ಹೈದರಾಬಾದ್:ಕಳ್ಳತನ ಮಾಡುವ ಉದ್ದೇಶದಿಂದ ಬರುವವರು ತಮಗೆ ಸಿಕ್ಕ ಅಲ್ಪ ಸಮಯದಲ್ಲೇ ಕೈಗೆ ಸಿಕ್ಕಿದ್ದನ್ನು ತೆಗೆದುಕೊಂಡು ಹೋಗಿ ಬಿಡ್ತಾರೆ. ಆದರೆ ಇಲ್ಲೊಬ್ಬ ವಿಚಿತ್ರ ಕಳ್ಳ ದೇವರ ಗುಡಿಗೆ ಕಳ್ಳತನ ಮಾಡಲು ಬಂದು ದೇವರ ಬಳಿ ಕ್ಷಮೆಯಾಚನೆ ಮಾಡಿ, ತದನಂತರ ವಿಗ್ರಹದ ಕಿರೀಟ ಎಗರಿಸಿರುವ ಘಟನೆ ನಡೆದಿದೆ.
ದಯವಿಟ್ಟು ನನ್ನನ್ನು ಕ್ಷಮಿಸಿ ಬಿಡು ದೇವರೇ... ಕ್ಷಮೆ ಕೋರಿ ವಿಗ್ರಹದ ಕಿರೀಟ ಕದ್ದ ವಿಚಿತ್ರ ಕಳ್ಳ! - ದೇವರ ವಿಗ್ರಹದ ಕಿರೀಟ ಕಳ್ಳತನ
ದೇವರ ಕಿರೀಟ ಕದಿಯಲು ಬಂದ ಕಳ್ಳನೋರ್ವ ಕಳ್ಳತನ ಮಾಡುವುದಕ್ಕೂ ಮುಂಚಿತವಾಗಿ ದೇವರ ಬಳಿ ಕ್ಷಮೆ ಕೇಳಿರುವ ವಿಚಿತ್ರ ಘಟನೆ ನಡೆದಿದೆ.

ಹೈದರಾಬಾದ್ನ ಸಿಕಂದರಾಬಾದ್ನಲ್ಲಿರುವ ದೇವಸ್ಥಾನದಲ್ಲಿ ನಡೆದ ಈ ಘಟನೆಯ ದೃಶ್ಯಾವಳಿ ಇದೀಗ ಸಿಸಿಟಿವಿಯಲ್ಲಿ ಸೆರೆಯಾಗಿದೆ. ದೇವರ ವಿಗ್ರಹದ ತಲೆಗೆ ಹಾಕಲಾಗಿದ್ದ ಕಿರೀಟ ಕಳ್ಳತನ ಮಾಡಲು ಮುಂದಾಗಿರುವ ವ್ಯಕ್ತಿ, ದೇಗುಲದೊಳಗೆ ಹೋಗುವುದಕ್ಕೂ ಮುಂಚಿತವಾಗಿ ಹೊರಗಡೆ ಚಪ್ಪಲಿ ಕಳೆದಿದ್ದಾನೆ. ತದನಂತರ ಒಳಗೆ ಬಂದು ದೇವರ ಮುಂದೆ ನಿಂತು ಎರಡು ಕೈಗಳಿಂದ ಕಿವಿ ಹಿಡಿದುಕೊಂಡು ಕ್ಷಮೆಯಾಚನೆ ಮಾಡಿದ್ದು, ಇದಾದ ಬಳಿಕ ವಿಗ್ರಹದ ಕಿರೀಟ ಕಳ್ಳತನ ಮಾಡಿ ಪರಾರಿಯಾಗಿದ್ದಾನೆ.
ಈಗಾಗಲೇ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು, ಸಿಸಿಟಿವಿ ದೃಶ್ಯಾವಳಿ ಆಧರಿಸಿ ವ್ಯಕ್ತಿಗಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ.