ಕರ್ನಾಟಕ

karnataka

By

Published : Jan 13, 2020, 10:14 PM IST

ETV Bharat / bharat

ಫೈರಿಂಗ್​ ಮಾಡಲು ಇದೇನು ಉತ್ತರ ಪ್ರದೇಶವಲ್ಲ: ದಿಲೀಪ್ ಘೋಷ್​ಗೆ ದೀದಿ ತಿರುಗೇಟು

ಸಿಎಎ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸುತ್ತೇವೆ ಎಂಬ ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಹೇಳಿಕೆ ವಿರುದ್ಧ ಸಿಎಂ ಮಮತಾ ಬ್ಯಾನರ್ಜಿ ಗುಡುಗಿದ್ದು, ಫೈರಿಂಗ್​ ಮಾಡಲು ಇದೇನು ಉತ್ತರ ಪ್ರದೇಶವಲ್ಲ, ಇಲ್ಲಿ ಇದೆಲ್ಲಾ ನಡೆಯುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.

CM Mamata Banarjee fires on Dilip Ghosh
ದಿಲೀಪ್ ಘೋಷ್​ಗೆ ದೀದಿ ತಿರುಗೇಟು

ಕೋಲ್ಕತ್ತಾ: ಶೂಟೌಟ್​ ಮಾಡಲು ಇದು ಉತ್ತರ ಪ್ರದೇಶವಲ್ಲ. ಪ್ರತಿಭಟನಾಕಾರರನ್ನು ಸಾಯಿಸಿ ಎಂದು ಹೇಳಲು ನಿಮಗೆ ನಾಚಿಕೆಯಾಗುವುದಿಲ್ಲವೇ ಎಂದು ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ವಿರುದ್ಧ ಸಿಎಂ ಮಮತಾ ಬ್ಯಾನರ್ಜಿ ಕಿಡಿಕಾರಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸಿ ಸಾರ್ವಜನಿಕ ಆಸ್ತಿ-ಪಾಸ್ತಿ ಹಾನಿ ಮಾಡಿದವರ ವಿರುದ್ಧ ಪಶ್ಚಿಮ ಬಂಗಾಳ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಏಕೆಂದರೆ ಅವರೆಲ್ಲಾ ಮಮತಾ ಬ್ಯಾನರ್ಜಿ ಮತದಾರರು. ಉತ್ತರ ಪ್ರದೇಶ, ಅಸ್ಸೋ ಹಾಗೂ ಕರ್ನಾಟಕದ ನಮ್ಮ ಬಿಜೆಪಿ ಸರ್ಕಾರ ಇಂತಹ ಪ್ರತಿಭಟನಾಕಾರರನ್ನು ನಾಯಿಯಂತೆ ಶೂಟ್​ ಮಾಡಿ ಸಾಯಿಸಿದೆ. ಹೀಗೆ ಪ್ರತಿಭಟನೆ ನಡೆಸಿದರೆ ಇಲ್ಲಿ ಕೂಡ ನಾವು ನಿಮ್ಮ ಮೇಲೆ ಗುಂಡು ಹಾರಿಸುತ್ತೇವೆ ಎಂದು ದಿಲೀಪ್ ಘೋಷ್ ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಇದಕ್ಕೆ ತಿರುಗೇಟು ನೀಡಿರುವ ಮಮತಾ ಬ್ಯಾನರ್ಜಿ, ರಾಜ್ಯದ ಸಿಎಎ ವಿರೋಧಿ ಪ್ರತಿಭಟನಾಕಾರರ ಮೇಲೆ ಫೈರಿಂಗ್​ ಆಗಬೇಕೆಂದು ಬಯಸಲು ನಾಚಿಕೆಯಾಗುವುದಿಲ್ಲ. ಇದೇನು ಉತ್ತರ ಪ್ರದೇಶವಲ್ಲ, ಇಲ್ಲಿ ಇದೆಲ್ಲಾ ನಡೆಯುವುದಿಲ್ಲ. ನಾಳೆ ರಾಜ್ಯದಲ್ಲಿ ಏನಾದರೂ ಅಹಿತಕರ ಘಟನೆ ನಡೆದರೆ ಅದಕ್ಕೇ ನೀವೂ ಜವಾಬ್ದಾರರಾಗಿರುತ್ತೀರಿ ಎಂದು ಹೇಳಿದ್ದಾರೆ.

ABOUT THE AUTHOR

...view details