ಕರ್ನಾಟಕ

karnataka

ETV Bharat / bharat

ಜೇಟ್ಲಿ ಅಂತ್ಯಕ್ರಿಯೆಯಲ್ಲಿ ಕಳ್ಳನ ಕರಾಮತ್ತು... ಹನ್ನೊಂದು ಮಂದಿಯ ಮೊಬೈಲ್​ ಕಳ್ಳತನ..! - ಪತಂಜಲಿ ಸಂಸ್ಥೆಯ ವಕ್ತಾರ ಎಸ್​.ಕೆ.ತಿಜರಾವಾಲ

ಬಿಜೆಪಿ ಸಂಸದ ಬಬುಲ್ ಸುಪ್ರಿಯೋ ಸೇರಿದಂತೆ ಹನ್ನೊಂದು ಮಂದಿಯ ಮೊಬೈಲ್​​ಗಳು ಜೇಟ್ಲಿ ಅಂತ್ಯ ಸಂಸ್ಕಾರದ ವೇಳೆ ಕಳ್ಳತನವಾಗಿದ್ದು, ಈ ವಿಚಾರವನ್ನು ಪತಂಜಲಿ ಸಂಸ್ಥೆಯ ವಕ್ತಾರ ಎಸ್​.ಕೆ.ತಿಜರಾವಾಲ ಟ್ವಿಟರ್​​ನಲ್ಲಿ ಹೇಳಿಕೊಂಡಿದ್ದಾರೆ.

ಜೇಟ್ಲಿ ಅಂತ್ಯಕ್ರಿಯೆ

By

Published : Aug 27, 2019, 8:56 AM IST

ನವದೆಹಲಿ:ಭಾನುವಾರ ನಡೆದ ಮಾಜಿ ಕೇಂದ್ರ ಸಚಿವ ಅರುಣ್ ಜೇಟ್ಲಿ ಅಂತ್ಯ ಸಂಸ್ಕಾರದಲ್ಲಿ ಕಳ್ಳ ತನ್ನ ಕೈಚಳಕ ತೋರಿಸಿ ಹಲವು ನಾಯಕರ ಮೊಬೈಲ್​​ಗಳನ್ನು ಎಗರಿಸಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.

ಬಿಜೆಪಿ ಸಂಸದ ಬಬುಲ್ ಸುಪ್ರಿಯೋ ಸೇರಿದಂತೆ ಹನ್ನೊಂದು ಮಂದಿಯ ಮೊಬೈಲ್​​ಗಳು ಜೇಟ್ಲಿ ಅಂತ್ಯ ಸಂಸ್ಕಾರದ ವೇಳೆ ಕಳ್ಳತನವಾಗಿದ್ದು, ಈ ವಿಚಾರವನ್ನು ಪತಂಜಲಿ ಸಂಸ್ಥೆಯ ವಕ್ತಾರ ಎಸ್​.ಕೆ.ತಿಜರಾವಾಲ ಟ್ವಿಟರ್​​ನಲ್ಲಿ ಹೇಳಿಕೊಂಡಿದ್ದಾರೆ.

ಮೊಬೈಲ್​ ಕಳ್ಳತನದ ಬಗ್ಗೆ ಬರೆದುಕೊಂಡಿರುವ ತಿಜರಾವಾಲ, ತಮ್ಮ ಮೊಬೈಲ್ ಸೇರಿದಂತೆ ಹನ್ನೊಂದು ಮಂದಿಯ ಮೊಬೈಲ್​ಗಳು ಕಳ್ಳತನವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ಜೇಟ್ಲಿಯವರಿಗೆ ಅಂತಿಮ ವಿದಾಯ ಹೇಳುವ ವೇಳೆ ಮೊಬೈಲ್​ಗಳು ಕಳ್ಳತನವಾಗಿದೆ ಎಂದಿರುವ ತಿಜರಾವಾಲ, ಟ್ವೀಟ್​ ಅನ್ನು ಗೃಹ ಸಚಿವ ಅಮಿತ್ ಶಾ ಹಾಗೂ ದೆಹಲಿ ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ.

ಇನ್ನು ತಿಜರಾವಾಲ ಟ್ವೀಟ್​​ಗೆ ಪ್ರತಿಕ್ರಿಯಿಸಿರುವ ಸಂಸದ ಬಬುಲ್​ ಸುಪ್ರಿಯೋ, ಇದು ಕಳ್ಳತನ ಅಲ್ಲ ಬದಲಾಗಿ ಅತ್ಯಂತ ಚಾಣಾಕ್ಷವಾಗಿ ಮಾಡಿದ ಪಿಕ್​ಪಾಕೆಟ್ ಎಂದಿದ್ದಾರೆ. ನನ್ನ ಮೊಬೈಲ್​ ಅನ್ನು ಎಗರಿಸುವ ವೇಳೆ ನಾನು ಆತನ ಕೈಯನ್ನು ಹಿಡಿಯುವ ಪ್ರಯತ್ನ ಮಾಡಿ ಸೋತೆ ಎಂದು ಬಬುಲ್ ಸುಪ್ರಿಯೋ ಟ್ವೀಟ್ ಮಾಡಿದ್ದಾರೆ.

ABOUT THE AUTHOR

...view details