ಹೈದರಾಬಾದ್: ನಗರ ಮೂಲದ ಲೈಫ್ ಸೈನ್ಸಸ್ ಕಂಪನಿಯು ಕ್ವಾಂಟಿಪ್ಲಸ್ ಸಿಒವಿ(Quantiplus COV) ಹೆಸರಿನ ಕೊರೊನಾ ವೈರಸ್ ಟೆಸ್ಟ್ ಕಿಟ್ ಅಭಿವೃದ್ಧಿಪಡಿಸಿದೆ. ಈ ಪರೀಕ್ಷಾ ಕಿಟ್ ಕೇವಲ 2 ಗಂಟೆಗಳಲ್ಲಿ ಫಲಿತಾಂಶವನ್ನು ನೀಡುತ್ತದೆ.
ಹೈದರಾಬಾದ್ ಮೂಲದ ಸಂಸ್ಥೆಯಿಂದ 2 ಗಂಟೆಗಳಲ್ಲಿ ಫಲಿತಾಂಶ ನೀಡುವ ಕೋವಿಡ್ -19 ಕಿಟ್ ತಯಾರಿ - Covid-19 test kit gives result in 2 hours
'ಹುವೆಲ್ ಲೈಫ್ ಸೈನ್ಸಸ್' ಸಂಸ್ಥೆಯು ಕಳೆದ ಶುಕ್ರವಾರ ಐಸಿಎಂಆರ್ನಿಂದ 'ಕ್ವಾಂಟಿಪ್ಲಸ್ ಕೋವಿಡ್ -19' ಕಿಟ್ಗೆ ಅನುಮೋದನೆ ಪಡೆದಿದೆ. ಇದು ಕೇವಲ ಎರಡು ಗಂಟೆಯೊಳಗೆ ಕೊರೊನಾ ಪರೀಕ್ಷೆ ನಡೆಸಿ ಫಲಿತಾಂಶ ನೀಡಲಿದೆ.
ಈ ಟೆಸ್ಟ್ ಕಿಟ್ ಪ್ರಯೋಗಿಸಲು 'ಹುವೆಲ್ ಲೈಫ್ ಸೈನ್ಸಸ್' ಸಂಸ್ಥೆಯು ಕಳೆದ ಶುಕ್ರವಾರ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್)ಯಿಂದ ಅನುಮೋದನೆ ಪಡೆದಿದೆ. ಇದರ ಉತ್ಪಾದನೆಯು ಕಂಪನಿಯ ನರಸಿಂಗಿ ಮತ್ತು ಕೊಕಾಪೆಟ್ ಬ್ರಾಂಚ್ನಲ್ಲಿ ಸೋಮವಾರದಿಂದ ಪ್ರಾರಂಭವಾಗಲಿದೆ ಎಂದು ಹುವೆಲ್ ಲೈಫ್ ಸೈನ್ಸಸ್ ಸಂಸ್ಥೆಯ ನಿರ್ದೇಶಕ ಶಶೀರ್ ಕುಮಾರ್ ಶನಿವಾರ ಮಾಧ್ಯಮಗಳಿಗೆ ತಿಳಿಸಿದರು.
ಕ್ವಾಂಟಿಪ್ಲಸ್ ಕೋವಿಡ್ -19 ಕಿಟ್ ಅಮೆರಿಕಾದ ರಾಷ್ಟ್ರೀಯ ಸಾರ್ವಜನಿಕ ಆರೋಗ್ಯ ಸಂಸ್ಥೆಯಾದ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್(ಸಿಡಿಸಿ)ನಿಂದ ಪ್ರಕಟಿತ ಪ್ರೋಟೋಕಾಲ್ ಆಧರಿಸಿ ತಯಾರಿಸಲಾಗಿದೆ. ಇದು ಕೇವಲ ಎರಡು ಗಂಟೆಯೊಳಗೆ ಕೊರೊನಾ ಪರೀಕ್ಷೆ ನಡೆಸಿ ಫಲಿತಾಂಶ ನೀಡಲಿದೆ.