ಲೇಹ್ (ಲಡಾಖ್) : ಭಾರತ- ಚೀನಾ ಸಂಘರ್ಷಕ್ಕೆ ಸಂಬಂಧಿಸಿದಂತೆ ಉಭಯ ಸೇನೆಗಳ ಕಮಾಂಡರ್ ಹಂತದ ಮಾತುಕತೆ ಸುಮಾರು 12 ಗಂಟೆಗಳ ಕಾಲ ನಡೆದಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
ಮಂಗಳವಾರ ಚುನ್ಶುಲ್ನಲ್ಲಿ ಎರಡೂ ರಾಷ್ಟ್ರಗಳ ಕಮಾಂಡರ್ಗಳು ಸಭೆ ನಡೆಸಿದ್ದು, ರಾತ್ರಿ 11 ಗಂಟೆಗೆ ಮಾತುಕತೆ ಅಂತ್ಯವಾಗಿದೆ. ಎರಡೂ ರಾಷ್ಟ್ರಗಳ ನಡುವಿನ ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ನ ಸಂಘರ್ಷವನ್ನು ಬಗೆಹರಿಸಿಕೊಳ್ಳುವ ಸಲುವಾಗಿ ಈ ಮಾತುಕತೆ ನಡೆದಿದೆ ಎಂದು ಭಾರತೀಯ ಸೇನಾ ಮೂಲಗಳು ಸ್ಪಷ್ಟನೆ ನೀಡಿವೆ.
ಇದಕ್ಕೂ ಮೊದಲು ಎರಡು ಮಾತುಕತೆಗಳು ನಡೆದಿದ್ದವು. ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ನ ಚೀನಾ ಭಾಗದಲ್ಲಿರುವ ಮೋಲ್ಡೋದಲ್ಲಿ ಸಭೆಗಳನ್ನು ನಡೆಸಲಾಗಿತ್ತು. ಜೂನ್ 6ರಂದು ನಡೆದ ಮೊದಲ ಸುತ್ತಿನ ಸಭೆ ನಿರೀಕ್ಷೆಯಷ್ಟು ಫಲಪ್ರದವಾಗಿರಲಿಲ್ಲ.