಮನರಂಜಿಸುವ ಅಥವಾ ಇಷ್ಟದ ಉಡುಗೊರೆ ನೀಡುವುದು ರೂಢಿ. ಆದರೆ, ಇಲ್ಲೊಬ್ಬ ಚಿತ್ರಕಲಾ ಶಿಕ್ಷಕರು ವಿದ್ಯಾರ್ಥಿಗಳಿಗೆ ಉಡುಗೊರೆ ಕೊಡಲು ನಿರ್ಧರಿಸಿದ್ದಾರೆ.
ಕೇರಳ ರಾಜ್ಯದ ಕಣ್ಣೂರಿನ ಪಯಣ್ಣೂರ್ ಕಂದಂಗಳಿ ಶೆನಾಯ್ಸ್ ಮೆಮೋರಿಯಲ್ ಶಾಲೆಯ ಚಿತ್ರಕಲಾ ಶಿಕ್ಷಕ ಅನೂರ್ ವಿದ್ಯಾರ್ಥಿಗಳಿಗಾಗಿ ಡಾಟ್ ಪೋರ್ಟ್ರೇಟ್ (ಚುಕ್ಕಿ ಚಿತ್ರಕಲೆ) ಅನ್ನು ಬಿಡಿಸುತ್ತಿದ್ದಾರೆ.
ಅನೂರ್ ತಮ್ಮ ಚಿತ್ರಕಲಾ ವಿಭಾಗದ 35 ವಿದ್ಯಾರ್ಥಿಗಳ ಡಾಟ್ ಪೇಂಟಿಂಗ್ ಮಾಡುತ್ತಿದ್ದು, ಶಾಲೆ ಮತ್ತೆ ಆರಂಭವಾಗುತ್ತಿದ್ದಂತೆ ಅವರನ್ನು ವಿಶೇಷ ರೀತಿಯಲ್ಲಿ ಖುಷಿಗೊಳಿಸುವ ಸಿದ್ಧತೆಯಲ್ಲಿ ತೊಡಗಿದ್ದಾರೆ.