ಕರ್ನಾಟಕ

karnataka

ETV Bharat / bharat

ಕೋವಿಡ್​ ವ್ಯಾಕ್ಸಿನ್​ನ 3ನೇ ಹಂತದ ಮಾನವ ಪ್ರಯೋಗ ಶೀಘ್ರದಲ್ಲೇ ಒಡಿಶಾದಲ್ಲಿ ಪ್ರಾರಂಭ! - ಮಾನವನ ಮೇಲೆ ಕೋವಿಡ್​ ಲಸಿಕೆ ಪ್ರಯೋಗ ಸುದ್ದಿ

ಒಡಿಶಾ ಭುವನೇಶ್ವರದಲ್ಲಿರುವ ವೈದ್ಯಕೀಯ ವಿಜ್ಞಾನ ಸಂಸ್ಥೆ (ಐಎಂಎಸ್) ಮತ್ತು ಎಸ್‌ಯುಎಂ ಆಸ್ಪತ್ರೆಯಲ್ಲಿ ಅತೀ ಶೀಘ್ರದಲ್ಲಿ ಸ್ಥಳೀಯವಾಗಿ ಅಭಿವೃದ್ಧಿ ಪಡಿಸಿರುವ ಮಾನವನ ಮೇಲಿನ ಕೋವಿಡ್​ ವ್ಯಾಕ್ಸಿನ್​ನ ಮೂರನೇ ಹಂತದ ಲಸಿಕೆ ಪ್ರಯೋಗ ನಡೆಯಲಿದೆ. ತಾವಾಗೇ ಮುಂದೆ ಬರುವವವರ ಮೇಲೆ ಈ ಲಸಿಕೆ ಪ್ರಯೋಗ ಮಾಡಲು ತೀರ್ಮಾನಿಸಲಾಗಿದೆ.

Third phase human trial of Covaxin
ಕೋವಿಡ್​ ವ್ಯಾಕ್ಸಿನ್​ನ 3ನೇ ಹಂತದ ಮಾನವ ಪ್ರಯೋಗ ಶೀಘ್ರದಲ್ಲೇ ಒಡಿಶಾದಲ್ಲಿ ಪ್ರಾರಂಭ!

By

Published : Oct 26, 2020, 5:53 PM IST

ಭುವನೇಶ್ವರ್​/ಒಡಿಶಾ:ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ COVID-19 ಲಸಿಕೆ 'ಕೊವ್ಯಾಕ್ಸಿನ್' ನ ಮೂರನೇ ಹಂತದ ಮಾನವ ಪ್ರಯೋಗ ಶೀಘ್ರದಲ್ಲೇ ಒಡಿಶಾದ ವೈದ್ಯಕೀಯ ವಿಜ್ಞಾನ ಸಂಸ್ಥೆ (ಐಎಂಎಸ್) ಮತ್ತು ಎಸ್‌ಯುಎಂ ಆಸ್ಪತ್ರೆಯಲ್ಲಿ ಪ್ರಾರಂಭವಾಗಲಿದೆ.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು (ಐಸಿಎಂಆರ್) ದೇಶಾದ್ಯಂತ ಆಯ್ಕೆ ಮಾಡಿದ 21 ವೈದ್ಯಕೀಯ ಸಂಸ್ಥೆಗಳ ಪಟ್ಟಿಯಲ್ಲಿ ಐಎಂಎಸ್ ಮತ್ತು ಎಸ್‌ಯುಎಂ ಆಸ್ಪತ್ರೆ ಹೆಸರಿದ್ದು, ಇಲ್ಲಿ ಮೂರನೇ ಹಂತದ ಪ್ರಯೋಗವನ್ನು ನಡೆಸಲಾಗುವುದು.

ಪ್ರಾಣಿಗಳ ಮೇಲೆ ಪ್ರಯೋಗವಾದ ಬಳಿಕ ಈ ಲಸಿಕೆಯ ಮೂರನೇ ಹಂತದ ಪ್ರಯೋಗಕ್ಕೆ ಅನುಮತಿ ದೊರೆತಿದೆ. ಒಡಿಶಾದಲ್ಲಿ ಈ ಲಸಿಕೆ ಪ್ರಯೋಗಕ್ಕೆ ಆಯ್ಕೆ ಮಾಡಲಾಗಿರುವ ಏಕೈಕ ಸಂಶೋಧನಾ ಕೇಂದ್ರ ಇದಾಗಿದೆ.

ಈ ಕುರಿತು ಮಾತನಾಡಿದ ಐಎಂಎಸ್ ಮತ್ತು ಎಸ್‌ಯುಎಂ ಆಸ್ಪತ್ರೆಯ ಸಮುದಾಯ ಔಷಧ ವಿಭಾಗದ ಪ್ರಾಧ್ಯಾಪಕ ಡಾ.ಇ. ವೆಂಕಟ ರಾವ್, ಐಸಿಎಂಆರ್ ಮತ್ತು ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸುತ್ತಿರುವ ಸ್ಥಳೀಯ ಲಸಿಕೆಯನ್ನು 3ನೇ ಹಂತದ ಪ್ರಯೋಗಕ್ಕೆ ಅನುಮೋದಿಸಲಾಗಿದೆ. ಮೂರನೇ ಹಂತದ ಪ್ರಯೋಗವನ್ನು ಕೇಂದ್ರ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ ಆಯೋಜಕತ್ವದಲ್ಲಿ ಇದು ನಡೆಯಲಿದೆ ಎಂದು ತಿಳಿಸಿದ್ದಾರೆ.

ಇನ್ನು ಈ ಪ್ರಯೋಗಕ್ಕೆ ಒಳಪಡಲು ಇಚ್ಛಿಸಿ ತಾವಾಗೇ ಬರುವವರ ಮೇಲೆ ಈ ಲಸಿಕೆಯನ್ನ ಪ್ರಯೋಗಮಾಡಲು ನಿರ್ಧರಿಸಲಾಗಿದೆ. ಪ್ರಯೋಗಕ್ಕೆ ಒಳಪಡಲು ಇಚ್ಛಿಸುವವರು www.ptctu.soa.ac ಈ ವೆಬ್​ಸೈಟ್​ನಲ್ಲಿ ನೋಂದಣಿ ಮಾಡಿಕೊಳ್ಳಬಹುದು. ಒಟ್ಟು 28,500 ಜನರ ತಾವಾಗಿಯೇ ಈ ಲಸಿಕೆಯ ಪ್ರಯೋಗಕ್ಕೆ ಒಳಪಡಲು ಮುಂದಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ ಅಂತ ಪ್ರೊ. ರಾವ್​ ತಿಳಿಸಿದ್ದಾರೆ.

ABOUT THE AUTHOR

...view details