ಕರ್ನಾಟಕ

karnataka

ETV Bharat / bharat

ವಾಹನ ಸವಾರರಿಗೆ ವಿಮೆ ಭಾರ.. ಥರ್ಡ್​ ಪಾರ್ಟಿ ಇನ್ಷೂರೆನ್ಸ್ ವೆಚ್ಚ ಏರಿಕೆ -

ವಿಮಾ ವಲಯದ ನಿಯಂತ್ರಕ ಐಆರ್​ಡಿಎ ಕೆಲವು ವರ್ಗದ ಮೂರನೇ ವ್ಯಕ್ತಿಯ ವಿಮೆಯ ಪ್ರೀಮಿಯಂ (ಟಿಪಿ) ವೆಚ್ಚವನ್ನು ಶೇ.21ರವರೆಗೆ ಹೆಚ್ಚಿಸಿದೆ.

ಸಾಂದರ್ಭಿಕ ಚಿತ್ರ

By

Published : Jun 8, 2019, 2:10 PM IST

ನವದೆಹಲಿ:ಕಾರು ಮತ್ತು ಬೈಕ್​ಗಳ ಥರ್ಡ್​ ಪಾರ್ಟಿ ಇನ್ಷೂರೆನ್ಸ್​ ಪ್ರೀಮಿಯಂ ವೆಚ್ಚವು ಜೂನ್​ 16ರಿಂದ ಏರಿಕೆಯಾಗಲಿದೆ.ವಿಮಾ ವಲಯದ ನಿಯಂತ್ರಕ ಐಆರ್​ಡಿಎ ಕೆಲವು ವರ್ಗದ 3ನೇ ವ್ಯಕ್ತಿಯ ವಿಮೆಯ ಪ್ರೀಮಿಯಂ (ಟಿಪಿ) ವೆಚ್ಚವನ್ನು ಶೇ. 21ರವರೆಗೆ ಹೆಚ್ಚಿಸಿದೆ.

1,000 ಸಿಸಿಗಿಂತ ಕಡಿಮೆ ಸಾಮರ್ಥ್ಯದ ಎಂಜಿನ್​ನ ಸಣ್ಣ ಕಾರುಗಳಿಗೆ ಹೊಸ ಟಿಪಿ ವಿಮಾ ವೆಚ್ಚ ₹ 1,850 ರಿಂದ ₹ 2,072ಗೆ ಏರಿಕೆಯಾಗಲಿದೆ. 1,000 ಸಿಸಿಯಿಂಸ 1,500 ಸಾಮರ್ಥ್ಯದ ಎಂಜಿನ್​​ ಕಾರುಗಳಿಗೆ ಶೇ. 12.5ರಷ್ಟು ವಿಮಾ ವೆಚ್ಚ ಹೆಚ್ಚಳವಾಗಿದ್ದು, ₹ 3,221 ಪಾವತಿಸಬೇಕಿದೆ. ಆದರೆ, 1,500 ಸಿಸಿಗೂ ಅಧಿಕ ಸಾಮರ್ಥ್ಯದ ಎಂಜಿನ್‌ ಕಾರುಗಳ ಟಿಪಿ ವಿಮೆ ಕಂತಿನ ವೆಚ್ಚ ₹ 7,890ನಲ್ಲಿ ಮುಂದುವರಿದಿದೆ.

ಬೈಕ್​ಗಳ ಪೈಕಿ 75 ಸಿಸಿಗಿಂತ ಕಡಿಮೆ ಸಾಮರ್ಥ್ಯದ ಎಂಜಿನ್​ ಇದ್ದರೆ ನೂತನ ಥರ್ಡ್​ ಪಾರ್ಟಿ ಇ-ವಿಮೆಯ ವೆಚ್ಚ ₹482 ಹಾಗೂ 75ಯಿಂದ150ಸಿಸಿ ಎಂಜಿನ್‌ ಆಗಿದ್ದರೆ ವಿಮೆ ವೆಚ್ಚ₹752ಗೆ ನಿಗದಿಯಾಗಿದೆ. 150-350 ಸಿಸಿ ವಾಹನಕ್ಕೆ ಪ್ರೀಮಿಯಂ ವೆಚ್ಚ ₹ 1,193ಗೆ ಏರಿಕೆಯಾಗಿದೆ.

For All Latest Updates

TAGGED:

ABOUT THE AUTHOR

...view details